ಬಿಟ್‌ಕಾಯಿನ್‌ಗೆ ಬಂಗಾರದ ಬೆಲೆ.. 6 ಸಾವಿರದಿಂದ 78 ಲಕ್ಷಕ್ಕೆ ಹೋಗಿದ್ದೇಗೆ? – ಭಾರತದಲ್ಲಿ ಹೂಡಿಕೆಗೆ ಅವಕಾಶವಿದ್ಯಾ?

ಬಿಟ್‌ಕಾಯಿನ್‌ಗೆ ಬಂಗಾರದ ಬೆಲೆ.. 6 ಸಾವಿರದಿಂದ 78 ಲಕ್ಷಕ್ಕೆ ಹೋಗಿದ್ದೇಗೆ? – ಭಾರತದಲ್ಲಿ ಹೂಡಿಕೆಗೆ ಅವಕಾಶವಿದ್ಯಾ?

ಬಿಟ್ ಕಾಯಿನ್‌.. ಇದೊಂದು ಮಾಯಾ ಕರೆನ್ಸಿ  . ಬಿಟ್ ಕಾಯಿನ್ ವಿಚಾರದಲ್ಲಿ ಸಾಕಷ್ಚು ರಾಜಕಾರಣಿಗಳ ಹೆಸರು ಕೇಳಿ ಬಂದಿತ್ತು.. ಆದ್ರೆ 10-15 ವರ್ಷಗಳ ಹಿಂದೆ ಒಂದೇ ಒಂದು ಬಿಡ್ ಕಾಯಿನ್ ತಗೊಂಡಿದ್ರೆ, ಈಗ ನೀವು ಲಕ್ಷಾಧಿಪತಿಗಳಾಗಿ ಇರ್ತಿದ್ರಿ..ಯಾಕಂದ್ರೆ ಬಿಟ್ ಕಾಯಿನ್ ಬೆಲೆ ಬಂಗಾರದ ಬೆಲೆಯಷ್ಟೇ ಆಗಿದೆ. ಹಾಗಿದ್ರೆ ಒಂದ್ ಬಿಟ್ ಕಾಯಿನ್ ಬೆಲೆ ಎಷ್ಟಿದೆ? ಭಾರತದಲ್ಲಿ ಇದ್ರಾ ಬಳಕೆ ಇದ್ಯಾ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ತ್ರಿಮೋಕ್ಷಿ ಮಧ್ಯೆ ಚಿಗುರಿದ ಪ್ರೀತಿ? – BBK ನಲ್ಲಿ ಮತ್ತೊಂದು ಲವ್‌ ಸ್ಟೋರಿ

ಸಾಕಷ್ಟು ಜನ ದುಡ್ಡು ಮಾಡ್ಬೇಕು  ಕಾಯ್ತಾ ಇರ್ತಾರೆ.. ಹಲವು ಜನ ಶೇರ್ ಮಾರ್ಕೆಟ್‌ನಲ್ಲಿ ಹೂಡಿಕೆ   ಮಾಡಿ ಕೋಟಿ ಕೋಟಿ ಕಳೆದುಕೊಂಡಿದ್ದಾರೆ. ಆದ್ರೆ ಬಿಟ್ ಕಾಯಿನ್ ವ್ಯಾಲೂ ಮಾತ್ರ ಕಮ್ಮಿಯಾಗಿಲ್ಲ.. ಕಳೆದ 15 ವರ್ಷಗಳಿಂದ ಬಿಟ್ ಕಾಯಿನ್‌ಗೆ ಸಾಕಷ್ಟು ಬೆಲೆ ಬಂದಿದೆ.. ಹಾಗಿದ್ರೆ ಕ್ರಿಪ್ಟೋಕರೆನ್ಸಿ ಭವಿಷ್ಯ ಇನ್ನೂ ಅನಿಶ್ಚಿತವಾಗಿದ್ದರೂ ಬಿಟ್ಕಾಯಿನ್ ಇತ್ಯಾದಿಗಳಿಗೆ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ವಿಶ್ವದ ಅತಿದೊಡ್ಡ ಕ್ರಿಪ್ಟೋಕರೆನ್ಸಿ ಎನಿಸಿದ ಬಿಟ್ಕಾಯಿನ್ನ   90,000 ಡಾಲರ್ ಗಡಿ ದಾಟಿದೆ.ದಿನ ನಿತ್ಯ ಏರಿಳಿತವಾಗುತ್ತಿದೆ.  ಭಾರತೀಯ ರುಪಾಯಿ ಲೆಕ್ಕದಲ್ಲಿ ಈಗ ಒಂದು ಬಿಟ್ಕಾಯಿನ್ ಬೆಲೆ ಬರೋಬ್ಬರಿ 76 ಲಕ್ಷ ರೂ ಅಧಿಕವಿದೆ.

