ಎರಡು ವರ್ಷ.. ಮೂರು ಕಲರ್..‌ – ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದ್ಯಾ ಈ ಶ್ವಾನ?

ಎರಡು ವರ್ಷ.. ಮೂರು ಕಲರ್..‌ – ಊಸರವಳ್ಳಿಯಂತೆ ಬಣ್ಣ ಬದಲಾಯಿಸುತ್ತಿದ್ಯಾ ಈ ಶ್ವಾನ?

ಸಾಮಾನ್ಯವಾಗಿ ನಾಯಿಗಳು, ಕಪ್ಪು, ಬಿಳಿ, ಕೇಸರಿ, ಕೆಂಪು, ಕಂದು ಬಣ್ಣದಲ್ಲಿರುವುದನ್ನು ನಾವು ನೋಡಿದ್ದೇವೆ. ಕೆಲವು ಬಾರಿ ಅವುಗಳ ಬಣ್ಣ ಮಿಶ್ರಣವಾಗಿರುವುದನ್ನೂ ಸಹ ನೋಡಬಹುದು. ನಾಯಿ ಹುಟ್ಟಿದಾಗಿನಿಂದಲೂ ಸಾಯುವವರೆಗೂ ಕೂಡ ಅವುಗಳು ಒಂದೇ ಬಣ್ಣದಿಂದ ಕೂಡಿರುತ್ತದೆ. ಎಂದಿಗೂ ಬಣ್ಣ ಬದಲಾಗುವುದಿಲ್ಲ. ಆದ್ರೆ ಇಲ್ಲೊಂದು ಕಡೆ ಕೇವಲ ಎರಡು ವರ್ಷದಲ್ಲಿ ಮೂರು ಬಾರಿ ಬಣ್ಣ ಬದಲಾಗಿದೆ.

ಅಚ್ಚರಿಯಾದ್ರೂ ಸತ್ಯ. ಸಾಮಾನ್ಯವಾಗಿ ಊಸರವಳ್ಳಿಯಂತಹ ಜೀವಿಗಳು ತಮ್ಮ ರಕ್ಷಣೆಗೆ ಬಣ್ಣ ಬದಲಾಯಿಸುತ್ತವೆ. ಆದರೆ ನಾಯಿಗಳು ಹುಟ್ಟಿನಿಂದೇ ಒಂದೇ ಬಣ್ಣದಿಂದ ಕೂಡಿರುತ್ತವೆ. ಆದರೆ ಇಲ್ಲೊಂದು ಕಡೆ ಎರಡು ವರ್ಷದ ಹಿಂದೆ ಕಪ್ಪು ಬಣ್ಣದಲ್ಲಿದ್ದ ಎಂಬ ಶ್ವಾನ ಈಗ ಸಂಪೂರ್ಣವಾಗಿ ಬಿಳಿ ಬಣ್ಣಕ್ಕೆ ತಿರುಗಿದೆ.

ಇದನ್ನೂ ಓದಿ: 6 ನಿಮಿಷ.. 10 ಬಾಲ್.. 50 ರನ್! – ABDಯನ್ನು ನೆನಪಿಸಿದ್ರಾ ವಿಲ್ ಜಾಕ್ಸ್? – RCB ಗೆ ಡಿವಿಲಿಯರ್ಸ್ ದೇವರಾಗಿದ್ದೇಗೆ?

ಈ ಶ್ವಾನದ ಬಣ್ಣ ಬದಲಾವಣೆಗೂ ಕೂಡ ಗಂಭೀರ ಕಾರಣವಿದೆ. ಈ ನಾಯಿ ವಿಟಲಿಗೋ ರೋಗಕ್ಕೆ ತುತ್ತಾಗಿದೆ. ಹೀಗಾಗಿ ಕೇವಲ ಎರಡು ವರ್ಷಗಳಲ್ಲಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ. ಆಡಿಟಿ ಸೆಂಟ್ರಲ್ ವೆಬ್‌ಸೈಟ್‌ನ ವರದಿಯ ಪ್ರಕಾರ, 2021 ರಲ್ಲಿ ಈ ನಾಯಿಗೆ ವಿಟಲಿಗೋ ರೋಗವಿರುವುದು ಪತ್ತೆ ಮಾಡಲಾಯಿತು ಎಂದು ವರದಿ ಮಾಡಿದೆ.

