ಅಡಕತ್ತರಿಯಲ್ಲಿ ಸಿಪಿ ಯೋಗೇಶ್ವರ್‌ ! – ಸಿಪಿವೈ ಭವಿಷ್ಯ ಹೆಚ್‌ಡಿಕೆ ಕೈಯಲ್ಲಿ?

ಅಡಕತ್ತರಿಯಲ್ಲಿ ಸಿಪಿ ಯೋಗೇಶ್ವರ್‌ ! – ಸಿಪಿವೈ ಭವಿಷ್ಯ ಹೆಚ್‌ಡಿಕೆ ಕೈಯಲ್ಲಿ?

ಚನ್ನಪಟ್ಟಣ ಉಪ ಚುನಾವಣೆ ಕಾವು ಜೋರಾಗಿದೆ. ಶಾಸಕರಾಗಿದ್ದ ಎಚ್. ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ಕ್ಷೇತ್ರಕ್ಕೆ ಉಪ ಚುನಾವಣೆ ಎದುರಾಗಿದೆ. ಕಾಂಗ್ರೆಸ್ ಮತ್ತು ಬಿಜೆಪಿ-ಜೆಡಿಎಸ್ ಮೈತ್ರಿಕೂಟಕ್ಕೆ ಚನ್ನಪಟ್ಟಣ ಪ್ರತಿಷ್ಠೆಯ ಕಣವಾಗಿದೆ. ಮೈತ್ರಿ ಪಕ್ಷದಿಂದ ತನಗೆ ಟಿಕೆಟ್‌ ಕೊಡಬೇಕೆಂದು ಸಿ.ಪಿ ಯೋಗೀಶ್ವರ್‌ ಪಟ್ಟುಹಿಡಿದಿದ್ದಾರೆ. ಇದೀಗ ಸಿಪಿವೈ ಭವಿಷ್ಯ ಹೆಚ್‌ಡಿಕೆ ಕೈಯಲ್ಲಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ರಾಮ ಭೂಮಿಯಲ್ಲಿ ಕಳ್ಳರ ಕಾಟ – ರಾಮಪಥ, ಭಕ್ತಿಪಥದಲ್ಲಿ 50 ಲಕ್ಷ ಮೌಲ್ಯದ ದೀಪಗಳು ಮಂಗಮಾಯ..!

ಹೌದು,  ಚನ್ನಪಟ್ಟಣದ ಉಪ ಚುನಾವಣೆಗೆ ಅಭ್ಯರ್ಥಿಗಳು ಯಾರು? ಎಂಬುದು ಸದ್ಯದ ಕುತೂಹಲ. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಟಿಕೆಟ್​ಗಾಗಿ ಸಿಪಿ ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ. ಈ ವಿಚಾರವಾಗಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಲು ದೆಹಲಿಗೆ ತೆರಳಿದ್ದ ಸಿಪಿವೈ ಇದೀಗ ಬೆಂಗಳೂರಿಗೆ ವಾಪಸಾಗಿದ್ದಾರೆ. ಈ ಮಧ್ಯೆ, ಕುಮಾರಸ್ವಾಮಿ ನಿರ್ಧಾರದ ಮೇಲೆ ಸಿಪಿ ಯೋಗೇಶ್ವರ್​ ಭವಿಷ್ಯ ನಿಂತಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಕುಮಾರಸ್ವಾಮಿ ಒಪ್ಪಿದ್ರೆ ಮಾತ್ರ ಯೋಗೇಶ್ವರ್ ಎನ್​​​ಡಿಎಯಿಂದ ಸ್ಪರ್ಧೆ ಮಾಡಲಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಈ ಮಧ್ಯೆ, ಬಿಜೆಪಿ ಚಿಹ್ನೆಯಿಂದಲೇ ಸ್ಪರ್ಧಿಸಲು ಯೋಗೇಶ್ವರ್ ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಜೆಡಿಎಸ್ ಚಿಹ್ನೆಯಲ್ಲಿ ಸ್ಪರ್ಧೆಗೆ ಧೈರ್ಯ ಮಾಡದ ಯೋಗೇಶ್ವರ್, ಟಿಕೆಟ್​​ಗಾಗಿ ದೆಹಲಿಯಲ್ಲಿ ಕಸರತ್ತು ನಡೆಸಿದ್ದಾರೆ. ಪ್ರಲ್ಹಾದ್ ಜೋಶಿ ಮೂಲಕ ಹೈಕಮಾಂಡ್ ನಾಯಕರ ಭೇಟಿಗೆ ಪ್ರಯತ್ನಪಟ್ಟಿದ್ದಾರೆ. ಅಷ್ಟೇ ಅಲ್ಲದೆ, ರಾಜ್ಯ ನಾಯಕರು ಟಿಕೆಟ್ ವಿಚಾರದಲ್ಲಿ ನನ್ನ ಬೆಂಬಲಕ್ಕೆ ನಿಲ್ಲಬೇಕು ಎಂದು ಮನವಿ ಮಾಡಿದ್ದಾರೆ.

ಆಗಸ್ಟ್ 16ರ ಬಳಿಕ ದೆಹಲಿಗೆ ಬರುವುದಾಗಿ ಕೆಲ ನಾಯಕರು ಯೋಗೇಶ್ವರ್​​ಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆಗಸ್ಟ್ 16ರ ಬಳಿಕ ದೆಹಲಿಗೆ ಬಂದು ಕುಮಾರಸ್ವಾಮಿ ಜತೆ ಚರ್ಚೆ ಮಾಡಲಿದ್ದೇವೆ. ಆಗಸ್ಟ್ 18ರ ಬಳಿಕ ದೆಹಲಿಯಲ್ಲೇ ಕುಮಾರಸ್ವಾಮಿ ಜತೆ ಸಭೆ ನಿಗದಿ ಮಾಡುವುದಾಗಿ ಭರವಸೆ ನೀಡಿದ್ದಾರೆ. ಆಗಸ್ಟ್ 18ರ ಬಳಿಕ ದೆಹಲಿಗೆ ಬರುವಂತೆ ಯೋಗೇಶ್ವರ್​ಗೆ ಹೈಕಮಾಂಡ್ ನಾಯಕರು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

Shwetha M

Leave a Reply

Your email address will not be published. Required fields are marked *