ಭ್ರಷ್ಟ ನಾಗೇಂದ್ರ ರಾಜೀನಾಮೆ ಕೊಡ್ಲಿ – ಬ್ಲಾಕ್ ಟೀ ಶರ್ಟ್ ಧರಿಸಿ ಬಿಜೆಪಿ ಪ್ರೊಟೆಸ್ಟ್

ಭ್ರಷ್ಟ ನಾಗೇಂದ್ರ ರಾಜೀನಾಮೆ ಕೊಡ್ಲಿ – ಬ್ಲಾಕ್ ಟೀ ಶರ್ಟ್ ಧರಿಸಿ ಬಿಜೆಪಿ ಪ್ರೊಟೆಸ್ಟ್

ವಾಲ್ಮೀಕಿ ನಿಗಮದ ಹಗರಣದ ಸಂಬಂಧ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಒತ್ತಾಯಿಸಿ ಭಾರತೀಯ ಜನತಾ ಪಕ್ಷ   ಮತ್ತು ಜನತಾ ದಳ  ಪಕ್ಷಗಳ ಶಾಸಕರು ತಮ್ಮ ಪ್ರತಿಭಟನೆಯನ್ನು ಮುಂದುವರಿಸಿದ್ದಾರೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ನೇತೃತ್ವದಲ್ಲಿ, ಶಾಸಕರು ಕಪ್ಪು ಟೀ-ಶರ್ಟ್ ಧರಿಸಿ ಶಾಸಕರ ಭವನದ ಬಳಿ ಇರುವ ವಾಲ್ಮೀಕಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸೆದ್ರು. ಶಾಸಕರು ಧರಿಸಿದ್ದ ಟೀ ಶರ್ಟ್​​ಗಳ ಮೇಲೆ ನಾಗೇಂದ್ರ ರಾಜೀನಾಮೆ ನೀಡಲಿ ಎಂಬ ಬರಹ ಇರುವುದು ಕಂಡುಬಂದಿದೆ.

ಇದನ್ನೂ ಓದಿ:   ಸಚಿವ ಬಿ.ನಾಗೇಂದ್ರಗೆ ಸಿಬಿಐ ಶಾಕ್ –  ಮತ್ತೆ ವಿಚಾರಣೆ ನೆಡಸಲು ರಾಜ್ಯಪಾಲರಿಗೆ ಪತ್ರ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌. ಅಶೋಕ್‌ ನೇತೃತ್ವದಲ್ಲಿ ಶಾಸಕರು ಮತ್ತು ವಿಧಾನ ಪರಿಷತ್‌ ಸದಸ್ಯರು ಶಾಸಕರ ಭವನದ ಆವರಣದಲ್ಲಿರುವ ವಾಲ್ಮೀಕಿ ಪ್ರತಿಮೆ ಮುಂಭಾಗದಿಂದ ವಿಧಾನಸೌಧದತ್ತ ಪ್ರತಿಭಟನಾ ನಡಿಗೆ ನಡೆಸಿದರು. ಕಪ್ಪು ಟೀ-ಶರ್ಟ್‌ ಧರಿಸಿದ್ದ ಬಿಜೆಪಿ ನಾಯಕರು, ನಾಗೇಂದ್ರ ರಾಜೀನಾಮೆ ನೀಡಬೇಕು ಎಂಬ ಘೋಷಣೆಗಳನ್ನು ಕೂಗುತ್ತಾ ಪ್ರತಿಭಟನೆ ನಡೆಸಿದರು. ಶಾಸಕರ ಭವನದ ಪ್ರವೇಶದ್ವಾರದ ಬಳಿ ಪೊಲೀಸರು ತಡೆ ಹಾಕಲು ಮುಂದಾದರೂ, ಪ್ರತಿಭಟನಾಕಾರರು ಮುಂದುವರಿದು ವಿಧಾನಸೌಧದ ಆವರಣ ಪ್ರವೇಶಿಸಿದರು.

ಬಳಿಕ ವಿಧಾನಸಭೆಯ ಪ್ರವೇಶದ್ವಾರದ ಬಳಿ ಮಾರ್ಷಲ್‌ಗಳು ಕಪ್ಪು ಟೀ-ಶರ್ಟ್‌ ಧರಿಸಿದ್ದ ಶಾಸಕರನ್ನು ತಡೆಯಲು ಪ್ರಯತ್ನಿಸಿದರು. ಈ ವೇಳೆ ಮಾಜಿ ಸಚಿವ ಪ್ರಭು ಚೌಹಾಣ್‌ ಸೇರಿದಂತೆ ಬಿಜೆಪಿ ಶಾಸಕರು ಆಕ್ಷೇಪ ವ್ಯಕ್ತಪಡಿಸಿ, ಮಾರ್ಷಲ್‌ಗಳೊಂದಿಗೆ ವಾಗ್ವಾದ ನಡೆಸಿದರು. ನಂತರ ಬಿಜೆಪಿ ಹಾಗೂ ಜೆಡಿಎಸ್‌ ಶಾಸಕರು ಒಟ್ಟಾಗಿ ವಿಧಾನಸಭೆಯೊಳಗೆ ಪ್ರವೇಶಿಸಿದರು. ಸದನದಲ್ಲೂ ಮತ್ತು ಹೊರಗೂ ಈ ವಿಷಯವಾಗಿ ಪ್ರತಿಭಟನೆ ಮುಂದುವರಿದಿದ್ದು, ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ಹೋರಾಟ ಬಿಡುವುದಿಲ್ಲ ಎಂದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರು ಎಚ್ಚರಿಕೆ ನೀಡಿದ್ದಾರೆ. ಪ್ರತಿಭಟನೆ ಜೋರಾಗುತ್ತಿದ್ದಂತೆ, ವಿಧಾನಸಭಾ ಅಧಿವೇಶವನ್ನ ಸೋಮವಾರಕ್ಕೆ ಮುಂದೂಡಲಾಯಿತು.

Kishor KV

Leave a Reply

Your email address will not be published. Required fields are marked *