‘ಗ್ಯಾರಂಟಿ ಕೊಟ್ಟು ಕಾಂಗ್ರೆಸ್ ಬರೆ ಎಳೆಯುತ್ತಿದೆ’ – ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!

‘ಗ್ಯಾರಂಟಿ ಕೊಟ್ಟು ಕಾಂಗ್ರೆಸ್ ಬರೆ ಎಳೆಯುತ್ತಿದೆ’ – ಬೆಲೆ ಏರಿಕೆ ಪಟ್ಟಿ ಬಿಡುಗಡೆ ಮಾಡಿದ ಬಿಜೆಪಿ!

ಒಂದೆಡೆ ಕಾಂಗ್ರೆಸ್​ ಮೇಲಿಂದ ಮೇಲೆ ತನ್ನ ಗ್ಯಾರಂಟಿಗಳನ್ನ ಜಾರಿಗೊಳಿಸುತ್ತಿದ್ರೆ ಮತ್ತೊಂದೆಡೆ ಬಿಜೆಪಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಬೆಲೆ ಏರಿಕೆ ಅಸ್ತ್ರ ಪ್ರಯೋಗಿಸಿದೆ. ಉಚಿತ ಕೊಡುತ್ತಲೇ ಕಾಂಗ್ರೆಸ್ ಜನರಿಗೆ ಬೆಲೆ ಏರಿಕೆ ಬರೆ ಎಳೆಯುತ್ತಿದೆ ಅಂತಾ ಆರೋಪಿಸಿದೆ. ನದಿ ದಾಟಿದ ಮೇಲೆ ಅಂಬಿಗ ಯಾಕೆ ಅನ್ನೋ ಧೋರಣೆಯಲ್ಲಿ ಸಿದ್ದರಾಮಯ್ಯ ಸರ್ಕಾರವಿದೆ. ಉಚಿತದ ಜೊತೆಗೆ ಹಿಟ್ಲರ್ ಸರ್ಕಾರ ದಿನಕ್ಕೊಂದು ಕಂಡೀಷನ್ ಕೂಡ ಹಾಕುತ್ತಿದೆ ಅಂತಾ ಬಿಜೆಪಿ ಟೀಕಾಪ್ರಹಾರ ಮಾಡಿದೆ. ಅಷ್ಟೇ ಅಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಯಾವೆಲ್ಲಾ ವಸ್ತುಗಳ ಬೆಲೆ ಎಷ್ಟು ಏರಿಕೆಯಾಗಿದೆ ಅನ್ನೋ ಬಗ್ಗೆಯೂ ಬಿಜೆಪಿ ಪಟ್ಟಿ ರಿಲೀಸ್ ಮಾಡಿದೆ.

ಇದನ್ನೂ ಓದಿ : ಜಿಲ್ಲಾ ಉಸ್ತುವಾರಿ ಸಚಿವರ ನೇಮಕ – ಯಾವ ಸಚಿವರಿಗೆ ಯಾವ ಜಿಲ್ಲೆ?

ಬಿಜೆಪಿ ಬೆಲೆ ಏರಿಕೆ ಆರೋಪ!

ರಾಜ್ಯದಲ್ಲಿ ನೀರು, ವಿದ್ಯುತ್ ದರ ಏರಿಕೆ

ಮದ್ಯದ ಬೆಲೆ ₹10 ರಿಂದ ₹20ಕ್ಕೆ ಏರಿಕೆ

ಮುಂದಿನ ದಿನಗಳಲ್ಲಿ ಹಾಲು ಲೀಟರ್​ಗೆ ₹5 ಏರಿಕೆ ಗ್ಯಾರಂಟಿ

ಬಿಎಂಟಿಸಿ ದರ ಶೇ.18 ರಿಂದ ಶೇ.20ಕ್ಕೆ ಏರಿಕೆ ಗ್ಯಾರಂಟಿ

KSRTC ಪ್ರಯಾಣ ದರ ಕನಿಷ್ಠ ಶೇ.15ರಷ್ಟು ಏರಿಕೆ ಗ್ಯಾರಂಟಿ

ಪೆಟ್ರೋಲ್​, ಡೀಸೆಲ್ ಮೇಲಿನ ತೆರಿಗೆ ಶೇ.5ರಷ್ಟು ಏರಿಕೆ ಗ್ಯಾರಂಟಿ

ಹೀಗೆ ಗ್ಯಾರಂಟಿಗಳ ಹೊರೆಯನ್ನ ಸಮತೋಲನ ಮಾಡಲು ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಮಾಡೋದು ಖಚಿತ ಅಂತಾ ಬಿಜೆಪಿ ಆರೋಪಿಸಿದೆ. ಇವೆಲ್ಲದ್ರ ಮಧ್ಯೆ, ಯಾವುದೇ ಕಾರಣಕ್ಕೂ ಮದ್ಯದ ದರ ಹೆಚ್ಚಳ ಮಾಡದಂತೆ ಎಣ್ಣೆ ಪ್ರಿಯರ ಸಂಘ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದೆ. ಬಿಪಿಎಲ್​ ಕಾರ್ಡ್ ಹೊಂದಿದ ಮದ್ಯಪ್ರಿಯ ದಿನಗೂಲಿ ನೌಕರ ದಿನಕ್ಕೆ ಸರಾಸರಿ 180 ಮಿ.ಲೀಟರ್ ಮದ್ಯ ಕುಡಿದ್ರೂ ಆತನಿಗೆ ನಿತ್ಯ 200 ರೂಪಾಯಿನಿಂದ 250 ರೂಪಾಯಿ ಖರ್ಚಾಗುತ್ತೆ. ತಿಂಗಳಿಗೆ 7,500 ರೂಪಾಯಿ, ವರ್ಷಕ್ಕೆ 90 ಸಾವಿರ ರೂಪಾಯಿ ವೆಚ್ಚವಾಗುತ್ತೆ. ಇದರಿಂದ ಮಧ್ಯಮವರ್ಗ ಮತ್ತು ಬಡವರಿಗೆ ಹೊಡೆತ ಬೀಳುತ್ತೆ ಅಂತಾ ಮದ್ಯಪ್ರಿಯರ ಸಂಘ ಸಿಎಂಗೆ ಲೆಕ್ಕಾಚಾರ ಬೇರೆ ಕೊಟ್ಟು ಮನವಿ ಮಾಡಿದೆ. ಅಂತೂ ಕುಡಿಯೋದನ್ನ ಕಡಿಮೆ ಮಾಡೋ ಬಗ್ಗೆ ಇವಱರೂ ಯೋಚನೆ ಮಾಡೋದೇ ಇಲ್ಲ.

 

suddiyaana