ಕಾಲಿಗೆ ಕಪ್ಪು ದಾರ ಕಟ್ಟುವುದ್ದೇಕೆ ಗೊತ್ತಾ? – ಶನಿದೇವರ ಆಶೀರ್ವಾದ ಬೇಕಾದ್ರೆ ನೀವು ಹೀಗೆ ಮಾಡಿ

ಕಾಲಿಗೆ ಕಪ್ಪು ದಾರ ಕಟ್ಟುವುದ್ದೇಕೆ ಗೊತ್ತಾ? – ಶನಿದೇವರ ಆಶೀರ್ವಾದ ಬೇಕಾದ್ರೆ  ನೀವು ಹೀಗೆ ಮಾಡಿ

ಸಾಕಷ್ಟು ಜನ ಕಾಲಿಗೆ ಕಪ್ಪು ದಾರವನ್ನ ಕಟ್ಟುತ್ತಾರೆ. ಆದ್ರೆ ಸಾಕಷ್ಟು ಜನಕ್ಕೆ ಯಾಕೆ  ಅಂತ ಗೊತ್ತಿರಲಿಲ್ಲ. ನೋಡೋಣ.   ಕಪ್ಪು ದಾರ ಕಟ್ಟುವುದರಿಂದ ಶನಿದೇವರ ಆಶೀರ್ವಾದ ಸದಾ ನಿಮ್ಮ ಮೇಲಿರುತ್ತದೆ. ಇದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ. ನಕಾರಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ. ಜೊತೆಗೆ ಜೀವನದಲ್ಲಿ ಸ್ಥಿರತೆ ಮತ್ತು ಶಾಂತಿ ದೊರೆಯುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಕಪ್ಪು ದಾರ ಧರಿಸಲು ಶುಭ ದಿನ ಮತ್ತು ವಿಧಾನ:

  • ಶನಿವಾರ ಕಪ್ಪು ದಾರವನ್ನು ಧರಿಸಲು ಅತ್ಯಂತ ಶುಭ ದಿನವೆಂದು ಪರಿಗಣಿಸಲಾಗಿದೆ.
  • ಮಹಿಳೆಯರು ಎಡಗಾಲಿಗೆ ಕಪ್ಪು ದಾರವನ್ನು ಕಟ್ಟುವುದು ವಿಶೇಷ ಫಲ ನೀಡುತ್ತದೆ.

ಕಪ್ಪು ದಾರ ಧರಿಸುವ ವಿಧಾನ:

  • ಶನಿವಾರ ಬೆಳಿಗ್ಗೆ ಸ್ನಾನ ಮಾಡಿ ಶುಚಿಯಾಗಿರಬೇಕು.
  • ಶನಿ ದೇವಾಲಯಕ್ಕೆ ತೆರಳಿ
  • ಶನಿದೇವರಿಗೆ ಎಳ್ಳೆಣ್ಣೆ ಅರ್ಪಿಸಿ
  • ಶನಿ ಮಂತ್ರವನ್ನು ಪಠಿಸಿ
  • ನಂತರ ಕಪ್ಪು ದಾರವನ್ನು ಎಡಗಾಲಿಗೆ ಕಟ್ಟಬೇಕು

  • ಕಪ್ಪು ದಾರ ಧರಿಸುವುದರಿಂದ ದೊರೆಯುವ ಲಾಭಗಳು

    • ವ್ಯಾಪಾರ ಅಥವಾ ಉದ್ಯೋಗದಲ್ಲಿ  ಆರ್ಥಿಕ ಸಮಸ್ಯೆಯಿಂದ ಮುಕ್ತಿ
    • ಸಾಲ, ನಷ್ಟ, ಅಡೆತಡೆಗಳಿಂದ ಬಳಲುತ್ತಿದ್ದರೆ ಪರಿಹಾರ
    • ಕಂಕಣ ಬಲ ಕೂಡಿಬರಲಿದೆ
    • ವೈವಾಹಿಕ ಜೀವನದಲ್ಲಿ ಸಂತೋಷ ಸಮೃದ್ಧಿ
    • ಜಾತಕದಲ್ಲಿ ಶನಿ, ರಾಹು–ಕೇತು ದೋಷಗಳಿಂದ ಮುಕ್ತಿ

Kishor KV