ಸದನದಲ್ಲಿ ಗೂಂಡಾವರ್ತನೆ ತೋರಿ ರಾಜ್ಯದ ಜನರ ಮುಂದೆ ಮತ್ತೊಮ್ಮೆ ತಿರಸ್ಕೃತ ಸ್ಥಾನದಲ್ಲಿ ನಿಂತ ಬಿಜೆಪಿ – ಕಾಂಗ್ರೆಸ್ ಟ್ವೀಟಾಸ್ತ್ರ

ಬೆಂಗಳೂರು: ಕರ್ನಾಟಕ ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಭಾರಿ ಹೈಡ್ರಾಮ ನಡೆದಿತ್ತು. ಸದನದಲ್ಲಿ ಬಿಜೆಪಿ ನಾಯಕರು ಸ್ಪೀಕರ್ ಪೀಠದ ಮೇಲೆ ಬಿಲ್ ಪ್ರತಿ ಹರಿದು ಸ್ಪೀಕರ್ ಮುಖದ ಮೇಲೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದರು. ಸದನಕ್ಕೆ ಅಗೌರವ ತೋರಿದ ಹಿನ್ನೆಲೆ ಬಿಜೆಪಿಯ 10 ಶಾಸಕರನ್ನು ಸದನದಿಂದ ಅಮಾನತು ಮಾಡಲಾಗಿತ್ತು. ಈ ವಿಚಾರವನ್ನು ಇಟ್ಟುಕೊಂಡು ರಾಜ್ಯ ಕಾಂಗ್ರೆಸ್ ಟ್ವೀಟ್ ಮಾಡಿದೆ. ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದ ಬಿಜೆಪಿ ಸದನದಲ್ಲಿ ಗೂಂಡಾವರ್ತನೆ ತೋರಿ ರಾಜ್ಯದ ಜನರ ಮುಂದೆ ಮತ್ತೊಮ್ಮೆ ತಿರಸ್ಕೃತರ ಸ್ಥಾನದಲ್ಲಿ ನಿಂತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದೆ.
ಇದನ್ನೂ ಓದಿ: ಕರ್ನಾಟಕದಲ್ಲಿ ಪ್ರಜಾಪ್ರಭುತ್ವದ ಮೇಲೆ ದಾಳಿ..! – ಪ್ರಶ್ನೆ ಮಾಡಿದವರಿಗೆ ಇದೇ ಸ್ಥಿತಿ.. – ಕಾಂಗ್ರೆಸ್ ವಿರುದ್ಧ ಬಿಜೆಪಿ ಕಿಡಿ
ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಕಾಂಗ್ರೆಸ್, ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನದ ಆಶಯಗಳಿಗೆ ಬಿಜೆಪಿ ಮಾಡಿದ ಅಪಚಾರ ಒಂದೆರಡಲ್ಲ. ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣ, ಸದನದಲ್ಲಿ ಬಟ್ಟೆ ಹರಿದುಕೊಂಡು ಅಸಭ್ಯ ವರ್ತನೆ, ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದೆ ಸಾಂವಿಧಾನಿಕ ಹುದ್ದೆಗೆ ಅವಮಾನ, ಸ್ಪೀಕರ್ ಮೇಲೆ ಪೇಪರ್ ಎಸೆದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ ರಾಜ್ಯ ಬಿಜೆಪಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಗೌರವವಿಲ್ಲ ಎನ್ನಲು ಈ ಉದಾಹರಣೆಗಳೇ ಸಾಕು ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದ ಬಿಜೆಪಿ ಸದನದಲ್ಲಿ ಗೂಂಡಾವರ್ತನೆ ತೋರಿ ರಾಜ್ಯದ ಜನರ ಮುಂದೆ ಮತ್ತೊಮ್ಮೆ ತಿರಸ್ಕೃತರ ಸ್ಥಾನದಲ್ಲಿ ನಿಂತಿದ್ದಾರೆ.
ಸದನದ ಪಾವಿತ್ರ್ಯತೆಯನ್ನು ಅರಿತವರು, ವಿಪಕ್ಷ ನಾಯಕನ ಸ್ಥಾನ ತುಂಬುವವರು ಒಬ್ಬರೂ ಇಲ್ಲವೇ @BJP4Karnataka ಯಲ್ಲಿ?
ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಇಂತಹ…
— Karnataka Congress (@INCKarnataka) July 20, 2023
ಒಬ್ಬ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಳ್ಳಲಾಗದ ಬಿಜೆಪಿ ಸದನದಲ್ಲಿ ಗೂಂಡಾವರ್ತನೆ ತೋರಿ ರಾಜ್ಯದ ಜನರ ಮುಂದೆ ಮತ್ತೊಮ್ಮೆ ತಿರಸ್ಕೃತರ ಸ್ಥಾನದಲ್ಲಿ ನಿಂತಿದ್ದಾರೆ. ಸದನದ ಪಾವಿತ್ರ್ಯತೆಯನ್ನು ಅರಿತವರು, ವಿಪಕ್ಷ ನಾಯಕನ ಸ್ಥಾನ ತುಂಬುವವರು ಒಬ್ಬರೂ ಇಲ್ಲವೇ ಬಿಜೆಪಿಯಲ್ಲಿ? ಬಿಜೆಪಿಗೆ ಜನರ ಬಗ್ಗೆ ಕಾಳಜಿ ಇದ್ದಿದ್ದರೆ ಇಂತಹ ಚೀಪ್ ಡ್ರಾಮಾ ಮಾಡಿ ಸಮಯ ವ್ಯರ್ಥ ಮಾಡುತ್ತಿರಲಿಲ್ಲ ಎಂದು ಕಿಡಿಕಾರಿದೆ.
