ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್?: ಜಡ್ಡು ಪತ್ನಿಗೆ ತಂಗಿಯೇ ಎದುರಾಳಿ!

ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿಗೆ ಬಿಜೆಪಿ ಟಿಕೆಟ್?: ಜಡ್ಡು ಪತ್ನಿಗೆ ತಂಗಿಯೇ ಎದುರಾಳಿ!

ಗಾಂಧಿನಗರ: ಗುಜರಾತಿನಲ್ಲಿ ಚುನಾವಣೆಯ ಅಖಾಡ ರಂಗೇರಿದೆ. ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ತಮ್ಮ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿವೆ. ಅದರಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್ ಸೆಲೆಬ್ರಿಟಿಗಳ ಆಯ್ಕೆಯತ್ತ ಕಣ್ಣಿಟ್ಟಿವೆ. ಇನ್ನು ಜಾಮ್ ನಗರ ಉತ್ತರ ಕ್ಷೇತ್ರದಲ್ಲಿ ಯಾರನ್ನು ಆಖಾಡಕ್ಕಿಳಿಸಬೇಕು ಅನ್ನುವ ವಿಚಾರ ಈಗ ಸಾಕಷ್ಟು ಚರ್ಚೆಯಲ್ಲಿದೆ. ಬಿಜೆಪಿಯಂತೂ ಕ್ರಿಕೆಟಿಗ ರವೀಂದ್ರ ಜಡೇಜಾ ಪತ್ನಿ ರಿವಾಬಾ ಜಡೇಜಾಗೆ ಟಿಕೆಟ್ ನೀಡಲು ಪ್ರಯತ್ನಿಸುತ್ತಿದೆ ಅನ್ನುವ ಮಾತುಗಳೂ ಕೇಳಿಬರುತ್ತಿವೆ. ಜೊತೆಗೆ ರವೀಂದ್ರ ಜಡೇಜಾ ಪತ್ನಿ ರಿವಾಬಾ ಕೂಡಾ ಸ್ಪರ್ಧಿಸುವ ಸೂಚನೆ ನೀಡಿದ್ದಾರೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ದೇಶದ 50ನೇ ಸಿಜೆಐ ಆಗಿ ಡಿವೈ ಚಂದ್ರಚೂಡ್ ಪ್ರಮಾಣ ವಚನ ಸ್ವೀಕಾರ

ಜಾಮ್ ನಗರ ಉತ್ತರ ಕ್ಷೇತ್ರದಲ್ಲಿ ಕ್ರಿಕೆಟಿಗ ರವೀಂದ್ರ ಜಡೇಜಾ ಕುಟುಂಬದ ನಡುವೆ ರಾಜಕೀಯ ಪೈಪೋಟಿ ನಡೆಯೋ ಲಕ್ಷಣಗಳು ಈಗಗಲೇ ಕಂಡು ಬಂದಿದೆ. ಒಂದೆಡೆ ಅವರ ಪತ್ನಿ ರಿವಾಬಾ ಜಡೇಜಾ ಬಿಜೆಪಿ ಪರ ಸ್ಪರ್ಧಿಸುವ ಸಾಧ್ಯತೆಯಿದೆ. ಅವರ ಸಹೋದರಿ ನೈನಾ ಜಡೇಜಾ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸೂಚನೆ ಇದೆ. ಇದರಿಂದ ಸಹಜವಾಗಿಯೇ ಈಗ ರಾಜಕೀಯ ಪಕ್ಷಗಳ ಹಾಗೂ ಜನರ ಗಮನ ಈ ಕ್ಷೇತ್ರದತ್ತ ನೆಟ್ಟಿದೆ.

ರಿವಾಬಾ 2019 ರ ಲೋಕಸಭೆ ಚುನಾವಣೆಗೆ ಮುನ್ನ ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಆ ನಂತರ ಅವರ ಸಹೋದರಿ ನೈನಾ ಕಾಂಗ್ರೆಸ್ ಸೇರಿದ್ದರು. ಜಡೇಜಾ ಅವರ ಸಹೋದರಿ ನೈನಾ ಜಾಮ್ ನಗರದಲ್ಲಿ ಚಿರಪರಿಚಿತರು. ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಅತ್ಯಂತ ಕ್ರಿಯಾಶೀಲ ನಾಯಕಿ. ಧರ್ಮೇಂದ್ರ ಸಿಂಗ್ ಜಡೇಜಾ ಪ್ರಸ್ತುತ ಜಾಮ್ ನಗರ ಉತ್ತರದಿಂದ ಬಿಜೆಪಿ ಶಾಸಕರಾಗಿದ್ದಾರೆ. ಆದರೆ, ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಯಿಂದ ರಿಬಾಬಾಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಚುನಾವಣಾ ಸಂಭಾವಿತರ ಪಟ್ಟಿಯಲ್ಲಿ ಜಡೇಜಾ ಪತ್ನಿ ಹೆಸರು ಇರುವುದಾಗಿ ಕೇಳಿಬಂದಿದೆ.

suddiyaana