ಕಿಲ್ಲರ್ ಬ್ಲಾಕ್ ಮಾಂಬಾ! ಕಚ್ಚಿದ್ರೆ ಉಳಿಯೋ ಚಾನ್ಸೇ ಇಲ್ಲ!
ಉಸಿರು ನಿಲ್ಲಿಸೋ ಡೇಂಜರ್ ಸ್ನೇಕ್

ಬಸವಣ್ಣನ ಒಂದು ಮಾತಿಗೆ ಕಲ್ಲು ನಾಗರ ಕಂಡರೆ ಹಾಲನೆರೆ ಎನ್ನುವರು, ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯಾ ಎಂದಿದ್ದಾರೆ.. ಕಾವು ಕಂಡ್ರೆ ಪ್ರತಿಯೊಬ್ಬರಿಗೂ ಭಯ..ಅವುಗಳು ಕಚ್ಚಿದ್ರೆ ಕೆಲವರು ವಿಷ ಏರುವ ಮುಂಚೆಯೇ ಭಯಕ್ಕೆ ಸತ್ತು ಹೋಗ್ತಾರೆ. ಪ್ರತಿ ವರ್ಷ ಭಾರತದಲ್ಲಿ ಹಾವು ಕಡಿತದಿಂದ ಸಾಯೋರ ಸಂಖ್ಯೆ 58 ರಿಂದ 60 ಸಾವಿರ ಇದೆ. ಜಾಗತಿಕ ಮಟ್ಟದಲ್ಲಿ ಇದರ ಸಂಖ್ಯೆ 1 ಲಕ್ಷಕ್ಕೂ ಹೆಚ್ಚಿದೆ. ನಿಮ್ಗೆ ಗೊತ್ತಿರಲಿ ಭಾರತದಲ್ಲಿ ಕಾಳಿಂದ ಹೆಚ್ಚು ವಿಷ ಸರ್ಪ ಆಗಿದ್ರು ಇದ್ರಿಂದ ಕಚ್ಚಿಸಿಕೊಂಡವರ ಸಂಖ್ಯೆ ತುಂಬಾ ಕಮ್ಮಿ, ಆದ್ರೆ ನಾಗರ ಹಾವು, ಕೊಳಕು ಮಂಡಲ, ಕಟ್ಟುಹಾವಿಗೆ ಹೆಚ್ಚು ಜನ ಸಾಯ್ತಾರೆ. ಹಾವು ಕಚ್ಚಿದ್ರೆ ಔಷಧಿ ಸಿಗುತ್ತೆ. ಆದ್ರೆ ಕೆಲ ಕಡೆ ಔಷಧಿ ಸಿಗದೇ ಸತ್ತವರ ಸಂಖ್ಯೆ ಹೆಚ್ಚಿದೆ. ನಾನು ಇವತ್ತು ಹೇಳುವುದ್ದಕ್ಕೆ ಹೊರಟಿರುವುದು ಜಗತ್ತಿನ ಭಯಾನಕ ವಿಷ ಸರ್ಪದ ಬಗ್ಗೆ..
