ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ! – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಕರ್ನಾಟಕದಲ್ಲಿ ಶಾಂತಿ, ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ! – ಕಾಂಗ್ರೆಸ್‌ ವಿರುದ್ಧ ಬಿಜೆಪಿ ಕಿಡಿ

ಬೆಂಗಳೂರು: ಕಾಂಗ್ರೆಸ್‌ ವಿಧಾನಸಭಾ ಚುನಾವಣೆ ವೇಳೆ ಘೋಷಿಸಿದ್ದ ಐದು ಗ್ಯಾರಂಟಿಗಳು ಹಂತ ಹಂತವಾಗಿ ಜಾರಿಗೆ ಬರುತ್ತಿದೆ. ಈ ಬೆನ್ನಲ್ಲೇ ವಿದ್ಯುತ್‌ ದರ, ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಬಗ್ಗೆ ರಾಜ್ಯ ಬಿಜೆಪಿ ಕಿಡಿಕಾರಿದೆ. ಗ್ಯಾರಂಟಿಗಳನ್ನು ಈಡೇರಿಸುವ ಉದ್ದೇಶದಿಂದಲೇ ಕಾಂಗ್ರೆಸ್‌ ಬೆಲೆ ಏರಿಕೆ ಮಾಡುತ್ತಿದೆ ಎಂದು ಬಿಜೆಪಿ ಟೀಕಿಸಿದೆ.

ಈ ಬಗ್ಗೆ ಸರಣಿ ಟ್ವೀಟ್‌ ಮಾಡಿರುವ ಬಿಜೆಪಿ, ವಿದ್ಯುತ್, ಮದ್ಯಪಾನ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಮೇಲಿನ ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದೆ.

ಇದನ್ನೂ ಓದಿ: ಉಚಿತವಾಗಿ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡುವ ಗಡುವು ವಿಸ್ತರಣೆ – ಸೆ. 14ರವರೆಗೆ ಅಪ್‌ಡೇಟ್‌ ಮಾಡಲು ಕಾಲಾವಕಾಶ

‘ರಾಜ್ಯದ ಕಾಂಗ್ರೆಸ್‌ ಸರ್ಕಾರ ತನ್ನ ಖಜಾನೆ ತುಂಬಿಸಿಕೊಳ್ಳಲು ಜನರಿಂದ ದರೋಡೆ ಮಾಡುತ್ತಿದೆ. ಬಿಟ್ಟಿ ಗ್ಯಾರಂಟಿಗಳ ಆಸೆ ತೋರಿಸಿ ಜನರಿಗೆ ವಂಚಿಸುತ್ತಿರುವ ಹಿಟ್ಲರ್ ಸರ್ಕಾರ (ಕಾಂಗ್ರೆಸ್) ಏಕಾಏಕಿ ವಿದ್ಯುತ್ ದರ ಏರಿಕೆ ಮಾಡಿ, ಕುಡಿಯುವ ನೀರಿನ ಬೆಲೆಯನ್ನೂ ಹೆಚ್ಚಿಸಿತ್ತು. ನಂದಿನಿ ಹಾಲು ಮುಂದೆ ಇಟ್ಟುಕೊಂಡು ನೀಚ ರಾಜಕೀಯ ಮಾಡಿದ್ದ ಕಾಂಗ್ರೆಸ್ ಇದೀಗ ಹಾಲಿನ ಬೆಲೆಯಲ್ಲಿಯೂ ಕೈ ಆಡಿಸುವ ಮೂಲಕ ತನ್ನ ಅಸಲಿ ರೂಪವನ್ನು ತೋರಿಸಿದೆ’ ಎಂದು ಬಿಜೆಪಿ ಆಕ್ರೋಶ ಹೊರಹಾಕಿದೆ.

‘ಧನದಾಹಿ ಎಟಿಎಮ್ ಸರ್ಕಾರದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರ ಗ್ಯಾರಂಟಿ ಕೊಡುಗೆಗಳು.. 1ನೇ ಗ್ಯಾರಂಟಿ ವಿದ್ಯುತ್ ದರ ಏರಿಕೆ, 2ನೇ ಗ್ಯಾರಂಟಿ ಕುಡಿಯುವ ನೀರಿನ ಬೆಲೆ ಏರಿಕೆ, 3ನೇ ಗ್ಯಾರಂಟಿ ಸದ್ದಿಲ್ಲದೆ ಕೆಎಸ್‌ಆರ್‌ಟಿಸಿ ಟಿಕೆಟ್ ದರ ಏರಿಕೆ, 4ನೇ ಗ್ಯಾರಂಟಿ ಮದ್ಯಪಾನದ ಬೆಲೆಯೂ ಏರಿಕೆ, 5ನೇ ಗ್ಯಾರಂಟಿ ನಂದಿನಿ ಹಾಲಿನ ದರವೂ ಏರಿಕೆ, 6ನೇ ಗ್ಯಾರಂಟಿ ಆಸ್ತಿ ನೋಂದಣಿ ಶುಲ್ಕ ಏರಿಕೆ, 7ನೇ ಗ್ಯಾರಂಟಿ ಮೊಟ್ಟೆ, ಮಾಂಸದ ದರವೂ ಏರಿಕೆ, ಕರ್ನಾಟಕದಲ್ಲಿ ಶಾಂತಿ ನೆಮ್ಮದಿ ಇಳಿಕೆ, ಜನಸಾಮಾನ್ಯರ ಆತಂಕ ಏರಿಕೆ’ ಎಂದು ಬಿಜೆಪಿ ಕಿಡಿಕಾರಿದೆ.

suddiyaana