KSDL ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ – ಬಿಜೆಪಿ ಶಾಸಕ ಬಂಧನವಾಗೋದು ಫಿಕ್ಸಾ..?

KSDL ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್ ವಿರೂಪಾಕ್ಷಪ್ಪ ರಾಜೀನಾಮೆ – ಬಿಜೆಪಿ ಶಾಸಕ ಬಂಧನವಾಗೋದು ಫಿಕ್ಸಾ..?

ರಾಜ್ಯ ರಾಜಕೀಯದಲ್ಲಿ ಇವತ್ತು ಭಾರೀ ಸಂಚಲನ ಸೃಷ್ಟಿಸಿರುವ ಲೋಕಾಯುಕ್ತ ರೇಡ್ ನಲ್ಲಿ ಬಿಜೆಪಿ ಶಾಸಕರ ತಲೆದಂಡವಾಗಿದೆ. ಪುತ್ರನ ಅಂಧಾದರ್ಬಾರ್ ಅಪ್ಪನಿಗೆ ಸಂಕಷ್ಟ ತಂದೊಡ್ಡಿದೆ. ಹಾಗೇ ಬಿಜೆಪಿಗೂ ಮುಜುಗರ ಉಂಟು ಮಾಡಿದೆ.

ದಾವಣಗೆರೆ ಜಿಲ್ಲೆ ಚನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಪುತ್ರನ ದುಡ್ಡಿನ ಗಂಟು ಸಂಕಷ್ಟ ತಂದಿಟ್ಟಿದೆ. ಮಾಡಾಳ್ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್​ಡಿಎಲ್)​ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಪುತ್ರ ಮಾಡಾಳ್ ಪ್ರಶಾಂತ್​ ಬಂಧನದ ನಂತರ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದರು. ಅದರಂತೆ ವಿರೂಪಾಕ್ಷಪ್ಪ ತಮ್ಮ ಆಪ್ತರ ಮೂಲಕ ಸಿಎಂ ಕಚೇರಿಗೆ ರಾಜೀನಾಮೆ ಪತ್ರ ರವಾನಿಸಿದ್ದಾರೆ.

ಇದನ್ನೂ ಓದಿ : ಬಿಜೆಪಿ ಶಾಸಕನ ಪುತ್ರನ ಮನೆಯಲ್ಲಿ ರಾಶಿ ರಾಶಿ ದುಡ್ಡು – ₹8 ಕೋಟಿ ಹಣದ ಹಿಂದಿನ ಗುಟ್ಟೇನು..?

ಮಾಜಿ ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪನವರ ಆಪ್ತರಾಗಿರುವ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಅವರಿಗೆ ಕರ್ನಾಟಕ ಸಾಬೂನು ಮತ್ತು ಮಾರ್ಜಕ ಕಾರ್ಖಾನೆ (ಕೆಎಸ್​ಡಿಎಲ್)​ ನಿಗಮ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದೀಗ ಅವರ ಪುತ್ರ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಈ ಮುಜುಗರರಿಂದ ತಪ್ಪಿಸಿಕೊಳ್ಳಲು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಸಿಎಂ ಸೂಚನೆ ನೀಡಿದ್ದರು. ಯಾಕಂದ್ರೆ ವಿರೂಪಾಕ್ಷಪ್ಪರನ್ನ ಬಂಧಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ರಾಜೀನಾಮೆ ನೀಡುವಂತೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಅಷ್ಟಕ್ಕೂ ದಾಳಿ ವೇಳೆ 8 ಕೋಟಿ ನಗದು ಪತ್ತೆಯಾಗಿರೋದ್ರಿಂದ ಬಿಜೆಪಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಬಂಧನ ಸಾಧ್ಯತೆ ಇದೆ. ತಂದೆ ಮಾಡಾಳ್ ಪರವಾಗಿ ಪ್ರಶಾಂತ್ ಹಣ ಸ್ವೀಕರಿಸುತ್ತಿದ್ದಾರೆ ಎಂದು ದೂರುದಾರ ದೂರಿನಲ್ಲಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರಿಂದ ಶಾಸಕ ಮಾಡಾಳ್ ಬಂಧನ ಸಾಧ್ಯತೆ ಇದೆ ಎನ್ನಲಾಗಿದೆ. ಅಲ್ಲದೆ ಪ್ರಶಾಂತ್ ಹಾಗೂ ವಿರುಪಾಕ್ಷಪ್ಪ ತಂದೆ ಮಗ ಆಗಿದ್ದಾರೆ. ಜೊತೆಗೆ ಟೆಂಡರ್ ಕರೆದಿದ್ದು ಕೆ ಎಸ್ ಡಿ ಎಲ್ ಕಚ್ಚಾ ವಸ್ತು ಸರಬರಾಜು ಸಂಬಂಧ. ಆದರೆ ಪ್ರಶಾಂತ್ BWSSB ಅಧಿಕಾರಿಯಾಗಿದ್ದು,  BWSSB ಹಾಗೂ KSDL ಗೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ತಂದೆಯ ಪರವಾಗಿಯೇ ಹಣ ಸ್ವೀಕರಿಸುತ್ತಿರುವುದು ಪ್ರಾಥಮಿಕವಾಗಿ ಧೃಡಪಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಮಾಡಾಳ್ ವಿರೂಪಾಕ್ಷಪ್ಪರನ್ನ ಬಂಧಿಸೋ ಸಾಧ್ಯತೆ ಇದೆ.

ಈಗಾಗ್ಲೇ ಲೋಕಾಯುಕ್ತ ಪೊಲೀಸರು ಶಾಸಕರ ಪುತ್ರ ಪ್ರಶಾಂತ್ ಸೇರಿ ನಾಲ್ವರನ್ನು ಬಂಧಿಸಿ ನ್ಯಾಯಲಯದ ಮುಂದೆ ಹಾಜರು ಪಡಿಸಿದ್ದಾರೆ. ಪ್ರಶಾಂತ್ ಮಾಡಾಳ್, ಸಿದ್ದೇಶ್ (ಸಂಬಂಧಿ), ಸುರೇಂದ್ರ (ಅಕೌಂಟೆಂಟ್), ನಿಕೋಲಸ್, ಗಂಗಾಧರ್ ರನ್ನ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

suddiyaana