ಇದ್ರ ಹೆಸರು ಬ್ಲಾಕ್ ಮಾಂಬಾ.. ಇದು ಕಚ್ಚಿದ್ರೆ ಜಸ್ಟ್ ಇಪ್ಪತ್ತೇ ಇಪ್ಪತ್ತು ನಿಮಿಷ. ಕಲ್ಲಾಸ್ ಆಗ್ತಾನೆ ಮನುಷ್ಯ.. ಇದು ದಕ್ಷಿಣ ಆಫ್ರೀಕಾದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತೆ.. ಕಾಳಿಂಗ ಸರ್ಪ ನಂತ್ರ ಇದೇ ಅತೀ ಉದ್ದದ ವಿಷ ಸರ್ಪ.. ಈ ಪ್ರಬೇಧದಲ್ಲಿ ನಾಲ್ಕು ಹಾವುಗಳಿವೆ. ಇದ್ರಲ್ಲಿ 3 ಹಸಿರ ಬಣ್ಣದ ಕಂಡ್ರೆ, ಇನ್ನೂಳಿದ ಒಂದು ಪ್ರಭೇದಕ್ಕೆ ಬ್ಲಾಕ್ ಮಾಂಬಾ ಅಂತ ಕರೆಯುತ್ತಾರೆ. ನಿಮ್ಗೆ ಅನ್ಸುತ್ತೆ ಈ ಹಾವು ನೋಡುವುದ್ದಕ್ಕೆ ಬೂದು ಬಣ್ಣ ಇದೆ ಯಾಕೆ ಬ್ಲಾಕ್ ಮಾಂಬಾ ಅಂತ ಕರೆಯುತ್ತಾರೆ ಅನ್ನೋದು.. ಬಟ್ ಇದ್ದಕ್ಕೆ ಇದ್ರ ಮೈ ಬಣ್ಣ ನೋಡಿ ಬ್ಲಾಕ್ ಮಾಂಬಾ ಅಂತ ಕರೆಯೋದಲ್ಲ.. ಇದ್ರ ಬಾಯಿ ಬಣ್ಣ ಬ್ಲಾಕ್ ಇರುತ್ತೆ.. ಹೀಗಾಗಿ ಇದ್ದಕ್ಕೆ ಬ್ಲಾಕ್ ಮಾಂಬಾ ಅಂತ ಕರೆಯುತ್ತಾರೆ. ಇದು ಸುಮಾರು ನಾಲ್ಕು ಮೀಟರ್ ಅಷ್ಟು ಉದ್ದ ಬೆಳೆಯುತ್ತೆ. ಹಾಗಂತ ಇದು ತುಂಬಾ ತೂಕ ಇರಲ್ಲ.. ಒಂದುಮುಕ್ಕಾಲು ಕೆಜಿಯಷ್ಟು ತೂಕ ಇರುತ್ತೆ.. ತೆಳ್ಳೆಗೆ ಇದ್ದರು ಇದ್ರ ಪವರ್ ಮಾತ್ರ ಸೂಪರ್ ಆಗಿರುತ್ತೆ.. ನಮಲ್ಲಿ ಹೇಗ್ ನಾಗರ ಹಾವು ಕಾಣುತ್ತೋ ಹಾಗೇ ಆಫ್ರೀಕಾದಲ್ಲಿ ಈ ಕಾವು ಎಲ್ಲಾ ಕಡೆ ಕಾಣುತ್ತೆ. ಆಪ್ರೀಕಾದ 24 ದೇಶದಲ್ಲಿ ಈ ಹಾವು ಕಾಣ ಸಿಗುತ್ತೆ.. ಇವುಗಳು ಬಂಡೆಗಳಲ್ಲಿ, ಹುಲ್ಲು ಗಾವಲಿನಲ್ಲಿ ಈ ಕಾವುಗಳು ವಾಸ ಮಾಡ್ತಾವೆ. ಇಲ್ಲಿ ಮಾಂಬಾ ಪ್ರತಿ ಗಂಟೆೆಗೆ 20 ಕಿಲೋ ಮೀಟರ್ ವೇಗದಲ್ಲಿ ಹೋಗುತ್ತೆ.
ಹೀಗಾಗಿ ಈ ಹಾವನ್ನ ಭೂಮಿ ಮೇಲೆ ಅತೀ ವೇಗದಲ್ಲಿ ಚಲಿಸೋ ವಿಷಕಾರಿ ಹಾವು ಅಂತ ಕರೆಯುತ್ತಾರೆ. ಈ ಹಾವು ಕಚ್ಚಿದ್ರೆ 20 ನಿಮಿಷದೊಳಗೆ ಆ್ಯಂಟಿವಿನಂನ್ನ ಕೊಡಬೇಕು. ಆದ್ರೆ ಆಫ್ರೀಕಾದಲ್ಲಿ ಈ ಔಷಧಿ ಸಿಗೋದು ತುಂಬಾ ಕಷ್ಟ.. ಹೀಗಾಗಿ ಈ ಹಾವಿನ ಕಡಿತಕ್ಕೆ ಇಲ್ಲಿ ಹೆಚ್ಚಾಗಿ ಸಾಯ್ತಾರೆ. ಇದ್ರ ವಿಷಕ್ಕೆ ಆಫ್ರೀಕಾದಲ್ಲಿ ಸಿಂಹಗಳು ಬಲಿಯಾಗ್ತಾವೆ. ಇನ್ನೂ ಗಂಡು ಮಾಂಬಾಗಳ ನಡುವೆ ಹೆಣ್ಣು ಹಾವಿಗಾಗಿ ಫೈಟ್ ನಡೆಯುತ್ತೆ. ಎರಡು ಗಂಡು ಹಾವುಗಳು ಫೈಟ್ ಮಾಡಿಕೊಂಡ್ರು ಕಚ್ಚಿಕೊಳ್ಳುವುದಿಲ್ಲ.. ಕಚ್ಚಿಕೊಂಡ್ರೆ ಅವುಗಳು ಸುತ್ತು ಹೋಗ್ತಾವೆ.. ಹಾಗಾಗಿ ಸುತ್ತಾಡಿಕೊಂಡೇ ಜಗಳವನ್ನ ಮಾಡ್ತಾವೆ. ಇನ್ನೂ ಇವುಗಳಿಗೂ ಕೂಡ ಶತ್ರು ಕಾಟ ಇದೆ. ಹದ್ದುಗಳು, ಮುಂಗಸಿಗಳು, ನೈಲ್ ಮೊಸಳೆಗಳು ಈ ಹಾವಿನ ಮೇಲೆ ದಾಳಿ ಮಾಡಿ, ಬ್ಲಾಕ್ ಮಾಂಬಾವನ್ನ ತನ್ನ ಆಹಾರವನ್ನಾಗಿ ಮಾಡಿಕೊಳ್ಳುತ್ತವೆ. ಇವುಗಳು ಇದ್ದಕ್ಕಿಂದ್ದ ಹಾಗೇ ಮನುಷ್ಯರ ಮೇಲೆ ದಾಳಿ ಮಾಡಲ್ಲ.. ಮನುಷ್ಯರೇ ಇವುಗಳ ತಂಟೆಗೆ ಹೋದ್ರೆ ಅಟ್ಯಾಕ್ ಮಾಡ್ತಾವೆ.. ನಮಲ್ಲಿ ನಾಗರ ಹಾವುಗಳು ಕೂಡ ಹಾಗೇ ಅಲ್ವಾ.. ಅವುಗಳು ಮನುಷ್ಯರನ್ನ ಕಂಡ್ರೆ ದೂರ ಹೋಗ್ತವೆ.. ಆದ್ರ ಮನುಷ್ಯರೇ ಅದ್ದನ್ನ ಹಿಡಿದು ನಾನು ಶಿವ ಅಂತ ಮೈಮೇಲೆ ಹಾಕಿಕೊಂಡು ಕಚ್ಚಿಸಿಕೊಂಡು ಸಾಯ್ತಾರೆ.. ಹಾಗೇ ಈ ಹಾವು ಕೂಡ ಯಾಕ ತಂಟೆೆೆಗೆ ಹೋಗಲ್ಲ, ತನ್ನ ತಂಟೆದೆ ಬಂದವರನ್ನ ಬಿಡಲ್ಲ.. ನೋಡಿ ನಾವು ನಾಗರ ಹಾವು, ಕಾಳಿಂದ ಸರ್ಪದ ವಿಷವೇ ಭಯಾನಕ ಅಂತ ಹೇಳ್ತಿವಿ.. ಬಟ್ ಈ ಜಗತ್ತಿನಲ್ಲಿ ಅದ್ದಕ್ಕಿಂತಲೂ ಹೆಚ್ಚಿಗೆ ವಿಷ ಇರೋ ಹಾವು ಇದೆ ಅನ್ನೋದ್ದಕ್ಕೆ ಈ ಬ್ಲಾಕ್ ಮಾಂಬಾನೇ ಸಾಕ್ಷಿ. .

ನೋಡಿರಿ

