ಬಿಜೆಪಿ ನಾಯಕನಾಗಲು ಒಂದೇ ಒಂದು ಮನುಷ್ಯಾಕೃತಿ ಇಲ್ಲ! – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟ್ವೀಟಾಸ್ತ್ರ

ಬಿಜೆಪಿ ನಾಯಕನಾಗಲು ಒಂದೇ ಒಂದು ಮನುಷ್ಯಾಕೃತಿ ಇಲ್ಲ! – ಬಿಜೆಪಿ ವಿರುದ್ಧ ಕಾಂಗ್ರೆಸ್‌ ಟ್ವೀಟಾಸ್ತ್ರ

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನ ಪಡೆದುಕೊಳ್ಳಲು ಫೈಟ್​ ಶುರುವಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಗೆದ್ದವರು ಹಾಗೂ ಸೋತ ಘಟಾನುಘಟಿ ನಾಯಕರು ರಾಜ್ಯಾಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಿದ್ದಾರೆ. ಚುನಾವಣೆಯಲ್ಲಿ ಸೋತ ನಾಯಕರು, ನಾವು ಕಳೆದ ಒಂದೂವರೆ ತಿಂಗಳಿನಿಂದ ಖಾಲಿ ಇದ್ದೀವಿ. ನಮಗೆ ರಾಜ್ಯಾಧ್ಯಕ್ಷರ ಸ್ಥಾನವನ್ನಾದರೂ ನೀಡಿ. ಆ ಮೂಲಕ ಪಕ್ಷದ ಸಂಘಟನೆಗೆ ಅವಕಾಶ ಕೊಡಿ ಅಂತ ಹೈಕಮಾಂಡ್ ಎದುರು ಬೇಡಿಕೆ ಇಟ್ಟಿದ್ದಾರೆ. ಇತ್ತ ಕೆಲ ನಾಯಕರು ಪಕ್ಷ ಸಂಘಟನೆ, ಸಿದ್ಧಾಂತ, ವರ್ಚಸ್ಸು ಹಾಗೂ ಸಾಮರ್ಥ್ಯವನ್ನು ನೋಡಿ ನಮಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಬೇಕು ಎಂದು ಒತ್ತಾಯ ಮಾಡುತ್ತಿದ್ದಾರೆ. ಇದೀಗ ರಾಜ್ಯ ಕಾಂಗ್ರೆಸ್‌ ಬಿಜೆಪಿಯನ್ನು ಟೀಕಿಸಲು ಇದನ್ನೇ ಅಸ್ತ್ರವನ್ನಾಗಿ ಬಳಸಿಕೊಂಡಿದೆ.

ಇದನ್ನೂ ಓದಿ: ನೂತನ ಶಾಸಕರಿಗೆ ಮೂರು ದಿನಗಳ ತರಬೇತಿ ಶಿಬಿರ – ಹಿರಿಯ ರಾಜಕಾರಣಿಗಳಿಂದ ‘ಪಾಲಿಟಿಕ್ಸ್’ ಪಾಠ

ಕಾಂಗ್ರೆಸ್‌ ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನ ವಿಚಾರವಾಗಿ ಸರಣಿ ಟ್ವೀಟ್‌ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ಹುದ್ದೆಯ ಕುರ್ಚಿಯ ಮೇಲೆ ಹತ್ತಾರು ಟವೆಲ್ ಗಳು ಬಿದ್ದಿವೆ! ಹುದ್ದೆಯ ಆಸೆಗಾಗಿಯೇ ಪರಸ್ಪರ ಹೊಂದಾಣಿಕೆ ರಾಜಕೀಯದ ಅಸ್ತ್ರ ಪ್ರಯೋಗಿಸುತ್ತಿದ್ದಾರೆ. ದಲಿತರನ್ನು ಅಧ್ಯಕ್ಷರನ್ನಾಗಿ ಮಾಡುವಂತೆ ಕೂಗೆದ್ದಿದೆ, ಆದರೆ ಇದು ವಿಫಲ ಕೂಗು, ಬಿಜೆಪಿಯ ಗರ್ಭಗುಡಿಗೆ ದಲಿತರಿಗೆ ಪ್ರವೇಶವಿಲ್ಲ. ದಲಿತರಿಗೆ ಉನ್ನತ ಸ್ಥಾನ ನೀಡಿ ರಾಜ್ಯ ಬಿಜೆಪಿ ತನ್ನ ದಲಿತವಿರೋಧಿ ಕೃತ್ಯಗಳಿಗೆ ಪ್ರಾಯಶ್ಚಿತ್ತ ಮಾಡಿಕೊಳ್ಳಲಿ ಎಂದು ಕಿಡಿಕಾರಿದೆ.

ಬಿಜೆಪಿಯಲ್ಲಿ ವಿಪಕ್ಷ ನಾಯಕನಾಗಲು ಯೋಗ್ಯತೆ ಇರುವ ಒಂದೇ ಒಂದು ಮನುಷ್ಯಾಕೃತಿಯೂ ಇಲ್ಲ! ಬಸನಗೌಡ ಪಾಟೀಲ್‌ ಯತ್ನಾಳ್‌ ಬಾಯಿ ತೆರೆದರೆ ಹೊಲಸು ಮಾತುಗಳನ್ನೇ ಆಡುತ್ತಾರೆ. ಇನ್ನು ಆರ್‌ ಅಶೋಕ್‌ ತಾನೇನು ಮಾತಾಡುತ್ತೇನೆ ಎಂಬ ಅರಿವು ಅವರಿಗೇ ಇರುವುದಿಲ್ಲ. ಅಶ್ವತ್ಥ್‌ ನಾರಾಯಣ್ ಅವರಿಗೆ ಸದಾ ಗಂಡಸ್ಥನದ ಬಗ್ಗೆಯೇ ಚಿಂತೆ. ಬಸವರಾಜ ಬೊಮ್ಮಾಯಿ ಅವರು ಪ್ರತಾಪ್ ಸಿಂಹನನ್ನೇ ಎದುರಿಸಲಾಗದವರು ಸಿದ್ದರಾಮಯ್ಯರನ್ನು ಎದುರಿಸಲು ಸಾಧ್ಯವೇ! ಎಂದು ವ್ಯಂಗ್ಯವಾಡಿದೆ.

suddiyaana