ಚನ್ನಪಟ್ಟಣದಲ್ಲಿ ಬಿಜೆಪಿಗೆ ಮೈತ್ರಿ ಸಂಕಟ! – ಬಿಗ್ ಶಾಕ್ ಕೊಟ್ಟ HDK ನಿರ್ಧಾರ
ಕ್ಷೇತ್ರ ಬಿಡಲು JDS ರೆಡಿನಾ? 

ಚನ್ನಪಟ್ಟಣದಲ್ಲಿ ಬಿಜೆಪಿಗೆ ಮೈತ್ರಿ ಸಂಕಟ! – ಬಿಗ್ ಶಾಕ್ ಕೊಟ್ಟ HDK ನಿರ್ಧಾರಕ್ಷೇತ್ರ ಬಿಡಲು JDS ರೆಡಿನಾ? 

ಕರುನಾಡಿನಲ್ಲಿ ಬೈಎಲೆಕ್ಷನ್ ಹಂಗಾಮ ಜೋರಾಗಿದೆ. ಚನ್ನಪಟ್ಟಣ, ಶಿಗ್ಗಾವಿ, ಸಂಡೂರು ವಿಧಾನಸಭೆ ಕ್ಷೇತ್ರಗಳಿಗೆ ಉಪ ಚುನಾವಣೆ ನಡೆಯಲಿದ್ದು, ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಬಿರುಸು ಪಡೆದುಕೊಂಡಿದೆ. ಅದರಲ್ಲೂ ಟಿಕೆಟ್‌ಗಾಗಿ ಭಾರೀ ಲಾಬಿಗಳು ನಡೆಯುತ್ತಿದ್ದು.. ಕಾಂಗ್ರೆಸ್‌ ವರ್ಸಸ್‌ ಬಿಜೆಪಿ ಹಣಾಹಣಿ ಶುರುವಾಗಿದೆ.. ಮೂರು ಕ್ಷೇತ್ರಗಳು, ಮೂರು ಪಕ್ಷಗಳಿಗೂ ಸವಾಲ್‌ ಆಗಿದ್ದು.. ಗೆಲ್ಲಲೇ ಬೇಕು ಎಂಬ ಹಠಕ್ಕೆ ಬಿದ್ದಿವೆ.. ಒಂದಿಷ್ಟು ಹೆಸರುಗಳು ಕ್ಷೇತ್ರದಲ್ಲಿ ಓಡಾಡುತ್ತಿವೆ..

ಇದನ್ನೂ ಓದಿ: 0 0 0 0 0.. 46 ರನ್ ಗೆ ಆಲೌಟ್! – ರೋಹಿತ್ ರಿಂದ್ಲೇ ಐವರು 0 ಸುತ್ತಿದ್ರಾ?

