ಕಾಂಗ್ರೆಸ್‌ ನ 5 ಗ್ಯಾರಂಟಿಗಳನ್ನು ಲಘುವಾಗಿ ಪರಿಗಣಿಸಿ ಬಿಜೆಪಿ ಯಾಮಾರಿದೆ! – ಪ್ರತಾಪ್‌ ಸಿಂಹ ಹೇಳಿಕೆ  

ಕಾಂಗ್ರೆಸ್‌ ನ 5 ಗ್ಯಾರಂಟಿಗಳನ್ನು ಲಘುವಾಗಿ ಪರಿಗಣಿಸಿ ಬಿಜೆಪಿ ಯಾಮಾರಿದೆ! – ಪ್ರತಾಪ್‌ ಸಿಂಹ ಹೇಳಿಕೆ  

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್‌ ಘೋಷಿಸಿದ್ದ ಐದು ಗ್ಯಾರಂಟಿಗಳನ್ನು ಈಗಾಗಲೇ ಜಾರಿ ಮಾಡಿದೆ. ಆದರೆ ವಿರೋಧ ಪಕ್ಷದ ನಾಯಕರು ಮಾತ್ರ ಈ ಐದು ಗ್ಯಾರಂಟಿಗಳ ವಿರುದ್ಧ ಕಿಡಿಕಾರುತ್ತಲೇ ಬಂದಿದ್ದಾರೆ. ಇದೀಗ ಸಂಸದ ಪ್ರತಾಪ್‌ ಸಿಂಹ, ಕಾಂಗ್ರೆಸ್‌ ನ ಐದು ಗ್ಯಾರಂಟಿಗಳನ್ನು ಲಘುವಾಗಿ ತೆಗೆದುಕೊಂಡು ಯಾವಾರಿದೆವು ಎಂದು ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರತಾಪ್‌ ಸಿಂಹ,  ‘ಕಾಂಗ್ರೆಸ್​ನವರ ಗ್ಯಾರಂಟಿಗಳನ್ನು ಲಘುವಾಗಿ ತೆಗೆದುಕೊಂಡು ಬಿಜೆಪಿಯವರಾದ ನಾವು ಚುನಾವಣೆಗಿಂತ ಮೊದಲು ಯಾಮಾರಿದೆವು’ಎಂದು ಹೇಳಿದ್ದಾರೆ.

ಇದನ್ನೂ ಓದಿ; ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷ ಸ್ಥಾನ ತಿರಸ್ಕರಿಸಿದ ಸಾಹಿತಿ ಬರಗೂರು ರಾಮಚಂದ್ರಪ್ಪ

ಕಾಂಗ್ರೆಸ್​ನವರ ಗ್ಯಾರಂಟಿ ಯೋಜನೆಯ ಬಗ್ಗೆ ಲಘುವಾಗಿ ಪರಿಗಣಿಸಿ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯವರಾದ ನಾವು ಮೋಸ ಹೋದೆವು. ಇದೀಗ ಗ್ಯಾರಂಟಿಗಳನ್ನು ಗಂಭೀರವಾಗಿ ತೆಗೆದುಕೊಂಡು ಕಾಂಗ್ರೆಸ್​ಗೆ ಮತ ಹಾಕಿ ಮೋಸ ಹೋದೆ ಎಂಬುದು ಮತದಾರನಿಗೆ ಈಗ ಅನುಭವ ಆಗುತ್ತಿದೆ ಎಂದು ಹೇಳಿದ್ದಾರೆ.

ಸ್ವಾತಂತ್ರ್ಯ ಪೂರ್ವದಲ್ಲಿ ಟೋಪಿ ಹಾಕಿಕೊಂಡವರನ್ನು ನೋಡಿದರೆ ಜನ ಅವರನ್ನು ಕಾಂಗ್ರೆಸ್ಸಿಗರು ಎನ್ನುತ್ತಿದ್ದರು. ಆದರೆ ಈಗ ಕಾಂಗ್ರೆಸ್ಸಿಗರನ್ನು ನೋಡಿದರೆ ಟೋಪಿ ಹಾಕುವವರು ಎಂದು ಜನ ಆಡಿಕೊಳ್ಳುವಂತಾಗಿದೆ ಎಂದು ಪ್ರತಾಪ್‌ ಸಿಂಹ ವ್ಯಂಗ್ಯವಾಡಿದ್ದಾರೆ.

suddiyaana