ಮಾಟಮಂತ್ರಕ್ಕೆ ಈ ಹಳ್ಳಿಯೇ ರಾಜಧಾನಿ! – ಕಾಂತಾರದಂತೆ ಪ್ರಾಣಿಗಳ ಕಂಟ್ರೋಲ್!
ಇದು ದಂತೆಕಥೆ ಅಲ್ಲ.. ನಿಜ ಕಥೆ!

ನಮ್ಮ ದೇಶದಲ್ಲಿ ದೈವ ಶಕ್ತಿ ಎಷ್ಟು ಇದ್ಯೋ ಅಷ್ಟೇ ದುಷ್ಟ ಶಕ್ತಿ ಕೂಡ ಉಂಟು. ಒಂದೊಂದು ಹಳ್ಳಿಯಲ್ಲಿ ನಮಗೆ ಗೊತ್ತಿಲ್ಲದ ಕಾಣದ ರಹಸ್ಯಗಳು ಅಡಗಿವೆ. ಮನುಷ್ಯನ ಕಲ್ಪನೆಗೂ ಮೀರಿದ ಬೇರೊಂದು ಲೋಕವೇ ಇದೆ.. ಅದರಂತೆ ಈ ಹಳ್ಳಿ ಕೂಡ.
ಮಾಯಾಂಗ್.. ಈ ಹೆಸರೇ ಒಂದು ರೀತಿಯಲ್ಲಿ ವಿಚಿತ್ರ ಅನ್ಸುತ್ತೆ ಅಲ್ವಾ.. ಇದು ಅಸ್ಸಾಂನ ಪ್ರಶಾಂತವಾದ ಕಾಮರೂಪ್ ಜಿಲ್ಲೆಯ ಗುಪ್ತ ವಲಯದಲ್ಲಿದೆ.. ನೂರಾರು ವರ್ಷಗಳಿಂದ ರಹಸ್ಯ ಮತ್ತು ಅತೀಂದ್ರಿಯ ವಿದ್ಯೆಗಳನ್ನು ರಕ್ಷಿಸಿಕೊಂಡು ಬಂದಿರುವ ಗ್ರಾಮ ಇದಾಗಿದೆ.. ಇಡೀ ಭಾರತದಲ್ಲಿ ಈ ಸ್ಥಳವನ್ನು ಭಾರತದ ಮಾಟಮಂತ್ರದ ರಾಜಧಾನಿ ಎಂದು ಗುರುತಿಸಲಾಗಿದೆ. ಮಾಯಾಂಗ್ ಎಂಬ ಹೆಸರು “ಮಾಯೆ” ಅನ್ನೋ ಅರ್ಥವನ್ನ ನೀಡುತ್ತೆ..
ಈ ಗ್ರಾಮದ ಸುತ್ತ ಇರುವ ಕಥೆಗಳು ಕೇವಲ ದಂತಕಥೆಗಳಲ್ಲ, ಅವು ನಂಬಿಕೆ, ನಿಜ.. ಸ್ಥಳೀಯರ ಪ್ರಕಾರ, ಇಲ್ಲಿನ ಮಾಂತ್ರಿಕರು ಕಾಲದ ಗಡಿಯನ್ನೂ ಮೀರಿ ಪ್ರಯಾಣಿಸಬಲ್ಲರು, ಮಾಯಾ ಆಗೋ ಬಲ್ಲರು.. ಕಾಂತಾರ ಸಿನಿಮಾದಲ್ಲಿ ತೋರಿಸಿದಂತೆ ಪ್ರಾಣಿಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಳ್ಳುತ್ತಾರಂತೆ. ಇಲ್ಲಿನ ಮಾಟಮಂತ್ರವು ಕೇವಲ ಕಲ್ಪನೆಯಲ್ಲ, ಅದೊಂದು ನಿಗೂಢ.. ಅನೇಕ ಮಾಂತ್ರಿಕರು ತಮ್ಮ ಹಿಂದಿನ ತಲೆಮಾರುಗಳಿಂದ ಈ ಅತೀಂದ್ರಿಯ ಶಕ್ತಿಗಳನ್ನು ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತದೆ. ಇಲ್ಲಿನ ಕೆಲವು ಕುಟುಂಬಗಳ ಮನೆಗಳಲ್ಲಿ ಅಕ್ಷರಶಃ ಪಾರಂಪರಿಕ ಮಾಟಮಂತ್ರದ ತಾಳೆಗರಿಗಳ ಸಂಗ್ರಹವಿದೆ.
ಮಾಯಾಂಗ್ ತನ್ನ ಭಯಾನಕ ಕಥೆಗಳಿಂದಲೂ ಪ್ರಸಿದ್ಧವಾಗಿದೆ. ಇಲ್ಲಿನ ಮಾಂತ್ರಿಕರು ಅದ್ಭುತ ಶಕ್ತಿಗಳನ್ನು ಹೊಂದಿದ್ದಾರೆ ಎಂದು ಹೇಳಲಾಗುತ್ತದೆ. ಉದಾಹರಣೆಗೆ, ಇಲ್ಲಿಂದ ಜನರು ಹಠಾತ್ ಆಗಿ ಕಣ್ಮರೆಯಾದ ಸಾಕಷ್ಟು ಉದಾಹರಣೆಗಳು ಇವೆ. ಸ್ಥಳೀಯ ದಂತಕಥೆಯ ಪ್ರಕಾರ, ಹರಗೌರಿ ರಾಯ್ ಎಂಬ ಮಾಂತ್ರಿಕನು ತನ್ನ ಮಂತ್ರಗಳ ಬಲದಿಂದ ಅಹೋಮ್ ರಾಜ ರವಿ ಸಿಂಹನ ಸೈನಿಕರನ್ನು ಕಲ್ಲಿನ ಬಂಡೆಗಳಾಗಿ ಪರಿವರ್ತಿಸಿದ್ದನಂತೆ. ಇದು ನಿಜವೋ ಇಲ್ಲವೋ ಎಂಬುದು ಇಂದಿಗೂ ರಹಸ್ಯವಾಗಿದೆ.

