ಏನಿದು.. ಸೂರ್ಯನನ್ನೇ ನುಂಗುವ ಕಪ್ಪು ರಂದ್ರಗಳು? – ಬಾಹ್ಯಾಕಾಶದ ನಿಗೂಢ ರಹಸ್ಯ..!
ಬ್ಲಾಕ್ ಹೋಲ್ಸ್ ಕನ್ನಡದಲ್ಲಿ ಕಪ್ಪು ಕುಳಿಗಳು ಅಂತಾರೆ.. ಇದೊಂದು ಬಾಹ್ಯಾಕಾಶದ ನಿಗೂಢ ರಹಸ್ಯ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಹೊಸ ವರುಷದ ಮೊದಲು ದಿನದಂದು ಖಗೋಳ ವಿಜ್ಞಾನದ ವಿಸ್ಮಯ ಕಪ್ಪು ಕುಳಿಗಳ ಬಗ್ಗೆ ಅಧ್ಯಯನ ಮಾಡಲು XPoSat ಮಿಷನ್ ಪ್ರಾರಂಭಿಸುವ ಮೂಲಕ ಹೊಸ ವರುಷವನ್ನ ಸ್ವಾಗತಿಸಿತ್ತು. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ಉಡಾವಣೆಗೊಂಡಿದ್ದ XPoSat ಮಿಷನ್ ಬ್ಲಾಕ್ ಹೋಲ್ಸ್ ಗಳ ರಹಸ್ಯಗಳನ್ನ ತಿಳಿದುಕೊಳ್ಳಲು ಅಮೇರಿಕಾದ ನಂತರ ಉಡಾವಣೆ ಗೊಳಿಸಿದ ವಿಶ್ವದ ಎರಡನೇ ದೇಶ ಅನ್ನುವ ಖ್ಯಾತಿಗೂ ಕೂಡಾ ಭಾರತ ಪಾತ್ರವಾಯಿತು. ಜನವರಿ ಒಂದರಂದು PSLV ಲಾಂಚಿಂಗ್ ವೆಹಿಕಲ್ ಮೂಲಕ XPoSat ಉಪಗ್ರಹವನ್ನ ಭೂಮಿಯ ಕೆಲ ಕಕ್ಷಗೆ ಯಶಸ್ವಿಯಾಗಿ ಸೇರಿಸಿದ್ದ ಇಸ್ರೋ ಮುಂದಿನ ದಿನಗಳಲ್ಲಿ ಕಪ್ಪು ಕುಳಿಗಳು, ನ್ಯೂಟ್ರಾನ್ ನಕ್ಷತ್ರಗಳು ಸೇರಿದಂತೆ ವಿವಿಧ ಆಕಾಶಕಾಯಗಳ ಬಗ್ಗೆ ಹೆಚ್ಚಿನ ಅಧ್ಯಯನ ಮಾಡಲಿದೆ. ಬಾಹ್ಯಾಕಾಶದ ರೇಸ್ ನಲ್ಲಿ ಅದ್ಬುತವಾಗಿ ಓಡುತ್ತಿರುವ ಇಸ್ರೋ ದ ಗುರಿ ಕಪ್ಪು ರಂದ್ರಗಳ ಕಡೆ ಯಾಕೆ..ಅಷ್ಟಕ್ಕೂ ಏನಿದು ಬ್ಲಾಕ್ ಹೋಲ್ಸ್, ಸೂರ್ಯನನ್ನೇ ನುಂಗುವಷ್ಟು ತಾಕತ್ತಿರುವ ಕಪ್ಪು ರಂದ್ರಗಳು ಹುಟ್ಟಿದಾದರೂ ಹೇಗೆ..