ಮೂರು ಕ್ಷೇತ್ರಗಳನ್ನು ಗೆಲ್ಲೋಕೆ  ಮೂರು ಪಕ್ಷಗಳು ಸರ್ಕಸ್‌ ಮಾಡುತ್ತಿವೆ. ಆಡಳಿತ ಹಿಡಿದಿರುವ ಕಾಂಗ್ರೆಸ್‌ಗೆ ಇದು ಪ್ರತಿಷ್ಠೆ ಆದ್ರೆ.. ಬಿಜೆಪಿಗೂ ತನ್ನ ಅಸ್ತಿತ್ವದ ಪ್ರಶ್ನೆಯಾಗಿದೆ.. ಇತ್ತ ಕಾಂಗ್ರೆಸ್ ಸ್ವತಂತ್ರವಾಗಿ ಸ್ಪರ್ಧಿಸಿದ್ರೆ, ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದೆ. ಗೆಲ್ಲುವ ಅಭ್ಯರ್ಥಿಗಳಿಗಾಗಿ ಮೂರು ಪಕ್ಷಗಳು ತಲೆಕೆಡಿಸಿಕೊಂಡಿದ್ದು, ಮೂವರು ರಾಜಕಾರಣಿಗಳ ಮಕ್ಕಳು ಅಭ್ಯರ್ಥಿಗಳಾಗುವ ಸಾಧ್ಯತೆಯಿದೆ, ಚನ್ನಪಟ್ಟಣಕ್ಕೆ ಜೆಡಿಎಸ್‌ನಿಂದ ಕೇಂದ್ರ ಸಚಿವ ಎಚ್‌ಡಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ, ಬಿಜೆಪಿಯಿಂದ ಶಿಗ್ಗಾವಿಗೆ ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಪುತ್ರ ಭರತ್ , ಕಾಂಗ್ರೆಸ್‌ನಿಂದ ಸಂಡೂರಿಗೆ ಬಳ್ಳಾರಿ ಸಂಸದ ಇ ತುಕಾರಾಂ ಪುತ್ರಿ ಸೌಪರ್ಣಿಕಾ ಹೆಸರು ಕೇಳಿ ಬರುತ್ತಿವೆ. ಉಪಚುನಾವಣೆಯಲ್ಲಿ ರಿಸ್ಕ್‌ ತೆಗೆದುಕೊಳ್ಳುವುದು ಬೇಡ.. ಹೀಗಾಗಿ ಕುಟಂಬ ಸದಸ್ಯರಿಗೆ ಟಿಕೆಟ್‌ ಕೊಟ್ಟು ಗೆಲ್ಲಿಸಿಕೊಂಡು ಬರೋಣ ಅನ್ನೋ ಪ್ಲಾನ್‌ ಮೂರು ಪಕ್ಷಕ್ಕೆ ಇದೆ..
ರಾಜ್ಯದಲ್ಲಿ ಕಾಂಗ್ರೆಸ್‌ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದು.. ಉಪ ಚುನಾವಣೆ ಗೆಲ್ಲುವ ಪ್ರತಿಷ್ಠೆ ಒಂದು ಕಡೆಯಾದ್ರೆ.. ಸರ್ಕಾರ ಬಂದು ಒಂದು ವರ್ಷ ಆಗಿದೆ.. ತಮ್ಮ ಸರ್ಕಾರದ ಬಗ್ಗೆ ಜನರ ಮನದಾಳ ಹೇಗಿದೆ ಅನ್ನೋದು ಈ ಚುನಾವಣೆಯಿಂದಲೇ ಗೊತ್ತಾಗುತ್ತೆ.. ಈಗಾಗಲೇ ಗ್ಯಾರಂಟಿ ಬಗ್ಗೆ ಮಿಶ್ರ ಪ್ರತಿಕ್ರಿಯೆ ಹೊರಬಿದ್ದಿದೆ.. ಈ ಚುನಾವಣೆಯಲ್ಲಿ ಸರ್ಕಾರದ ಆಡಳಿತವನ್ನು ಮೆಚ್ಚಿದ್ದೇ ಆದಲ್ಲಿ ಜನರು ಉಪಚುನಾವಣೆಯಲ್ಲಿ ಗೆಲ್ಲಿಸಲಿದ್ದಾರೆ.. ಸೋತರೆ ಕಾಂಗ್ರೆಸ್‌ ಸರ್ಕಾರವೇ ಇದನ್ನ ಅರ್ಥ ಮಾಡಿಕೊಳ್ಳಬೇಕಾದ ಅನಿವಾರ್ಯತೆ ಎದುರಾಗುತ್ತೆ.. ಹೀಗಾಗಿ ಕಾಂಗ್ರೆಸ್‌ಗೆ ಇದು ಪ್ರತಿಷ್ಠೆ ಮತ್ತು ಸರ್ಕಾರದ ಅಳಿವು ಉಳಿವಿನ ಪ್ರಶ್ನೆ.. ಇದಿಷ್ಟು ಕಾಂಗ್ರೆಸ್‌ ಕಥೆಯಾದ್ರೆ ಬಿಜೆಪಿಯದ್ದು ಕೂಡ ಅಳಿವು ಉಳಿವಿನ ಪ್ರಶ್ನೆ.. ಈಗಾಗಲೇ ಬಿಜೆಪಿ ಪಕ್ಷ ಮನೆಯೊಂದು ಮೂರು ಬಾಗಿಲಾಗಿದೆ.. ಒಗ್ಗಟ್ಟಿಲ್ಲದೇ ಸೊರಗುತ್ತಿದೆ.. ಆಡಳಿತ ಪಕ್ಷದ ವಿರುದ್ಧ ಧ್ವನಿ ಎತ್ತದೇ ಮಂಡಿಯೂರಿದೆ..ಹೀಗಿರುವಾಗ ಒಗ್ಗಟ್ಟಿನಿಂದ ಬೈ ಎಲೆಕ್ಷನ್‌ ಎದುರಿಸುವ ಸವಾಲ್‌ ಬಂದಿದೆ.. ಇಂಥ ಸಮಯದಲ್ಲಿ ಮುನಿಸು ಮರೆತು ಎಲ್ಲ ಬಿಜೆಪಿ ನಾಯಕರು ಒಂದಾಗಿ ಉಪಚುನಾವಣೆ ಗೆದ್ದುಕೊಂಡು ಬರ್ತಾರಾ ನೋಡಬೇಕು.. ಒಂದು ವೇಳೇ ಬಿಜೆಪಿ ಮೂರು ಕ್ಷೇತ್ರವನ್ನು ಗೆದ್ದುಕೊಂಡು ಬಂದಿದ್ದೇ ಆದಲ್ಲಿ ಬಿಜೆಪಿಗೆ ಕರ್ನಾಟಕದಲ್ಲಿ ಬೂಸ್ಟ್‌ ಸಿಗುವುದಂತು ಖಂಡಿತ.