ಆದರೆ ಮಾಯಾಂಗ್ ಕೇವಲ ಭಯಾನಕ ಕಥೆಗಳಿಗೆ ಸೀಮಿತವಾಗಿಲ್ಲ. ಇಲ್ಲಿನ ಮಾಟಮಂತ್ರವನ್ನು ಒಳ್ಳೆಯ ಉದ್ದೇಶಗಳಿಗೂ ಬಳಸಲಾಗುತ್ತದೆ. ಈ ಸ್ಥಳಕ್ಕೆ ರೋಗಪೀಡಿತ ಜನರು ಬರುತ್ತಾರೆ, ಮಾಂತ್ರಿಕರು ಕೇವಲ ತಮ್ಮ ಮಂತ್ರಗಳ ಬಲದಿಂದ ಕಾಯಿಲೆಗಳನ್ನು ಗುಣಪಡಿಸುತ್ತಾರೆ ಎಂದು ಹೇಳಲಾಗುತ್ತದೆ. ಮಂತ್ರಗಳನ್ನು ಪಠಿಸುವಾಗ, ತಾಮ್ರದ ಬಟ್ಟಲುಗಳು ಒಬ್ಬ ರೋಗಿಯ ದೇಹಕ್ಕೆ ಅಂಟಿಕೊಳ್ಳುತ್ತವೆ. ಆ ಬಟ್ಟಲುಗಳು ರೋಗದ ಮೂಲವನ್ನು ಕಂಡುಕೊಳ್ಳುವವರೆಗೂ ಆ ವ್ಯಕ್ತಿಯನ್ನು ಬಿಡಲ್ಲ ಎಂದು ಹೇಳಲಾಗುತ್ತದೆ.
ಇಂದು, ಈ ಗ್ರಾಮದಲ್ಲಿ ಮಾಟಮಂತ್ರದ ವಸ್ತುಸಂಗ್ರಹಾಲಯವನ್ನು ಸ್ಥಾಪಿಸಲಾಗಿದೆ. ಇಲ್ಲಿ ಪ್ರಾಚೀನ ಹಸ್ತಪ್ರತಿಗಳು ಮತ್ತು ಮಾಟಮಂತ್ರಕ್ಕೆ ಬಳಸುವ ವಸ್ತುಗಳನ್ನು ನೋಡಬಹುದು. ಆದರೂ, ಮಾಯಾಂಗ್ ಇಂದಿಗೂ ತನ್ನ ರಹಸ್ಯವನ್ನು ಸಂಪೂರ್ಣವಾಗಿ ಬಿಟ್ಟುಕೊಟ್ಟಿಲ್ಲ. ಅಲ್ಲಿನ ಪ್ರತಿಯೊಂದು ಗಲ್ಲಿ, ಪ್ರತಿಯೊಂದು ಮರ ಮತ್ತು ಪ್ರತಿಯೊಂದು ಕಲ್ಲಿನಲ್ಲಿ ಒಂದು ಕಥೆ ಇದೆ.

ನೋಡಿರಿ

