ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?

ಬಿಜೆಪಿ ಅಭ್ಯರ್ಥಿಗಳ 2ನೇ ಪಟ್ಟಿ ರಿಲೀಸ್ – ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್?

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಂಗಳವಾರ ರಾತ್ರಿ ಬಿಡುಗಡೆ ಮಾಡಿದ್ದ ಬಿಜೆಪಿ ಇದೀಗ ಎರಡನೇ ಪಟ್ಟಿಯನ್ನು ಬುಧವಾರ ರಾತ್ರಿ 11 ಗಂಟೆಗೆ ಬಿಡುಗಡೆ ಮಾಡಿದೆ. ಎರಡನೇ ಪಟ್ಟಿಯಲ್ಲಿ 23 ಅಭ್ಯರ್ಥಿಗಳಿಗೆ ಟಿಕೆಟ್ ಘೋಷಿಸಲಾಗಿದೆ. 224 ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಮಾತ್ರ ಬಾಕಿ ಉಳಿದಿದ್ದು, ಇಂದು ಬಿಡುಗಡೆಯಾಗುವ ಎಲ್ಲಾ ಸಾಧ್ಯತೆಗಳಿವೆ. 7 ಮಂದಿ ಶಾಸಕರಿಗೆ ಟಿಕೆಟ್ ಕೈತಪ್ಪಿದೆ.

ಎರಡನೇ ಪಟ್ಟಿಯಲ್ಲಿ ಯಾರಿಗೆಲ್ಲ ಬಿಜೆಪಿ ಟಿಕೆಟ್?

  • ದೇವರಹಿಪ್ಪರಗಿ – ಸೋಮನಗೌಡ ಪಾಟೀಲ್ಬ
  • ಸವನಬಾಗೇವಾಡಿ – ಎಸ್​.ಕೆ. ಬೆಳ್ಳುಬ್ಬಿ
  • ಇಂಡಿ – ಕಾಸಗೌಡ ಬಿರಾದಾರ್
  • ಗುರುಮಿಠಕಲ್ – ಲಲಿತ ಅನಾಪೂರ್
  • ಬೀದರ್ – ಈಶ್ವರ್ ಸಿಂಗ್ ಠಾಕೂರ್
  • ಬಾಲ್ಕಿ- ಪ್ರಕಾಶ್ ಖಂಡ್ರೆ
  • ಗಂಗಾವತಿ – ಪ್ರಸನ್ನ ಮುನವಳ್ಳಿ
  • ಕಲಘಟಗಿ – ನಾಗರಾಜ್ ಛಬ್ಬಿ
  • ಹಾನಗಲ್ – ಶಿವರಾಜ್ ಸಜ್ಜನರ್ಹಾ
  • ವೇರಿ (ಎಸ್​ಸಿ) – ಗವಿಸಿದ್ದಪ್ಪ ದ್ಯಾಮಣ್ಣನವರ್
  • ಹರಪ್ಪನಹಳ್ಳಿ – ಕರುಣಾಕರ ರೆಡ್ಡಿ
  • ದಾವಣಗೆರೆ ಉತ್ತರ – ಲೋಕೀಕೆರೆ ನಾಗರಾಜ್
  • ದಾವಣಗೆರೆ ದಕ್ಷಿಣ – ಅಜಯ್ ಕುಮಾರ್
  • ಮಾಯಕೊಂಡ (ಎಸ್​ಸಿ) – ಬಸವರಾಜ ನಾಯ್ಕ್
  • ಚನ್ನಗಿರಿ – ಶಿವಕುಮಾರ್
  • ಬೈಂದೂರು – ಗುರುರಾಜ್ ಗಂಟಿಹೊಳೆ
  • ಮೂಡಿಗೆರೆ (ಎಸ್​ಸಿ) – ದೀಪಕ್ ದೊಡ್ಡಯ್ಯ
  • ಗುಬ್ಬಿ – ಎಸ್​ಡಿ ದಿಲೀಪ್ ಕುಮಾರ್
  • ಶಿಡ್ಲಘಟ್ಟ – ರಾಮಚಂದ್ರ ಗೌಡ
  • ಕೆಜಿಎಫ್ (ಎಸ್​ಸಿ) – ಅಶ್ವಿನಿ ಸಂಪಂಗಿ
  • ಶ್ರವಣಬೆಳಗೊಳ- ಚಿದಾನಂದ
  • ಅರಸೀಕೆರೆ- ಜಿ. ವಿ ಬಸವರಾಜು
  • ಹೆಗ್ಗಡದೇವನಕೋಟೆ- ಕೃಷ್ಣ ನಾಯ್ಕ್

suddiyaana