ಶಕ್ತಿ ಮಾಲೆ v/s ಅಕ್ಷಯ ಪಾತ್ರೆ – ಕಮಲ, ಕೈ ಪಾಳಯದಲ್ಲಿ ಜಾಹಿರಾತು ಫೈಟ್‌

ಶಕ್ತಿ ಮಾಲೆ v/s ಅಕ್ಷಯ ಪಾತ್ರೆ – ಕಮಲ, ಕೈ ಪಾಳಯದಲ್ಲಿ ಜಾಹಿರಾತು ಫೈಟ್‌

ಲೋಕಸಭೆ ಸಭೆ ಚುನಾವಣೆಗೆ ಕೌಂಟ್‌ಡೌನ್‌ ಶುರುವಾಗಿದೆ. ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ಜಾಹಿರಾತು, ಪೋಸ್ಟರ್‌ ವಾರ್‌ ಜೋರಾಗಿಯೇ ಇದೆ. ಕಾಂಗ್ರೆಸ್ ಶುರುಮಾಡಿದ ಚೊಂಬು ಜಾಹೀರಾತು ಅಭಿಯಾನಕ್ಕೆ ಬಿಜೆಪಿ ಟಕ್ಕರ್‌ ನೀಡುತ್ತಲೇ ಇದೆ.  ಇದೀಗ ಮೋದಿ ಅಕ್ಷಯ ಪಾತ್ರೆಯ ಮೂಲಕ ಮತ್ತೊಂದು ತಿರುಗೇಟು ನೀಡಿದೆ.

ಇದನ್ನೂ ಓದಿ:  ಭದ್ರಕೋಟೆಯಲ್ಲಿ ಗೆಲ್ತಾರಾ ಶೋಭಾ..? – ಪ್ರೊಫೆಸರ್ ಗೆ ಸಿಗುತ್ತಾ ಉತ್ತರ?

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಬಿಜೆಪಿ ಈಗ ಕರ್ನಾಟಕಕ್ಕೆ ಮೋದಿ ಕೊಟ್ಟದ್ದು ಅಕ್ಷಯ ಪಾತ್ರೆ ಎಂದು ಜಾಹೀರಾತು ನೀಡಿದೆ. ಮೋದಿ ಸರ್ಕಾರ ಕರ್ನಾಟಕಕ್ಕೆ ನೀಡಿದ್ದು ₹ 7 ಲಕ್ಷ ಕೋಟಿಗೂ ಹೆಚ್ಚು ಎಂದು ಹೇಳುವ ಮೂಲಕ ರಾಜ್ಯಕ್ಕೆ ಬಿಜೆಪಿ ಕೊಡುಗೆಯನ್ನು ಸಮರ್ಥಿಸಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ಆಪಾದನೆಗಳಿಗೆ ಅಂಕಿ ಅಂಶಗಳ ಮೂಲಕ ಉತ್ತರ ನೀಡಿದೆ.

ಬಿಜೆಪಿ ಜಾಹಿರಾತಿನಲ್ಲಿ ಏನೇನಿದೆ?

  • ನೆರೆ ಮತ್ತು ಬರ ಪರಿಹಾರ ಹಿಂದಿಗಿಂತ 3 ಪಟ್ಟು ಹೆಚ್ಚಳ ಮಾಡಲಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ₹
  • ರಾಜ್ಯಕ್ಕೆ ತೆರಿಗೆ ಹಂಚಿಕೆ 4 ಪಟ್ಟು ಹೆಚ್ಚಳ ಮಾಡಲಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ₹ 81,795 ಕೋಟಿ ನೀಡಲಾಗಿದ್ದರೆ, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರದ ಅವಧಿಯಲ್ಲಿ ₹ 3 ಲಕ್ಷ ಕೋಟಿಗೂ ಅಧಿಕ ಹಂಚಲಾಗಿದೆ.
  • ಅಭಿವೃದ್ಧಿ ಅನುದಾನವನ್ನೂ 4 ಪಟ್ಟು ಹೆಚ್ಚಳ ಮಾಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಇದು ₹ 60,779 ಕೋಟಿ ಇದ್ದರೆ, ಈಗ ಬಿಜೆಪಿ ಅವಧಿಯಲ್ಲಿ ₹ 2,36,957 ಕೋಟಿಗೂ ಅಧಿಕ ಅನುದಾನ ನೀಡಲಾಗಿದೆ.
  • ಬಡವರ ಕಲ್ಯಾಣಕ್ಕಾಗಿ 4 ಕೋಟಿ ಜನರಿಗೆ ಪ್ರತಿ ತಿಂಗಳು 5 ಕೆಜಿ ಅಕ್ಕಿ ಮತ್ತು ರೇಷನ್ ಅನ್ನು ಉಚಿತವಾಗಿ ನೀಡಲಾಗಿದೆ. 2 ಕೋಟಿ ಬಡವರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಲಾಗಿದೆ.
  • ಮಹಿಳಾಭಿವೃದ್ಧಿ ಯೋಜನೆಯಡಿ 41 ಲಕ್ಷ ಮಹಿಳೆಯರಿಗೆ ಉಚಿತ ಗ್ಯಾಸ್ ಸಂಪರ್ಕ ನೀಡಲಾಗಿದೆ. 2.5 ಲಕ್ಷ ಪಿಎಂ ಆವಾಸ್ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗಿದೆ.
  • ಅನ್ನದಾತರ ಸಬಲೀಕರಣಕ್ಕಾಗಿ 55 ಲಕ್ಷ ರೈತರಿಗೆ ₹ 20,000 ಕಿಸಾನ್ ಸಮ್ಮಾನ್ ನಿಧಿಯನ್ನು ವಿತರಿಸಲಾಗಿದೆ. 56 ಲಕ್ಷ ರೈತರಿಗೆ ₹ 1.33 ಲಕ್ಷ ಕೋಟಿ ಬೆಳೆ ವಿಮೆ ಪರಿಹಾರ ನೀಡಲಾಗಿದೆ.
  • ಮೂಲಭೂತ ಸೌಕರ್ಯದಡಿ 6000 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮಾಡಲಾಗಿದೆ. 6800 ಕಿಮೀ ಹೊಸ ಗ್ರಾಮೀಣ ರಸ್ತೆಗಳ ನಿರ್ಮಾಣ, ಉಡಾನ್ ಯೋಜನೆಯಡಿ 7ವಿಮಾನ ನಿಲ್ದಾಣಗಳ ನಿರ್ಮಾಣ ಮಾಡಲಾಗಿದೆ.
  • ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ದ ಕರ್ನಾಟಕಕ್ಕೆ ನೀಡಿದ್ದ ಕೊಡುಗೆಗಳ ವಿಚಾರದಲ್ಲಿ ಮುಖ್ಯವಾಗಿ ಬರ/ನೆರೆ ಪರಿಹಾರ ಮತ್ತು ತೆರಿಗೆ ಹಂಚಿಗೆ ವಿಚಾರವನ್ನು ಪ್ರಸ್ತಾಪಿಸಿತ್ತು. ಇದಕ್ಕೆ ಬಿಜೆಪಿ ತನ್ನ ಜಾಹೀರಾತಿನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಸರ್ಕಾರಗಳ ಅವಧಿಯಲ್ಲಿ ನೀಡಿರುವ ಕೊಡುಗೆಗಳನ್ನು ತುಲನೆ ಮಾಡಿದೆ.