ಪ್ರಜಾಪ್ರಭುತ್ವ ವ್ಯವಸ್ಥೆಗೆ, ಸಂವಿಧಾನದ ಆಶಯಗಳಿಗೆ ಬಿಜೆಪಿ ಮಾಡಿದ ಅಪಚಾರ ಒಂದೆರಡಲ್ಲ.
🚫 ಆಪರೇಷನ್ ಕಮಲ ಎಂಬ ಅನೈತಿಕ ರಾಜಕಾರಣ
🚫ಸದನದಲ್ಲಿ ಬಟ್ಟೆ ಹರಿದುಕೊಂಡು ಅಸಭ್ಯ ವರ್ತನೆ
🚫 ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡದೆ ಸಾಂವಿಧಾನಿಕ ಹುದ್ದೆಗೆ ಅವಮಾನ
🚫ಸ್ಪೀಕರ್ ಮೇಲೆ ಪೇಪರ್ ಎಸೆದು ಸಭಾಧ್ಯಕ್ಷರ ಪೀಠಕ್ಕೆ ಅಗೌರವ…
— Karnataka Congress (@INCKarnataka) July 20, 2023
ಕಾಂಗ್ರೆಸ್ ನ ಟ್ವೀಟ್ ಗೆ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ. ಸದನದಲ್ಲಿ ಕಾಂಗ್ರೆಸ್ ಗೂಂಡಾ ವರ್ತನೆ ತೋರುವ ಮೂಲಕ ಸಭಾಧ್ಯಕ್ಷರನ್ನೇ ಬಲಿ ಪಡೆದ ಘನಘೋರ ಇತಿಹಾಸ ಕರ್ನಾಟಕದಲ್ಲಿದೆ ಎಂದು ಕಿಡಿಕಾಡಿದೆ.
“ಇವು ಕಾಂಗ್ರೆಸ್‌ನ ಡಿಎನ್‌ಎಯಲ್ಲಿರುವ ಗುಣಗಳು” ಅಧಿವೇಶನವನ್ನು ಹಾಳು ಮಾಡುವುದು..! ಸದನದಲ್ಲಿ ಜೈಲರ್‌ನಂತೆ ಸ್ಪೀಕರ್ ವರ್ತಿಸುವುದು..! ಶಾಸಕರನ್ನು ಅಮಾನತು ಮಾಡುವುದು..! ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುವುದು..! ಅಧಿಕಾರದಲ್ಲಿ ಇಲ್ಲದಾಗ ಅಧಿವೇಶನ ನಡೆಸಲು ಕಾಂಗ್ರೆಸ್ ಬಿಡುವುದಿಲ್ಲ. ಅಧಿಕಾರದಲ್ಲಿ ಇದ್ದಾಗ ಪ್ರಜಾಪ್ರಭುತ್ವವನ್ನೇ ಬುಡಮೇಲು ಮಾಡಲು ಹವಣಿಸುತ್ತದೆ ಎಂದು ಪರಿಷತ್ ಉಪಸಭಾಪತಿ S.L.ಧರ್ಮೇಗೌಡ ಆತ್ಮಹತ್ಯೆ ಪ್ರಕರಣವನ್ನು ಉಲ್ಲೇಖಿಸಿ ಟ್ವೀಟ್ ಮಾಡಿದೆ.
ಸದನದಲ್ಲಿ @INCKarnataka ಗೂಂಡಾ ವರ್ತನೆ ತೋರುವ ಮೂಲಕ ಸಭಾಧ್ಯಕ್ಷರನ್ನೇ ಬಲಿ ಪಡೆದ ಘನಘೋರ ಇತಿಹಾಸ ಕರ್ನಾಟಕದಲ್ಲಿದೆ.
“ಇವು ಕಾಂಗ್ರೆಸ್‌ನ ಡಿಎನ್‌ಎಯಲ್ಲಿರುವ ಗುಣಗಳು”
🏴ಅಧಿವೇಶನವನ್ನು ಹಾಳು ಮಾಡುವುದು..!
🏴ಸದನದಲ್ಲಿ ಜೈಲರ್‌ನಂತೆ ಸ್ಪೀಕರ್ ವರ್ತಿಸುವುದು..!
🏴ಶಾಸಕರನ್ನು ಅಮಾನತು ಮಾಡುವುದು..!
🏴ಪ್ರಜಾಪ್ರಭುತ್ವದ ಕಗ್ಗೊಲೆ… pic.twitter.com/EXWbrwQvVe— BJP Karnataka (@BJP4Karnataka) July 20, 2023

ನೋಡಿರಿ

