ಬಂಡಾಯ ಅಭ್ಯರ್ಥಿ ಕೆಎಸ್​ ಈಶ್ವರಪ್ಪ ನಾಮಪತ್ರ ಸಲ್ಲಿಕೆ – ಬಿಜೆಪಿಯಿಂದ ನೋಟಿಸ್​ ಸಾಧ್ಯತೆ

ಬಂಡಾಯ ಅಭ್ಯರ್ಥಿ ಕೆಎಸ್​ ಈಶ್ವರಪ್ಪ ನಾಮಪತ್ರ ಸಲ್ಲಿಕೆ – ಬಿಜೆಪಿಯಿಂದ ನೋಟಿಸ್​ ಸಾಧ್ಯತೆ

ಇಂದಿನಿಂದ 2ನೇ ಹಂತದ ನಾಮಪತ್ರ ಭರಾಟೆ ಶುರುವಾಗಿದೆ. ಪುತ್ರ ಕಾಂತೇಶ್​ಗೆ ಹಾವೇರಿ ಲೋಕಸಭಾ ಕ್ಷೇತ್ರದ ಟಿಕೆಟ್​ ಸಿಗದ ಹಿನ್ನೆಲೆಯಲ್ಲಿ ಕೆಎಸ್‌ ಈಶ್ವರಪ್ಪ ಅಸಮಾಧಾನಗೊಂಡಿದ್ದಾರೆ. ಬಿಜೆಪಿ ವಿರುದ್ಧ ಬಂಡಾಯ ಎದ್ದಿರುವ ಈಶ್ವರಪ್ಪ ಪಕ್ಷೇತರ ಅಭ್ಯರ್ಥಿಯಾಗಿ ಶಿವಮೊಗ್ಗ ಲೋಕಸಭೆ ಕ್ಷೇತ್ರದಲ್ಲಿ ಕಣಕ್ಕೆ ಇಳಿದಿದ್ದಾರೆ.

ಇದನ್ನೂ ಓದಿ:  ಈಶ್ವರಪ್ಪ ಬೆನ್ನಿಗೆ ನಿಂತ ಯತ್ನಾಳ್.. – ಬಿಎಸ್‌ವೈ ಫ್ಯಾಮಿಲಿಗೆ ಬಿಗ್ ಶಾಕ್

ಇವತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ನಾಮಪತ್ರ ಸಲ್ಲಿಸಿದರು. ಸಾವಿರಾರು ಬೆಂಬಲಿಗರ ಜೊತೆ ಬೃಹತ್‌ ಮೆರವಣಿಗೆ ಮುಖಾಂತರ ಬಂದು ಉಮೇದುವಾರಿಕೆ ಸಲ್ಲಿಸಿ ಶಕ್ರಿ ಪ್ರದರ್ಶನ ಮಾಡಿದ್ರು. ನಾಮ ಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಈಶ್ವರಪ್ಪ   ಶಿವಮೊಗ್ಗ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದೇನೆ. ಪ್ರತಿ ಮನೆ ಮನೆಗೆ ಹೋಗಿ ಈಶ್ವರಪ್ಪ ಏಕೆ ಚುನಾವಣೆಗೆ ನಿಂತಿದ್ದಾರೆ, ಏನು ಅನ್ಯಾಯ ಆಗಿದೆ ಅಂತ ನಮ್ಮ ಕಾರ್ಯಕರ್ತರು ತಿಳಿಸುತ್ತಾರೆ. ಅಪ್ಪ ಮಕ್ಕಳ ಕೈಯಲ್ಲಿ ಪಕ್ಷ ಏಕೆ ಇದೆ? ಚುನಾವಣೆ ಬಳಿಕ ನಂತರ ಬಿಜೆಪಿಯಲ್ಲಿ ಕೆಲವು ಬದಲಾವಣೆ ಆಗುತ್ತದೆ. ಪಕ್ಷ ಶುದ್ದೀಕರಣ ಆಗುವ ವಿಶ್ವಾಸ ಇದೆ. ರಾಜ್ಯ ಬಿಜೆಪಿಯಲ್ಲಿನ ಕುಟುಂಬ ರಾಜಕಾರಣದ ವಿರೋಧಿಸಿ ಸ್ಪರ್ಧೆ ಮಾಡುತ್ತಿದ್ದೇನೆ ಅಂತಾ ಹೇಳಿದ್ದಾರೆ. ಇನ್ನು ಪಕ್ಷದ ವಿರುದ್ಧ ಬಂಡಾಯವೆದ್ದು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಕೆ ಮಾಡಿರುವ ಈಶ್ವರಪ್ಪಗೆ ಬಿಜೆಪಿ ನೋಟಿಸ್​ ನೀಡುವ ಸಾಧ್ಯತೆ ಇದೆ.

Shwetha M