2009 ರಲ್ಲಿ 6 ಸಾವಿರ..ಈಗ 76 ಲಕ್ಷಕ್ಕೂ ಹೆಚ್ಚು

ಬಿಟ್‌ಕಾಯಿನ್‌ ಚಿನ್ನದಷ್ಟೇ ಮೌಲ್ಯಯುತವಾದದ್ದು ಎಂಬುದು ತಜ್ಞರ ಅಭಿಮತ. 2009ರಲ್ಲಿ ಬಿಟ್‌ಕಾಯಿನ್‌ ಆರಂಭವಾದ ಬಳಿಕ ಇದರ ಮೌಲ್ಯ ಹೆಚ್ಚುತ್ತಾ ಹೋಯಿತು. ₹6,900ಕ್ಕೆ ಲಭ್ಯವಿದ್ದ ಒಂದು ಬಿಟ್‌ಕಾಯಿನ್‌ ಬೆಲೆ 2024ರ ನವೆಂಬರ್‌ರೆ 14ರಂದು ಸುಮಾರು ₹76 ಲಕ್ಷಕ್ಕೆ ತಲುಪಿದೆ.

ಟ್ರಂಪ್‌ನಿಂದ ಹೆಚ್ಚಾಯ್ತು ಬಿಟ್ ಕಾಯಿನ್ ಬೆಲೆ   

ಬಿಟ್ಕಾಯಿನ್ ಡೊನಾಲ್ಡ್ ಟ್ರಂಪ್ ಅಧ್ಯಕ್ಷ ಸ್ಥಾನದ ಕಣಕ್ಕೆ ಇಳಿದಾಗಿನಿಂದಲೇ ಬಿಟ್ಕಾಯಿನ್ ಬೇಡಿಕೆ ಗಳಿಸತೊಡಗಿತ್ತು. ಟ್ರಂಪ್ ಗೆಲುವು ಸಾಧಿಸಬಹುದು ಎನ್ನುವ ಸುಳಿವು ದಟ್ಟವಾಗುತ್ತಿರುವಂತೆಯೇ ಬಿಟ್ಕಾಯಿನ್ ಬೆಲೆ ಮೇಲೇರತೊಡಗುತ್ತಲೇ ಹೋಗಿದೆ. ಟ್ರಂಪ್ ಚುನಾವಣೆ ಗೆದ್ದ ಬಳಿಕ ಶೇ. 30ರಷ್ಟು ಬೆಲೆ ಏರಿಕೆ ಆಗಿದೆ. ಬಿಟ್ಕಾಯಿನ್ ಮಾತ್ರವಲ್ಲ, ಬೇರೆ ಹಲವು ಕ್ರಿಪ್ಟೋಕರೆನ್ಸಿಗಳಿಗೂ ಈ ವೇಳೆ ಬೇಡಿಕೆ ಹೆಚ್ಚತೊಡಗಿದೆ. ಡೊನಾಲ್ಡ್ ಟ್ರಂಪ್ 2024ರ ಆಗಸ್ಟ್ನಲ್ಲಿ ಕ್ರಿಪ್ಟೋಕರೆನ್ಸಿ ಬಗ್ಗೆ ಬಹಳ ಸಕಾರಾತ್ಮಕವಾಗಿ ಮಾತನಾಡಿದ್ದರು. ಕ್ರಿಪ್ಟೋಕರೆನ್ಸಿಗಳು ಭವಿಷ್ಯವನ್ನು ರೂಪಿಸುತ್ತವೆ ಎಂದಿದ್ದರು. ಅಷ್ಟೇ ಅಲ್ಲ, ಸರ್ಕಾರವು ಪೆಟ್ರೋಲಿಯಂ ಅನ್ನು ಸಂಗ್ರಹಿಸಿ ಇಡುವಂತೆ ಭದ್ರತಾ ಕ್ರಮವಾಗಿ ಕ್ರಿಪ್ಟೋಕರೆನ್ಸಿಗಳನ್ನೂ ಖರೀದಿಸಿ ಇಡಲಾಗುವುದು ಎನ್ನುವ ಪ್ರಸ್ತಾವ ಮಾಡಿದ್ದರು. ಹಿಂದಿನ ಬೈಡನ್ ಸರ್ಕಾರ ಕ್ರಿಪ್ಟೋಗಳ ಬಗ್ಗೆ ನಕಾರಾತ್ಮಕ ಧೋರಣೆ ಹೊಂದಿತ್ತು. ಕುತೂಹಲ ಎಂದರೆ ಟ್ರಂಪ್ ಈ ಹಿಂದೆ ಕ್ರಿಪ್ಟೋ ಬಗ್ಗೆ ಇದ್ದ ಅಭಿಪ್ರಾಯ ಅಷ್ಟಕಷ್ಟೇ. ಇತ್ತೀಚೆಗೆ ಟ್ರಂಪ್ ನಿಲುವು ಬದಲಾದಂತಿದೆ. ಕ್ರಿಪ್ಟೋದ ಸಮರ್ಥಕರಾಗಿ ಬದಲಾಗಿ ಹೋಗಿದ್ದಾರೆ. ಟ್ರಂಪ್ಗೆ ಆಪ್ತರಾಗಿರುವ ಇಲಾನ್ ಮಸ್ಕ್ ಅವರು ಕ್ರಿಪ್ಟೋ ಕರೆನ್ಸಿಗಳ ಪ್ರಬಲ ಸಮರ್ಥಕರಾಗಿದ್ದಾರೆ. ಈಗ ಟ್ರಂಪ್ ಆಡಳಿತದಲ್ಲಿ ಕ್ರಿಪ್ಟೋ ಮಾರುಕಟ್ಟೆಗೆ ಭರ್ಜರಿ ಪುಷ್ಟಿ ಸಿಗಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಟ್ಕಾಯಿನ್ ಇತ್ಯಾದಿ ಕ್ರಿಪ್ಟೋಕರೆನ್ಸಿಗಳಿಗೆ ಬೇಡಿಕೆ ಹೆಚ್ಚುತ್ತಿದೆ.

ಭಾರತದಲ್ಲಿ ಬಿಟ್‌ಕಾಯಿನ್‌ ವ್ಯವಹಾರ ಇದ್ಯಾ?