ಖಗೋಳ ಲೋಕದಲ್ಲಿ ಅತೀ ಹೆಚ್ಚು ಶಕ್ತಿಶಾಲಿಯಾಗಿರುವ ಈ ಕಪ್ಪು ರಂದ್ರಗಳ ಕುರಿತಾದ ಮಹತ್ವದ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಚಂದ್ರನತ್ತ ಜನರನ್ನ ಕಳುಹಿಸಲು ಮತ್ತೊಂದು ಹೆಜ್ಜೆ ಇಟ್ಟ ಚೀನಾ – ಗಗನಯಾತ್ರಿಗಳೊಂದಿಗೆ ಬಾಹ್ಯಾಕಾಶಕ್ಕೆ ಹಾರಿದ ಮಿಷನ್
ಕಪ್ಪು ಕುಳಿ ತನ್ನ ಸುತ್ತಲಿನ ಎಲ್ಲವನ್ನೂ ತನ್ನೆಡೆಗೆ ಸೆಳೆಯುತ್ತೆ. ಬಾಹ್ಯಾಕಾಶದ ಯಾವುದೇ ಗ್ರಹವೇ ಆಗಿರಲಿ ಒಂದೊಮ್ಮೆ ಕಪ್ಪು ಕುಳಿಗಳ ಸುತ್ತಾ ಬಿದ್ದಿದ್ದೇ ಆದಲ್ಲಿ ಮತ್ತೊಮ್ಮೆ ಅವುಗಳು ಹಿಂತಿರುಗಿ ಬರೋ ಮಾತೇ ಇಲ್ಲ. ಯಾಕಂದ್ರೆ ಕಪ್ಪು ಕುಳಿಗಳು ಅವುಗಳನ್ನ ನುಂಗಿ ತನ್ನೋಳಗೆ ನುಂಗಿ ಬಿಡುತ್ತವೆ. ಅಂತಹ ಸೂರ್ಯನನ್ನೇ ನುಂಗುವಂತಹ ಶಕ್ತಿಶಾಲಿ ಬ್ಲಾಕ್ ಹೋಲ್ಸ್ ಹೊಂದಿದೆ. ಬ್ಲಾಕ್ ಹೋಲ್ಸ್, ಬಾಹ್ಯಾಕಾಶದಲ್ಲಿ ಕಂಡು ಬರುವ ಕಪ್ಪು ರಂದ್ರಗಳು ಕೇವಲ ಒಂದು ಎರಡು ಅಲ್ಲಾ.. ಅಲ್ಲಿ ಅಸಂಖ್ಯಾತ ಕಪ್ಪು ಕುಳಿಗಳು ಕಂಡು ಬರುತ್ತವೆ. ಮಿಲ್ಕ್ಯ್ ವೇ ಗ್ಯಾಲಕ್ಸಿ ಯಲ್ಲಿ 100 ಮಿಲಿಯನ್ ಕ್ಕಿಂತಲೂ ಹೆಚ್ಚು ಕಪ್ಪು ಕುಳಿಗಳು ಇವೆಯೆಂದು ಅಂದಾಜಿಸಲಾದರೂ ಆದರೆ ಸೌರ ಮಂಡಲದಲ್ಲಿ ಎರಡು ಕಪ್ಪು ರಂದ್ರಗಳಿದ್ದು ಅವು ಭೂಮಿಯಿಂದ 26 ಸಾವಿರ ಬೆಳಕಿನ ವರುಷಗಳಷ್ಟು ದೂರವಿದೆ. ಅಂದರೇ ಬೆಳಕಿನ ವೇಗದಲ್ಲಿ ಚಲಿಸಿದ್ರು ಈ ಕಪ್ಪು ರಂದ್ರಗಳನ್ನ ಭೂಮಿಯಿಂದ ತಲುಪಲು 26 ಸಾವಿರ ಬೆಳಕಿನ ವರುಷಗಳು ಬೇಕಾಗುತ್ತವೆ. ಹಾಗಿದ್ರು ಮನುಷ್ಯನ ಕುತೂಹಲ ಇಲ್ಲಿಗೇ ತಣಿಯಲ್ಲ. ಯಾಕಂದ್ರೆ ಬ್ಲಾಕ್ ಹೋಲ್ಸ್ ವಿಜ್ಞಾನಿಗಳಿಗೆ ಸವಾಲು ಎಸೆಯುವಂತಹ ಒಂದು ರಹಸ್ಯವಾಗಿಯೇ ಕಂಡು ಬರುತ್ತೆ.