ಚನ್ನಪಟ್ಟಣದಲ್ಲಿ ಬಿಜೆಪಿಗೆ ಮೈತ್ರಿ ಸಂಕಟ!

ಶಿಗ್ಗಾಂವಿ ಹಾಗೂ ಸಂಡೂರು ಎರಡು ಕ್ಷೇತ್ರಗಳ ಪೈಕಿ ಅತಿ ಹೆಚ್ಚು ಹೈಪ್‌ ಕ್ರಿಯೇಟ್‌ ಮಾಡಿದ ಕ್ಷೇತ್ರ ಅಂದ್ರೆ ಅದು ಚನ್ನಪಟ್ಟಣ ಕ್ಷೇತ್ರ. ಇಲ್ಲಿ ಡಿಕೆ ಶಿವಕುಮಾರ್‌ ಹಾಗೂ ಕುಮಾರಸ್ವಾಮಿ ಮಧ್ಯೆ ನೇರಾ ನೇರಾ ಹಣಾಹಣಿ ಬಿದ್ದಿದೆ.. ಇಬ್ಬರು ಕೂಡ ಈ ಕ್ಷೇತ್ರವನ್ನು ಗೆಲ್ಲಲೇ ಬೇಕು ಎಂದು ಪಣ ತೊಟ್ಟಿದ್ದಾರೆ.. ಇಲ್ಲಿ ಬಿಜೆಪಿಗೆ ಮೈತ್ರಿಯೇ ಕಂಟಕವಾಗಿದೆ. ಯಾಕಂದ್ರೆ ಬಿಜೆಪಿಯಿಂದ ಸಿಪಿ ಯೋಗೇಶ್ವರ್‌ ಸ್ಪರ್ಧೆ ಮಾಡಬೇಕು ಎಂದು ಹಠಕ್ಕೆ ಬಿದ್ದಿದ್ದರೆ.. ಕುಮಾರಸ್ವಾಮಿಗೆ ಸಿಪಿ ಯೋಗೇಶ್ವರ್‌ಗೆ ಟಿಕೆಟ್‌ ಕೊಡಲು ಸುತಾರಂ ಇಷ್ಟ ಇಲ್ಲ.. ಜೆಡಿಎಸ್‌ ನಿಂದ ತಮ್ಮ ಮಗ ನಿಖಿಲ್‌ ಕುಮಾರಸ್ವಾಮಿಯನ್ನು ನಿಲ್ಲಿಸುವ ಇರಾದೆ ಇದೆ.. ಟಿಕೆಟ್‌ ಸಿಗದೇ ಇದ್ರೆ ಸಿಪಿ ಯೋಗೇಶ್ವರ್‌ ಪಕ್ಷೇತರವಾಗಿ ಸ್ಪರ್ಧಿಸುವ ಸಾಧ್ಯತೆ ಇದೆ.. ಹೀಗಾಗಿ ಬಿಜೆಪಿ ಧರ್ಮ ಸಂಕಟದಲ್ಲಿ ಸಿಲುಕಿದ್ದು ಮೈತ್ರಿ ಮುರಿದು ಬೀಳುವ ಎಲ್ಲ ಸಾಧ್ಯತೆ ಇದೆ.. ಇತ್ತ ಕಾಂಗ್ರೆಸ್‌ನಿಂದ ಡಿಕೆ ಶಿವಕುಮಾರ್‌ ನಾನೇ ಅಭ್ಯರ್ಥಿ ಎಂದು ಹೇಳುತ್ತಿದ್ದರೂ ಕೂಡ.. ತಮ್ಮ ಸಹೋದರ ಡಿಕೆ ಸುರೇಶ್‌ರನ್ನು ನಿಲ್ಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಚನ್ನಪಟ್ಟಣದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತಾ ನೋಡಬೇಕು.

