ಬಿಜೆಪಿ ಎರಡನೇ ಪಟ್ಟಿ ರಿಲೀಸ್.. ಪ್ರತಾಪ್ ಸಿಂಹ, ಸದಾನಂದ ಗೌಡರಿಗೆ ಟಿಕೆಟ್ ಮಿಸ್ – 20 ಮಂದಿಗೆ ಟಿಕೆಟ್..
ಲೋಕಸಭೆ ಚುನಾವಣೆಗೆ ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿದೆ. ಎಲ್ಲಾ ಪಕ್ಷಗಳು ಭರದಿಂದ ಸಿದ್ಧತೆ ನಡೆಸುತ್ತಿವೆ. ಬುಧವಾರ ಬಿಜೆಪಿ ರಾಜ್ಯದ 20 ಲೋಕಸಭಾ ಕ್ಷೇತ್ರಗಳಿಗೆ ಸೇರಿ ಒಟ್ಟು 72 ಅಭ್ಯರ್ಥಿಗಳಿಗೆ ಬಿಜೆಪಿ ಟಿಕೆಟ್ ಘೋಷಣೆ ಮಾಡಿದೆ.
ದೆಹಲಿಯಲ್ಲಿ 2, ಗುಜರಾತ್‌ನಲ್ಲಿ 7, ಹರಿಯಾಣದಲ್ಲಿ 6, ಹಿಮಾಚಲ ಪ್ರದೇಶದಲ್ಲಿ 2, ಕರ್ನಾಟಕದಲ್ಲಿ 20, ಮಧ್ಯಪ್ರದೇಶದ 5, ಮಹಾರಾಷ್ಟ್ರದಲ್ಲಿ 20, ತೆಲಂಗಾಣದಲ್ಲಿ 6, 1 ಸ್ಥಾನಕ್ಕೆ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ತ್ರಿಪುರಾ ಮತ್ತು ಉತ್ತರಾಖಂಡದಲ್ಲಿ 2 ಸ್ಥಾನಗಳು, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ದಿಯುಗೆ ಅಭ್ಯರ್ಥಿಗಳನ್ನು ಬಿಜೆಪಿ ಘೋಷಣೆ ಮಾಡಿದೆ.
ಇದನ್ನೂ ಓದಿ: ಯಡಿಯೂರಪ್ಪ ಕೊಟ್ಟ ಮಾತು ಉಳಿಸಿಕೊಂಡಿಲ್ಲ.. ತಾಯಿಯ ಕುತ್ತಿಗೆ ಹಿಸುಕುತ್ತಿದ್ದಾರೆ – ಈಶ್ವರಪ್ಪ ವಾಗ್ದಾಳಿ
ಮೈಸೂರಿಗೆ ಯದುವೀರ್ ಒಡೆಯರ್ ಅವರ ಘೋಷಣೆ ಮಾಡಲಾಗಿದ್ದು, ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ತಪ್ಪಿದೆ. ಬೆಂಗಳೂರು ಗ್ರಾಮಾಂತರದಿಂದ ಡಾ. ಮಂಜುನಾಥ್, ಹಾವೇರಿಯಿಂದ ಮಾಜಿ ಸಿಎಂ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ. ಇನ್ನು ಉಡುಪಿ ಚಿಕ್ಕಮಗಳೂರಿನ ಸಂಸದೆಯಾಗಿದ್ದ ಶೋಭಾ ಕರಂದ್ಲಾಜೆ ಅವರಿಗೆ ಬೆಂಗಳೂರು ಉತ್ತರ ಟಿಕೆಟ್ ಸಿಕ್ಕಿದರೆ, ಕೋಟಾ ಶ್ರೀನಿವಾಸ ಪೂಜಾರಿ ಅವರಿಗೆ ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಟಿಕೆಟ್ ನೀಡಲಾಗಿದೆ.