ಬ್ಲಾಕ್ ಹೋಲ್ಸ್ ಹುಟ್ಟು ರೋಚಕ..!
ಅತ್ಯಂತ ಶಕ್ತಿಯುತ ವಾಗಿರುವ, ಅತೀ ಹೆಚ್ಚು ಗುರುತ್ವಾಕರ್ಷಣ ಶಕ್ತಿ ಇರುವ ಬ್ಲಾಕ್ ಹೋಲ್ಸ್ ಹುಟ್ಟೇ ಒಂದು ಇಂಟೆರೆಸ್ಟಿಂಗ್ ಸಂಗತಿ. ಯಾಕಂದ್ರೆ ಅದರ ಹುಟ್ಟು ಶುರುವಾಗೋದೇ ನಕ್ಷತ್ರಗಳು ಸತ್ತ ನಂತರ. ನಕ್ಷತ್ರಗಳು ತನ್ನ ಜೀವನ ಚಕ್ರದ ಕೊನೆಯ ಹಂತದಲ್ಲಿ ಇದ್ದಾಗ ಕಪ್ಪು ಕುಳಿಗಳಾಗಿ ಹುಟ್ಟಿಕೊಳ್ಳುತ್ತವೆ. ಅಂದರೇ ನಕ್ಷತ್ರಗಳು ತಮ್ಮ ಜೀವನದ ಅಂತ್ಯ ತಲುಪುತ್ತಿದ್ದಂತೆ ಅವುಗಳ ಗಾತ್ರ ಹೆಚ್ಚುತ್ತಾ ಹೋಗುತ್ತವೆ. ಮುಂದೆ ಇದೂ ದೊಡ್ಡ ದುರಂತದಲ್ಲಿ ಸ್ಫೋಟ ಗೊಳ್ಳುತ್ತವೆ. ಅದನ್ನ ಸೂಪರ್ನೋವಾ ಎಂದೂ ಕರೆಯಲಾಗುತ್ತೆ. ಈ ಸ್ಫೋಟದಲ್ಲಿ ಹೆಚ್ಚಿನ ನಕ್ಷತ್ರವೂ ನಾಶವಾದರೆ ಇನ್ನಷ್ಟು ನಕ್ಷತ್ರಗಳು ಬಾಹ್ಯಾಕಾಶದಲ್ಲಿ ಹರಡುತ್ತವೆ. ಸೂಪರ್ನೋವಾ ಸ್ಫೋಟದಲ್ಲಿ ಸಾಯುವ ದೊಡ್ಡ ನಕ್ಷತ್ರದ ಅವಶೇಷಗಳಿಂದ ಹೆಚ್ಚಿನ ಕಪ್ಪು ಕುಳಿಗಳು ರೂಪುಗೊಳ್ಳುತ್ತವೆ. ಸಣ್ಣ ನಕ್ಷತ್ರಗಳು ದಟ್ಟವಾದ ನ್ಯೂಟ್ರಾನ್ ನಕ್ಷತ್ರಗಳಾಗುತ್ತವೆ ಆದರೆ ಅವುಗಳು ಬೆಳಕನ್ನು ಬಲೆಗೆ ಬೀಳಿಸುವಷ್ಟು ಬೃಹತ್ ಪ್ರಮಾಣದಲ್ಲಿರುವುದಿಲ್ಲ. ಹೀಗೆ ಕಪ್ಪು ಕುಳಿ ರೂಪುಗೊಂಡ ನಂತರ ಅದರ ಸುತ್ತಮುತ್ತಲಿನ ದ್ರವ್ಯರಾಶಿಯನ್ನು ಹೀರಿಕೊಳ್ಳುವ ಮೂಲಕ ಅದು ಇನ್ನೂ ದೊಡ್ಡ ಗಾತ್ರಕ್ಕೆ ಬೆಳೆಯಬಹುದು. ಹೀಗೆ ಸೃಷ್ಟಿ ಯಾಗೋ ಬ್ಲಾಕ್ ಹೋಲ್ಸ್ ಗೇ ಹೆಚ್ಚಿನ ಗುರುತ್ವಾಕರ್ಷಣ ಶಕ್ತಿ ಇರುತ್ತದೆ. ಹಾಗಾಗಿಯೇ ಈ ಗುರುತ್ವಾಕರ್ಷಣ ಶಕ್ತಿಯಲ್ಲಿ ಬೆಳಕಿಗೂ ತಪ್ಪಿಸಿಕೊಳ್ಳೋದಿಕ್ಕೆ ಸಾಧ್ಯವಾಗಲ್ಲ. ಇನ್ನೂ ಇವುಗಳ ಗುರುತ್ವಾಕರ್ಷಣ ಶಕ್ತಿಯೂ ಯಾವುದೇ ಗ್ರಹವಾಗಿರಲಿ, ಇನ್ನೀತರ ಆಕಾಶಕಾಯವೇ ಆಗಿರಲಿ ಸೆಳೆದುಕೊಂಡಿತ್ತು ಅಂದರೇ ಒಂದೇ ಬಾರಿಗೆ ತನ್ನೋಳಗೆ ನುಂಗಿಕೊಳ್ಳುವ ಶಕ್ತಿ ಬ್ಲಾಕ್ ಹೋಲ್ಸ್ ಗೇ ಇರುತ್ತವೆ.
ನಕ್ಷತ್ರವು ಹೊಂದಿದ್ದ ಬೆಳಕು ಸಹ ಗುರುತ್ವಾಕರ್ಷಣ ಶಕ್ತಿಯಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿಲ್ಲ ಮತ್ತು ಕಪ್ಪು ಕುಳಿಗಳ ಸೆಳೆತಕ್ಕೆ ಒಳಗಾಗುತ್ತವೆ. ಈ ಕಾರಣಕ್ಕಾಗಿ ಇದನ್ನು ಕಪ್ಪು ಕುಳಿ ಎಂದು ಕರೆಯಲಾಗುತ್ತದೆ. ಯಾಕಂದರೆ ಕಪ್ಪು ಕುಳಿಗಳ ಗುರುತ್ವಾಕರ್ಷಣೆಯಲ್ಲಿ ಬೆಳಕು ಸಹ ಬೆಳಗಲು ಸಾಧ್ಯವಾಗುವುದಿಲ್ಲ. ನಕ್ಷತ್ರಗಳು ಬ್ಲಾಕ್ ಹೋಲ್ಸ್ ಒಳಗೇ ಹೋದ ಹಾಗೇ ಅವುಗಳು ತಮ್ಮ ಗಾತ್ರವು ಕುಗ್ಗುತ್ತಾ ಹೋಗುತ್ತವೆ. ಆದರೆ ಅವುಗಳ ಭಾರವು ಹೆಚ್ಚೇ ಇರುತ್ತವೆ. ಇದೂ ಕಪ್ಪು ಕುಳಿಗಳನ್ನ ಇನ್ನಷ್ಟು ಶಕ್ತಿಶಾಲಿಯಾಗಿ ಮಾಡುತ್ತಾ ಹೋಗುತ್ತವೆ. ಇವೂ ಸಾಮಾನ್ಯವಾಗಿ ಸೂರ್ಯನಿಗಿಂತ 10 ರಿಂದ 24 ಪಟ್ಟು ಹೆಚ್ಚು ಗಾತ್ರದಲ್ಲಿಯೇ ಇರುತ್ತದೆ. ಹಾಗಾಗಿಯೇ ಬ್ಲಾಕ್ ಹೋಲ್ಸ್ ಗಳು ಸೂರ್ಯನನ್ನೇ ನುಂಗುವಷ್ಟು ಶಕ್ತಿಯುತವೆಂದು ಹೇಳಲಾಗುತ್ತೆ. ಹಾಗಿದ್ರು ಸೂರ್ಯನು ಕಪ್ಪು ರಂದ್ರಗಳಿಂದ ಬಹು ದೂರವಿದ್ದು ಇವುಗಳ ಗ್ರಾವಿಟಿ ಸೆಳೆತಕ್ಕೆ ಒಳಗಾಗೋದಿಲ್ಲ ಎನ್ನೋದು ವಾಸ್ತವಿಕವೇ. ಇದುವೇ ಬ್ರಹ್ಮಾಂಡ ಸೃಷ್ಟಿಯ ವೈಶಿಷ್ಟತೆ. ಈ ಎಲ್ಲಾ ಕಾರಣಗಳಿಂದ ವಿಜ್ಞಾನಿಗಳಿಗೆ ಬ್ಲಾಕ್ ಹೋಲ್ಸ್ ಅತ್ಯಂತ ಇಂಟೆರೆಸ್ಟಿಂಗ್ ಸಂಗತಿಯಾಗಿ ಕಂಡು ಬರುತ್ತವೆ.
