ಇದು ಹುಲ್ಲಲ್ಲ ಹಾವು.. – ಹಾವನ್ನೇ ಜಗಿದು ನುಂಗಿದ ಜಿಂಕೆ!

ಇದು ಹುಲ್ಲಲ್ಲ ಹಾವು.. – ಹಾವನ್ನೇ ಜಗಿದು ನುಂಗಿದ ಜಿಂಕೆ!

ಜಿಂಕೆಗಳು ಸಸ್ಯಹಾರಿ ಪ್ರಾಣಿ. ಹುಲ್ಲು, ಸಣ್ಣ ಪುಟ್ಟ ಗಿಡಗಳನ್ನು ತಿಂದು ಬದುಕುತ್ತವೆ. ಸ್ವಚ್ಚಂದ ಪರಿಸರದಲ್ಲಿ ಓಡಾಡುತ್ತಿರುತ್ತವೆ. ಎಂದಾದರೂ ಜಿಂಕೆಗಳು ಮಾಂಸಹಾರಿ ಎಂದು ಕೇಳಿದ್ದೀರಾ? ಇಲ್ಲೊಂದು ಜಿಂಕೆ ಹಾವನ್ನು ಹುಲ್ಲಿನಂತೆ ಬಾಯಲ್ಲಿ ಜಗಿಯುತ್ತಿರುವ ದೃಶ್ಯ ಸೆರೆಯಾಗಿದೆ. ಇದೀಗ ಸೋಶಿಯಲ್‌ ಮೀಡಿಯಾದಲ್ಲಿ ಭಾರಿ ವೈರಲ್‌ ಆಗಿದೆ.

ಇದನ್ನೂ ಓದಿ: ಹುಲಿಗೆ ಆಟ ಪ್ರವಾಸಿಗರಿಗೆ ಪ್ರಾಣ ಸಂಕಟ – ವಾಹನ ಹಿಡಿದು ಭಯ ಹುಟ್ಟಿಸಿದ ವ್ಯಾಘ್ರ

ವೈರಲ್‌ ಆದ ವಿಡಿಯೋದಲ್ಲಿ ಜಿಂಕೆಯೊಂದು ರಸ್ತೆ ಬದಿಯಲ್ಲಿ ನಿಂತು ಹಾವನ್ನು ಜಗಿಯುತ್ತಿದೆ. @TheFigen_ ಎಂಬ ಟ್ವಿಟರ್‌ ಖಾತೆಯಲ್ಲಿ ಜಿಂಕೆ ಹಾವನ್ನು ತಿನ್ನುತ್ತಿರುವ ವಿಡಿಯೋ ಪೋಸ್ಟ್‌ ಮಾಡಲಾಗಿದೆ. ಈ ವಿಡಿಯೋವನ್ನು ಪೋಸ್ಟ್‌ ಮಾಡಿ, ನಾನು ಜಿಂಕೆ ಹಾವನ್ನು ತಿನ್ನುತ್ತಿರುವುದನ್ನು ಮೊದಲ ಬಾರಿ ನೋಡುತ್ತಿದ್ದೇನೆ. ಇವುಗಳಿಗೆ ಹುಲ್ಲು ನೀಡುತ್ತಿಲ್ಲವೇ? ಎಂದು ಅವರು ಪ್ರಶ್ನೆ ಮಾಡಿದ್ದಾರೆ. 21 ಸೆಕೆಂಡ್‌ಗಳ ಈ ವೀಡಿಯೋದಲ್ಲಿ ಹಾವನ್ನು ಜಿಂಕೆ ಬಬಲ್‌ಗಮ್ ತರ ಜಗಿಯುವುದನ್ನು ಕಾಣಬಹುದಾಗಿದೆ.

ವೈರಲ್‌ ಆದ ವಿಡಿಯೋಗೆ ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಕಮೆಂಟ್‌ ಮಾಡಿದ್ದಾರೆ. ಇದು ಗೊಂದಲಕ್ಕೊಳಗಾದ ಜಿಂಕೆಯಂತೆ ತೋರುತ್ತಿದೆ. ಶಾಲೆಯಲ್ಲಿ ಪರಿಸರ ವಿಜ್ಞಾನವನ್ನು ಅಧ್ಯಯನ ಮಾಡಿಲ್ಲವೇ ಎಂದು ಕೇಳಿದ್ದಾರೆ.

ಈ ವೀಡಿಯೋ ನೋಡಿದ ಟ್ವಿಟರ್‌ ಬಳಕೆದಾರರು ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದ್ದಾರೆ. ಜಿಂಕೆಗೆ ಬರೀ ಹುಲ್ಲು ತಿಂದು ಬೇಸರಗೊಂಡಿರಬೇಕು. ಹೊಸದೇನಾದರೂ ಟ್ರೈ ಮಾಡೋಣ ಅಂತ ಹೀಗೆ ಮಾಡ್ತಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಬಹುಶಃ ಜಿಂಕೆ ಇದು ಒಣ ಹುಲ್ಲೆಂದು ಭಾವಿಸಿರಬೇಕು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಪ್ರೋಟೀನ್ ಕೊರತೆಯು ಜಿಂಕೆಗೆ ಆಕಸ್ಮಿಕವಾಗಿ ಕಂಡುಕೊಂಡ ಸತ್ತ ಹಾವನ್ನು ತಿನ್ನುವ ಪ್ರವೃತ್ತಿಯನ್ನು ಸೃಷ್ಟಿಸಿರಬಹುದು. ಜೀವ ವೈವಿಧ್ಯದ ವೈಚಿತ್ರವನ್ನು ಇದು ಹೀಗೆ ಎಂದು ಯಾರಿಗೂ ಹೇಳಲಾಗದು. ಏಕೆಂದರೆ ಅರಣ್ಯ ಸೇವೆಯಲ್ಲಿ ಇರುವವರು ಕೂಡ 24X7 ವನ್ಯಜೀವಿಗಳ ಒಡನಾಟದಲ್ಲಿ ಅವರಿರುವ ಪ್ರದೇಶದಲ್ಲಿ ಇರಲು ಸಾಧ್ಯವಿಲ್ಲ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ.

suddiyaana