ಬಿಜೆಪಿಯಿಂದ ಕೇಜ್ರಿವಾಲ್ ವಿರುದ್ಧ ‘ದಿಲ್ಲಿ ಕಾ ಲಡ್ಕಾ’ಕಾರ್ಟೂನ್ ಟ್ವೀಟ್
ನವದೆಹಲಿ: ದೆಹಲಿಯಲ್ಲಿ ಡಿ. 4 ರಂದು ನಡೆಯಲಿರುವ ನಾಗರಿಕ ಸಂಸ್ಥೆ ಚುನಾವಣೆಗೆ ಭರದಿಂದ ಸಿದ್ದತೆಗಳು ನಡೆಯುತ್ತಿದೆ. ಇದರ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ವೈಫಲ್ಯಗಳನ್ನು ಬಹಿರಂಗಪಡಿಸುವ ಉದ್ದೇಶದಿಂದ ಬಿಜೆಪಿ ‘ದಿಲ್ಲಿ ಕಾ ಲಡ್ಕಾ’ಎಂಬ ಕಾರ್ಟೂನ್ ಸರಣಿಯನ್ನು ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ಎಂಸಿಡಿ ಚುನಾವಣೆಗೆ ಒಂದು ವಾರ ಬಾಕಿ ಇರುವಾಗಲೇ ಬಿಜೆಪಿ, ಆಪ್ ಸರ್ಕಾರದ ವಿರುದ್ಧ ಕಾರ್ಟೂನ್ ಸರಣಿ ಬಿಡುಗಡೆ ಮಾಡಿದೆ. ಜೈಲಿನಲ್ಲಿರುವ ಆಪ್ ನಾಯಕ ಸತ್ಯೇಂದ್ರ ಜೈನ್ ಅವರ ಮೇಲೆ ಬಿಜೆಪಿ ಹಲವಾರು ಅನಿಮೇಷನ್‌ಗಳು ಮತ್ತು ಕಾರ್ಟೂನ್‌ಗಳನ್ನು ಪೋಸ್ಟ್ ಮಾಡುತ್ತಿದೆ. ಜೈಲಿನೊಳಗೆ ಸತ್ಯೇಂದ್ರ ಜೈನ್ ಅವರಿಗೆ ವಿಶೇಷ ಚಿಕಿತ್ಸೆ ನೀಡಲಾಗುತ್ತಿದೆ ಎಂಬುದನ್ನು ಸಾಬೀತುಪಡಿಸುವ ಅನೇಕ ಸಿಸಿಟಿವಿ ವಿಡಿಯೋಗಳನ್ನು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಲಾಗುತ್ತಿದೆ.
ಇದನ್ನೂ ಓದಿ: ಇಟಲಿಯಲ್ಲಿ ಭೂಕುಸಿತ- ನವಜಾತ ಶಿಶು ಸೇರಿ ಏಳು ಮಂದಿ ಸಾವು, ಐವರು ನಾಪತ್ತೆ
ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ದೃಶ್ಯದಲ್ಲಿ ವ್ಯಕ್ತಿಯೊಬ್ಬ ಸತ್ಯೇಂದ್ರ ಜೈನ್‌ಗೆ ತನ್ನ ಜೈಲಿನ ಕೊಠಡಿಯೊಳಗೆ ಕಾಲು ಮಸಾಜ್ ಮಾಡುವುದನ್ನು ಕಾಣಬಹುದು. ಆ ವ್ಯಕ್ತಿ ರಿಂಕು ಎಂದು ಹೇಳಲಾಗಿದ್ದು, ಆತ ತನ್ನ ಸ್ವಂತ ಅಪ್ರಾಪ್ತ ಮಗಳ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇಲೆ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಖೈದಿಯಾಗಿದ್ದಾನೆ. ಈ ರೀತಿಯ ಇನ್ನೂ ಕೆಲವು ವಿಡಿಯೋಗಳು ಕೂಡ ವೈರಲ್ ಆಗಿವೆ.
‘जेल में करो कुछ इंतजाम, वरना मैं ले लूंगा तुम्हारा नाम…’
देखिए…जेल में केजरीवाल के खास राजदार सत्येन्द्र जैन के ठाठ। pic.twitter.com/W9tqWPNvYe
— BJP (@BJP4India) November 27, 2022
ಈ ಕಾರ್ಟೂನ್ ಸರಣಿಯನ್ನು ಮತದಾನದ ಮೊದಲು ವೈರಲ್ ಮಾಡಲು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಪೋಸ್ಟ್ ಮಾಡಲಾಗುತ್ತದೆ. ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ನ 250 ವಾರ್ಡ್‌ಗಳಿಗೆ ಡಿಸೆಂಬರ್ 4ರಂದು ಚುನಾವಣೆ ನಡೆಯಲಿದೆ.
गरीबों के सपने का सम्मान हुआ,
जहां झुग्गी थी, वहां मकान हुआ। pic.twitter.com/1LBuuYzbFP— BJP Delhi (@BJP4Delhi) November 27, 2022