ಕಾಂಗ್ರೆಸ್ ನಿಂದ ಶಕ್ತಿ ಮಾಲೆಯ ಟಾಂಗ್

ಕಾಂಗ್ರೆಸ್ ಕೂಡ  ತನ್ನ ಚೊಂಬು ಜಾಹೀರಾತನ್ನು ಬುಧವಾರವೂ ಮುಂದುವರಿಸಿದೆ. ಹಾಸನದಲ್ಲಿ ಮಹಿಳೆಯೊಬ್ಬರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೀಡಿದ್ದ ಶಕ್ತಿ ಟಿಕೆಟ್ ಮಾಲೆಯನ್ನೇ ಜಾಹೀರಾತಿನ ವಿಷಯವನ್ನಾಗಿ ಎತ್ತಿಕೊಂಡು ಬಿಜೆಪಿಗೆ ಟಾಂಗ್ ನೀಡಿದೆ. ತನ್ನ ಜಾಹೀರಾತಿನಲ್ಲಿ ಕಾಂಗ್ರೆಸ್ ಪಂಚ ಗ್ಯಾರಂಟಿಗಳಾದ ಗೃಹ ಲಕ್ಷ್ಮೀ, ಗೃಹ ಜ್ಯೋತಿ, ಶಕ್ತಿ, ಅನ್ನಭಾಗ್ಯ, ಯುವನಿಧಿಗಳನ್ನು ಉಲ್ಲೇಖಿಸಿದೆ. ಗ್ಯಾರಂಟಿ ಸರ್ಕಾರಕ್ಕೆ ಉಚಿತ ಬಸ್ ಟಿಕೆಟ್ ಗಳಿಂದ ಮಾಡಿದ ಹಾರವನ್ನು ಮಹಿಳೆಯರು ಅರ್ಪಿಸಿದರೆ, ಚೊಂಬು ಕೊಟ್ಟ ಬಿಜೆಪಿಗೆ ಚೊಂಬೇ ಉಡುಗೊರೆ ಎಂದು ಮೂದಲಿಸಿದೆ. ಕಾಂಗ್ರೆಸ್ ಸರ್ಕಾರ ಗೃಹ ಲಕ್ಷ್ಮೀ ಯೋಜನೆಯಡಿ 1.22 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು 2000 ರೂ ನೀಡುತ್ತಿದೆ. ಗೃಹ ಜ್ಯೋತಿಯಡಿ .5 ಕೋಟಿ ಕುಟುಂಬಗಳಿಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುತ್ತಿದೆ. ಶಕ್ತಿ ಯೋಜನೆಯಡಿ 195.05 ಕೋಟಿ ಮಹಿಳಾ ಉಚಿತ ಟಿಕೆಟ್ ನೀಡಿದೆ. ಅನ್ನಭಾಗ್ಯ ಯೋಜನೆಯಡಿ 4.33 ಕೋಟಿ ಜನತೆಗೆ 10 ಕೆಜಿ ಉಚಿತ ಆಹಾರಧಾನ್ಯ ಒದಗಿಸಲಾಗುತ್ತಿದೆ ಎಂದು ತಿಳಿಸಿದೆ.

Shwetha M

Leave a Reply

Your email address will not be published. Required fields are marked *