ಶಿವಮೊಗ್ಗದಲ್ಲಿ ಬಿವೈ ರಾಘವೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಹಾವೇರಿ – ಗದಗ ಲೋಕಸಭೆ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದ ಈಶ್ವರಪ್ಪ ಪುತ್ರ ಕಾಂತೇಶ್ ಗೆ ತೀವ್ರ ನಿರಾಸೆಯಾಗಿದೆ. ಹಾವೇರಿಯಲ್ಲಿ ಬಸವರಾಜ ಬೊಮ್ಮಾಯಿ ಅವರಿಗೆ ಟಿಕೆಟ್ ನೀಡಲಾಗಿದೆ.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ದಕ್ಷಿಣ ಕನ್ನಡದಲ್ಲಿ ಸಂಸದ, ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಟಿಕೆಟ್ ಮಿಸ್ ಆಗಿದೆ. ನಳೀನ್ ಕುಮಾರ್ ಕಟೀಲು ಬದಲು ಕ್ಯಾ. ಬ್ರಿಜೇಶ್ ಚೌಟ ಟಿಕೆಟ್ ನೀಡಲಾಗಿದೆ. ಮತ್ತೆ ಕೊಪ್ಪಳ ಟಿಕೆಟ್ ನಿರೀಕ್ಷೆಯಲ್ಲಿದ್ದ ಸಂಸದ ಸಂಗಣ್ಣ ಕರಡಿ ಅವರಿಗೆ ಟಿಕೆಟ್ ಕೈ ತಪ್ಪಿದ್ದು ಬಸವರಾಜ್ ಕ್ಯಾವತೂರು ಅವರಿಗೆ ಸಿಕ್ಕಿದೆ.
ದಾವಣಗೆರೆಯಲ್ಲಿ ಗಾಯತ್ರಿ ಸಿದ್ದೇಶ್ವರ, ಚಾಮರಾಜನಗರದಲ್ಲಿ ಎಸ್ ಬಾಲರಾಜ್ ಅವರಿಗೆ ಟಿಕೆಟ್ ಸಿಕ್ಕಿದೆ. ಬೆಳಗಾವಿ, ಉತ್ತರ ಕನ್ನಡ, ಕೋಲಾರ, ಚಿತ್ರದುರ್ಗ, ರಾಯಚೂರು, ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ.
ಯಾರಿಗೆ ಎಲ್ಲಿ?
- ಚಿಕ್ಕೋಡಿ – ಅಣ್ಣಾಸಾಹೇಬ್ ಜೊಲ್ಲೆ
- ಬಾಗಲಕೋಟೆ – ಗದ್ದಿಗೌಡರ್
- ಬಿಜಾಪುರ – ರಮೇಶ್ ಜಿಗಜಿಣಗಿ
- ಕಲಬುರಗಿ – ಉಮೇಶ್ ಜಾಧವ್
- ಬೀದರ್ – ಭಗವಂತ ಖೂಬಾ
- ಕೊಪ್ಪಳ – ಬಸವರಾಜ್ ಕ್ಯಾವತೂರು
- ಬಳ್ಳಾರಿ- ಶ್ರೀರಾಮುಲು
- ಹಾವೇರಿ- ಬಸವರಾಜ ಬೊಮ್ಮಾಯಿ
- ಧಾರವಾಡ – ಪ್ರಹ್ಲಾದ್ ಜೋಷಿ
- ದಾವಣಗೆರೆ – ಗಾಯತ್ರಿ ಸಿದ್ದೇಶ್ವರ
- ಶಿವಮೊಗ್ಗ – ಬಿವೈ ರಾಘವೇಂದ್ರ
- ಉಡುಪಿ ಚಿಕ್ಕಮಗಳೂರು- ಕೋಟಾ ಶ್ರೀನಿವಾಸ ಪೂಜಾರಿ
- ದಕ್ಷಿಣ ಕನ್ನಡ – ಕ್ಯಾ.ಬ್ರಿಜೇಶ್ ಚೌಟ
- ತುಮಕೂರು – ಸೋಮಣ್ಣ
- ಮೈಸೂರು – ಯದುವೀರ್ ಕೃಷ್ಣದತ್ತ ಒಡೆಯರ್
- ಚಾಮರಾಜನಗರ – ಎಸ್ ಬಾಲರಾಜ್
- ಬೆಂಗಳೂರು ಗ್ರಾಮಾಂತರ- ಸಿಎನ್ ಮಂಜುನಾಥ
- ಬೆಂಗಳೂರು ಉತ್ತರ – ಶೋಭಾ ಕರಂದ್ಲಾಜೆ
- ಬೆಂಗಳೂರು ಕೇಂದ್ರ – ಪಿಸಿ ಮೋಹನ್
- ಬೆಂಗಳೂರು ದಕ್ಷಿಣ – ತೇಜಸ್ವಿ ಸೂರ್ಯ