‘ಪತಿ ಹೆಚ್.ಡಿ ರೇವಣ್ಣ ವಿರುದ್ಧ ಪತ್ನಿ ಭವಾನಿ ಸ್ಪರ್ಧೆ’ – ಟಿಕೆಟ್ ಆಫರ್.. ಏನಿದು ಪಾಲಿಟಿಕ್ಸ್..!?  

‘ಪತಿ ಹೆಚ್.ಡಿ ರೇವಣ್ಣ ವಿರುದ್ಧ ಪತ್ನಿ ಭವಾನಿ ಸ್ಪರ್ಧೆ’ – ಟಿಕೆಟ್ ಆಫರ್.. ಏನಿದು ಪಾಲಿಟಿಕ್ಸ್..!?  

ಹಾಸನ ಕ್ಷೇತ್ರಕ್ಕೆ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಘಂಟಾಘೋಷವಾಗಿ ಹೇಳಿದ್ದ ಭವಾನಿರೇವಣ್ಣ ಬಿಜೆಪಿ  ಅಭ್ಯರ್ಥಿಯಾಗ್ತಾರಾ? ಪತಿ ಹೆಚ್.ಡಿ ರೇವಣ್ಣ ವಿರುದ್ಧವೇ ಸ್ಪರ್ಧೆ ಮಾಡ್ತಾರಾ? ಅದೂ ಕೂಡ ರೇವಣ್ಣ ಪ್ರತಿನಿಧಿಸೋ ಹೊಳೆನರಸೀಪುರ ಕ್ಷೇತ್ರದಿಂದಲೇ ಬಿಜೆಪಿ ಅಭ್ಯರ್ಥಿಯಾಗ್ತಾರಾ? ಅರೆ ಇದೇಗೆ ಸಾಧ್ಯ ಅಂತೀರಾ. ಮುಂದೆ ಓದಿ.

ಹಾಸನ ಕ್ಷೇತ್ರದ ಟಿಕೆಟ್ ವಿಚಾರಕ್ಕೆ ಜೆಡಿಎಸ್​ನಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ಹಾಸನ ಕ್ಷೇತ್ರದಿಂದ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಭವಾನಿ ರೇವಣ್ಣ ತಯಾರಿ ಮಾಡಿಕೊಳ್ತಿದ್ದಾರೆ. ಆದ್ರೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾತ್ರ ಭವಾನಿಗೆ ಟಿಕೆಟ್ ಇಲ್ಲ ಅಂದಿದ್ದಾರೆ. ಇದೇ ವಿಚಾರ ಈಗ ಬಿಜೆಪಿಗೆ ಆಹಾರವಾಗಿದ್ದು, ಹಾಸ್ಯಾಸ್ಪದವಾಗಿ ಆಫರ್ ಕೊಟ್ಟಿದ್ದಾರೆ. ಭವಾನಿ ರೇವಣ್ಣಗೆ ಹೊಳೆನರಸೀಪುರದ ಬಿಜೆಪಿ ಟಿಕೆಟ್ ಕೊಡೋದಾಗಿ ವ್ಯಂಗ್ಯವಾಗಿ ಆಹ್ವಾನ ನೀಡಿದ್ದಾರೆ.

ಇದನ್ನೂ ಓದಿ : ‘ಅನಿತಾಗೆ ಟಿಕೆಟ್ ಕೊಟ್ರೆ ನಂಗೂ ಕೊಡಿ’ – ಭವಾನಿ ರೇವಣ್ಣ ಪಟ್ಟು, ‘ದೊಡ್ಡಗೌಡ್ರ’ ಮನೆಯಲ್ಲಿ ಕಗ್ಗಂಟು!

ಟಿಕೆಟ್ ಸಮರದ ವಿಚಾರವಾಗಿ ಮಾತನಾಡಿರೋ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ, ಭವಾನಿ ರೇವಣ್ಣ ಹಾಗೂ ಹೆಚ್​ಡಿ ಕುಮಾರಸ್ವಾಮಿ ಇಬ್ಬರ ಹೇಳಿಕೆಗಳನ್ನೂ ಗಮನಿಸಿದ್ದೇನೆ. ನಾನು ಅವ್ರ ಮನೆಯ ಗಲಾಟೆ ಜಾಸ್ತಿ ಮಾಡೋಕೆ ಬಯಸಲ್ಲ. ಬೇಕಿದ್ರೆ ಹೊಳೇನರಸೀಪುರ ಕ್ಷೇತ್ರಕ್ಕೆ ಭವಾನಿ ರೇವಣ್ಣ ಬಿಜೆಪಿ ಅಭ್ಯರ್ಥಿಯಾಗಲಿ. ಭವಾನಿಗಿಂತ ಉತ್ತಮ ಕ್ಯಾಂಡಿಡೇಟ್ ಹೊಳೆನರಸೀಪುರಕ್ಕೆ ಮತ್ತೊಬ್ಬರಿಲ್ಲ. ಹೀಗಾಗಿ ಭವಾನಿಯವ್ರನ್ನ ಹೊಳೆನರಸೀಪುರದಲ್ಲಿ ನಮ್ಮ ಕ್ಯಾಂಡಿಡೇಟ್ ಆಗಿ ಅಂತಾ ಹೇಳೋಣ ಅನ್ಕೊಂಡೆ. ಆದ್ರೆ ನಾನ್ಯಾಕೆ ರೇವಣ್ಣವ್ರು, ಭವಾನಿ ಅಕ್ಕನವ್ರ ನಡುವೆ ಜಗಳ ಹಚ್ಚಲಿ. ಹೀಗಾಗಿ ನಾನು ಏನು ಹೇಳಲ್ಲ ಅಂತಾ ಸಿ.ಟಿ ರವಿ ಕಾಮಿಡಿಯಾಗಿ ಮಾತಾಡಿದ್ದಾರೆ.

ಹೊಳೆನರಸೀಪುರ ಹೆಚ್.ಡಿ ರೇವಣ್ಣ ಸ್ಪರ್ಧಿಸೋ ಕ್ಷೇತ್ರ. ಹೀಗಾಗಿ ಜೆಡಿಎಸ್​ನಿಂದ ರೇವಣ್ಣ ಸ್ಪರ್ಧಿಸಿದ್ರೆ ಬಿಜೆಪಿಯಿಂದ ಪತ್ನಿ ಭವಾನಿ ಸ್ಪರ್ಧಿಸಲಿ ಅಂತಾ ಸಿ.ಟಿ ರವಿ ಹಾಸ್ಯಾಸ್ಪದವಾಗಿ ಹೇಳಿದ್ದಾರೆ.

 

suddiyaana