ಬ್ಲಾಕ್ ಹೋಲ್ಸ್ ಕುರಿತಾಗಿ ತಿಳಿದುಕೊಳ್ಳಲು ವಿಜ್ಞಾನಿಗಳಿಗೆ ಸಾಕಷ್ಟಿದೆ. ಬ್ಲಾಕ್ ಹೋಲ್ಸ್ ನ ಹುಟ್ಟಿನ ಕುರಿತಾಗಿ ತಿಳಿದುಕೊಂಡ ವಿಜ್ಞಾನಿಗಳಿಗೆ ಅವುಗಳ ಅಂತ್ಯವೂ ಹೇಗಾಗುತ್ತೆ, ಹಾಗೇ ಅಂತ್ಯವಾಗುತ್ತಾ ಅಥವಾ ಅದರ ಮುಂದಿನ ಹಂತವೂ ಹೇಗಿರುತ್ತೆ, ಈ ರೀತಿಯ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಯಾಕಂದ್ರೆ ಕೆಲವೂ ಅಧ್ಯಯನಕಾರರ ಪ್ರಕಾರ ಬ್ಲಾಕ್ ಹೋಲ್ಸ್ ಗಳು ನಿಧಾನವಾಗಿ ಆವಿಯಾಗುತ್ತವೆ ಎಂದೂ ಹೇಳಲಾಗುತ್ತೆ. ಈಗಾಗಲೇ ನಾಸಾ ಬಾಹ್ಯಾಕಾಶ ಸಂಸ್ಥೆಯು ಬ್ಲಾಕ್ ಹೋಲ್ಸ್ ಗಳ ಕುರಿತಾಗಿ ಅಧ್ಯಯನ ಪ್ರಾರಂಭಿಸಿದೆ. ನಾಸಾ ದ ನಂತರ ಬ್ಲಾಕ್ ಹೋಲ್ಸ್ ಗಳ ನಿಗೂಢ ರಹಸ್ಯವನ್ನ ಬೇಧಿಸುವ ಪ್ರಯತ್ನದಲ್ಲಿ ಇರುವ ಎರಡನೇ ಬಾಹ್ಯಾಕಾಶ ಸಂಸ್ಥೆ ಎಂಬ ಹೆಗ್ಗಳಿಕೆ ಇಸ್ರೋ ಸಂಸ್ಥೆಗೇ ಇದೆ. ಈಗಾಗಲೇ ಚಂದ್ರಯಾನ ಮತ್ತೂ ಆದಿತ್ಯ L-1 ಮಿಷನ್ ಮೂಲಕ ಯಶಸ್ವಿಗೊಂಡ ಇಸ್ರೋ ಹೊಸ ವರುಷವನ್ನ ಹೊಸ ಯೋಜನೆಯೊಂದಿಗೆ ಪ್ರಾರಂಭಿಸಿದೆ.