ಭಾರತದಲ್ಲಿ ಬಿಟ್ಕಾಯಿನ್ ನಿಷೇಧವಾಗಿದೆಯಾ? ಭಾರತ ಸರ್ಕಾರ ಕ್ರಿಪ್ಟೋಕರೆನ್ಸಿಯನ್ನು ನಿಷೇಧಿಸಿಲ್ಲವಾದರೂ ಅದರ ವಹಿವಾಟಿಗೆ ಉತ್ತೇಜನವನ್ನಂತೂ ನೀಡುತ್ತಿಲ್ಲ. ಈ ಡಿಜಿಟಲ್ ಕರೆನ್ಸಿ ಬಗ್ಗೆ ಸರ್ಕಾರಕ್ಕೆ ಇನ್ನೂ ಹಲವು ಅನುಮಾನಗಳು ಉಳಿದಿವೆ. ಆದರೆ, ಕ್ರಿಪ್ಟೋದಲ್ಲಿ ಹೂಡಿಕೆ ಮಾಡಲು ಅಡ್ಡಿ ಇಲ್ಲ. ಇದರಲ್ಲಿ ಗಳಿಸಿದ ಲಾಭದ ಮೇಲೆ ಶೇ. 30ರಷ್ಟು ತೆರಿಗೆ ಹಾಕಲಾಗುತ್ತಿದೆ.  ಬ್ಯಾಂಕ್‌ಗಳು ಅಥವಾ ಹಣಕಾಸು ಸಂಸ್ಥೆಗಳು ಕ್ರಿಸ್ಟೋಕರೆನ್ಸಿ ವಹಿವಾಟಿಗೆ ಅವಕಾಶ ನೀಡಬಾರದು ಎಂಬುದಾಗಿ 2018ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನಿಷೇಧ ಹೇರಿತ್ತು. ಆದರೆ 2020ರಲ್ಲಿ ಇದಕ್ಕೆ ತಡೆ ನೀಡಿದ್ದ ಸುಪ್ರೀಂ ಕೋರ್ಟ್, ಆನ್‌ಲೈನ್ ವಹಿವಾಟಿಗೆ ಅವಕಾಶ ನೀಡಿತ್ತು.

ಏನಿದು ಡಿಜಿಟಲ್ ವ್ಯಾಲೆಟ್?

ಪ್ರತಿಯೊಂದು ಬಿಟ್‌ಕಾಯಿನ್ ಒಂದು ಕಂಪ್ಯೂಟರ್ ಕಡತ (ಫೈಲ್) ಇದ್ದಂತೆ. ಬಿಟ್‌ಕಾಯಿನ್‌ಗಳನ್ನು ಕಂಪ್ಯೂಟರ್ ಅಥವಾ ಸ್ಮಾರ್ಟ್‌ಫೋನ್‌ ಆ್ಯಪ್‌ನಲ್ಲಿರುವ ‘ಡಿಜಿಟಲ್ ವ್ಯಾಲೆಟ್‌’ನಲ್ಲಿ ಸಂಗ್ರಹಿಸಲಾಗಿರುತ್ತದೆ. ಜನರು ತಮ್ಮಲ್ಲಿರುವ ಬಿಟ್‌ಕಾಯಿನ್‌ ಅನ್ನು ಮತ್ತೊಬ್ಬರ ಡಿಜಿಟಲ್ ವ್ಯಾಲೆಟ್‌ಗೆ ರವಾನಿಸಬಹುದು. ಅವರು ಮತ್ತೊಬ್ಬರಿಗೆ ಅದನ್ನು ವರ್ಗಾಯಿಸಬಹುದು. ಈ ಎಲ್ಲ ಪ್ರಕ್ರಿಯೆಗಳೂ ‘ಬ್ಲಾಕ್‌ಚೈನ್’ ಎಂಬ ಡಿಜಿಟಲ್ ರೂಪದ ದಾಖಲಾತಿಯಲ್ಲಿ ಸಂಗ್ರಹವಾಗುತ್ತವೆ. ಬಿಟ್ ಕಾಯಿನ್ ಅನ್ನು ಯಾರು ಯಾರಿಗೆ ಮಾರಾಟ ಮಾಡಿದರು ಅಥವಾ ವರ್ಗಾಯಿಸಿದರು ಎಂಬ ಮಾಹಿತಿ ಬ್ಲಾಕ್‌ಚೈನ್‌ನಲ್ಲಿ ಸಿಗುತ್ತದೆ. ಯಾರು ಬೇಕಾದರೂ ಇದನ್ನು ಪರಿಶೀಲಿಸಬಹುದು. ಮಾರುಕಟ್ಟೆಯಲ್ಲಿ ಬೆಳ್ಳಿಯನ್ನೂ ಹಿಂದಿಕ್ಕಿ, ಬಿಟ್‌ಕಾಯಿನ್ ಮುನ್ನುಗ್ಗುತ್ತಿದೆ.

Shwetha M