ವಿಟಲಿಗೋ ಚರ್ಮದ ಕಾಯಿಲೆಯಾಗಿದ್ದು , ಮೆಲನಿನ್ ಉತ್ಪಾದಿಸಲು ಕಾರಣವಾಗುವ ಮೆಲನೋಸೈಟ್‌ಗಳು ನಾಶವಾದಾಗ ಚರ್ಮದಲ್ಲಿ ಈ ಬದಲಾವಣೆಗಳು ಸಂಭವಿಸುತ್ತದೆ. ಮೆಲನಿನ್ ಎಂಬುದು ಚರ್ಮ, ಕೂದಲು ಮತ್ತು ಕಣ್ಣುಗಳಿಗೆ ಬಣ್ಣವನ್ನು ನೀಡುವ ಪ್ರಮುಖ ಕೆಲಸವನ್ನು ನಿರ್ವಹಿಸುತ್ತದೆ.

ಮೆಲನೋಸೈಟ್ ನಷ್ಟದ ಪರಿಣಾಮವಾಗಿ, ಮುಖ, ಕೈಗಳು, ಪಾದಗಳು ಮತ್ತು ಜನನಾಂಗಗಳು ಸೇರಿದಂತೆ ದೇಹದ ವಿವಿಧ ಭಾಗಗಳಲ್ಲಿ ತೆಳು ಅಥವಾ ಬಿಳಿ ತೇಪೆಗಳು ಕಾಣಿಸಿಕೊಳ್ಳುತ್ತವೆ. ಇದು ದೀರ್ಘಕಾಲದ ಕಾಯಿಲೆಯಾಗಿದ್ದರೂ ಸಹ ಪ್ರಾಣಕ್ಕೆ ಯಾವುದೇ ಅಪಾಯವಿಲ್ಲ.

ನಾಯಿಯ ಮಾಲೀಕರಾದ ಮ್ಯಾಟ್ ಸ್ಮಿತ್ ಅವರು ತಮ್ಮ ನಾಯಿಯ ಕಾಯಿಲೆಯ ಬಗ್ಗೆ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ರೆಡ್ಡಿಟ್‌ನಲ್ಲಿ ಪೋಸ್ಟ್ ಅನ್ನು ಸಹ ಹಂಚಿಕೊಂಡಿದ್ದಾರೆ. ಎರಡು ವರ್ಷಗಳಲ್ಲಿ ನಾಯಿ ಸಂಪೂರ್ಣವಾಗಿ ಬಣ್ಣ ಬದಲಾಯಿಸಿಕೊಂಡಿರುವ ಫೋಟೋಗಳನ್ನು ಕಾಣಬಹುದು.

ಪ್ರಾರಂಭದಲ್ಲಿ ಕಪ್ಪು ಬಣ್ಣದ ಶ್ವಾನದ ಮೇಲೆ ಬಿಳಿ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದಂತೆ ವರ್ಷಗಳ ಕಳೆದಂತೆ ಕೇವಲ ಎರಡು ವರ್ಷಗಳಲ್ಲಿ ನಾಯಿ ಸಂಪೂರ್ಣವಾಗಿ ಕಪ್ಪು ಬಣ್ಣದಿಂದ ಬಿಳಿ ಬಣ್ಣಕ್ಕೆ ತಿರುಗಿದೆ ಎಂದು ಪೋಸ್ಟ್‌ ನಲ್ಲಿ ತಿಳಿಸಿದ್ದಾರೆ.

Shwetha M