ಕಾಂಗ್ರೆಸ್‌ ಕಟ್ಟಿಹಾಕಲು ಬಿಜೆಪಿ ಮಾಸ್ಟರ್‌ ಪ್ಲ್ಯಾನ್‌!

ಇತ್ತ ಕಾಂಗ್ರೆಸ್‌ ಅನ್ನ ಬಗ್ಗುಬಡಿಯಲು ಬಿಜೆಪಿ ಮಾಸ್ಟರ್‌ ಪ್ಲಾನ್‌ ಮಾಡ್ತಿದೆ.. ಮುಡಾ ಹಾಗೂ ವಾಲ್ಮೀಕಿ ಅಭಿವೃದ್ಧಿ ನಿಗಮ ಹಗರಣಗಳನ್ನೇ ಅಸ್ತ್ರವನ್ನಾಗಿ ಚುನಾವಣಾ ರಣಕಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಬಳಸುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳಿಂದ ಅಭಿವೃದ್ಧಿ ಆಗುತ್ತಿಲ್ಲ ಎಂಬ ಮಾತುಗಳು ಇವೆ. ಅದನ್ನು ಕೂಡ ಎಲೆಕ್ಷನ್‌ ಪ್ರಚಾರದಲ್ಲಿ ಮೈತ್ರಿ ಪಡೆ ಬಳಸಿ ಕಾಂಗ್ರೆಸ್‌ಗೆ ಸೋಲುಣಿಸಬೇಕೆಂದು ಪಣ ತೊಟ್ಟಿವೆ.. ಮೂರು ಕ್ಷೇತ್ರಗಳು ಮೂರು ಪಕ್ಷಗಳಿಗೂ ಪ್ರತಿಷ್ಠೆಯಾಗಿದೆ.. ಗೆಲ್ಲಲೇಬೇಕು ಎಂದು ಪಣ ತೊಟ್ಟಿವೆ.. ನವೆಂಬರ್‌ 13ಕ್ಕೆ ಅಖಾಡ ಸಿದ್ದವಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಚುನಾವಣಾ ಪ್ರಚಾರಗಳು ಶುರುವಾಗುತ್ತೆ.. ಏನೇ ಅಬ್ಬರ.. ಭರವಸೆಗಳು ಇರಲಿ ಅದ್ರೆ ಮತದಾರರು ಯಾರನ್ನು ಕೈ ಹಿಡಿತಾರೆ ಅನ್ನೋದನ್ನು ಕಾದು ನೋಡಬೇಕಿದೆ.

Shwetha M

Leave a Reply

Your email address will not be published. Required fields are marked *