ಬಿಷ್ಣೋಯಿಗೆ ಟಿಕೆಟ್ ಆಫರ್ – ಲಾರೆನ್ಸ್ ಕೊಂದ್ರೆ 1 ಕೋಟಿ
ಭಗತ್‌ಸಿಂಗ್ ಆದ ಗ್ಯಾಂಗ್‌ಸ್ಟರ್‌  

ಬಿಷ್ಣೋಯಿಗೆ ಟಿಕೆಟ್ ಆಫರ್ – ಲಾರೆನ್ಸ್ ಕೊಂದ್ರೆ 1 ಕೋಟಿಭಗತ್‌ಸಿಂಗ್ ಆದ ಗ್ಯಾಂಗ್‌ಸ್ಟರ್‌  

ಬಾಲಿವುಡ್ ನಟ ಸಲ್ಮಾನ್ ಖಾನ್, ಮುಂಬೈ ಪೊಲೀಸರು ಸೇರಿದಂತೆ ಹಲವರಿಗೆ  ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿ ಅಂಡ್ ಗ್ಯಾಂಗ್‌ ದೊಡ್ಡ ತಲೆನೋವು ಆಗಿದೆ. ಬಿಷ್ಣೋಯಿ ಗ್ಯಾಂಗ್‌ ಬಾಬಾ ಸಿದ್ದಿಕಿ ಕೊಲೆ ಮಾಡಿದ ನಂತ್ರ ಸಲ್ಮಾನ್‌ ಖಾನ್‌ಗೆ ಜೀವ ಭಯ ಶುರುವಾಗಿದೆ. ಈ ನಡುವೆ ಗ್ಯಾಂಗ್ ಸ್ಟರ್ ಲಾರೆನ್ಸ್ ಬಿಷ್ಣೋಯಿಗೆ, ಮುಂಬರುವ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಆಫರ್ ಅನ್ನು ಪಕ್ಷವೊಂದು ನೀಡಿದೆ. ಜೈಲಿನಲ್ಲಿರೋ ಲಾರೆನ್ಸ್‌ಗೆ ಟಿಕೆಟ್ ನೀಡುತ್ತೇವೆ ಅಂತಾ ಹೇಳಿದ್ದು ಯಾವ ಪಕ್ಷ..? ಬಿಷ್ಣೋಯಿ ಕೊಲೆಗೆ ಪೊಲೀಸರಿಗೆ ಆಫರ್ ಕೊಟ್ಟಿದ್ದು ಯಾರು ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ:  RCBಯಲ್ಲಿ ಕನ್ನಡಿಗರಿಗೆ ಚಾನ್ಸ್ ಕೊಡಿ! – ಫ್ರಾಂಚೈಸಿಗೆ ಸಿದ್ದು ಸರ್ಕಾರ ಡಿಮ್ಯಾಂಡ್

ಅಹ್ಮದಾಬಾದ್ ನಲ್ಲಿರುವ ಶಬರಿಮತಿ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ, ಹಲವು ಪ್ರಮುಖರ ಸಾವಿಗೆ ಕಾರಣವಾಗಿದ್ದಾನೆ. ಇತ್ತೀಚೆಗೆ, ಮಾಜಿ ಸಚಿವ ಮತ್ತು ಎನ್‌ಸಿಪಿ  ನಾಯಕ ಬಾಬಾ ಸಿದ್ದಿಕಿ ಹತ್ಯೆಯ ಹಿಂದೆಯೂ ಬಿಷ್ಣೋಯಿ ಹೆಸರು ತುಳುಕು ಹಾಕುತ್ತಿದೆ. 288 ಅಸೆಂಬ್ಲಿ ಸ್ಥಾನವನ್ನು ಹೊಂದಿರುವ ಮಹಾರಾಷ್ಟ್ರ ವಿಧಾನಸಭೆಗೆ ನವೆಂಬರ್ 20ರಂದು ಚುನಾವಣೆ ನಡೆಯಲಿದೆ. ಈ ನಡುವೆ ತಮ್ಮ ಪಕ್ಷದ ಚಿಹ್ನೆಯಡಿಯಲಿ ಸ್ಪರ್ಧಿಸುವಂತೆ ಸ್ಥಳೀಯ UBVS ಪಕ್ಷವು  ಬಿಷ್ಣೋಯಿಗೆ  ಆಹ್ವಾನವನ್ನು ನೀಡಿದೆ. ಈ ಬಗ್ಗೆ ಮಾತವಾಡಿದ ಪಾರ್ಟಿಯ ಅಧ್ಯಕ್ಷ ಸುನೀಲ್ ಶುಕ್ಲಾ,  ಲಾರೆನ್ಸ್ ಬಿಷ್ಣೋಯಿ ನಮ್ಮ ಆಹ್ವಾನವನ್ನು ಸ್ವೀಕರಿಸಿ ಸ್ಪರ್ಧಿಸಲು ಒಪ್ಪಿದರೆ, ಅವರಿಗೂ ಟಿಕೆಟ್ ಘೋಷಣೆಯನ್ನು ಮಾಡಲಾಗುವುದು. ನಿಮ್ಮ ಅಭಿಪ್ರಾಯವನ್ನು ಕೂಡಲೇ ತಿಳಿಸಿ ಎಂದು ಶುಕ್ಲಾ, ಬಿಷ್ಣೋಯಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ನಾವು ನಿಮ್ಮಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರನ್ನು ಕಾಣುತ್ತಿದ್ದೇವೆ ಎಂದು ಶುಕ್ಲಾ ತಮ್ಮ ಪತ್ರದಲ್ಲಿ ಹೇಳಿದ್ದಾರೆ. ಆ ಮೂಲಕ, ಕುಖ್ಯಾತ ಗ್ಯಾಂಗ್ ಸ್ಟರ್ ಅನ್ನು ದೇಶಕ್ಕಾಗಿ ಹೋರಾಡಿ ಹುತಾತ್ಮರಾದವರಿಗೆ ಹೋಲಿಸಿದ್ದಾರೆ. ಮತ್ತೊಂದು ಕಡೆ ಲಾರಸ್ಸ್ ಬಿಷ್ಣೋಯಿ ಸಾಯಿಸಲು ಪೊಲೀಸರಿಗೆ ಆಫರ್ ನೀಡಲಾಗಿದೆ.

ಲಾರೆನ್ಸ್ ಕೊಂದ್ರೆ ಒಂದು ಕೋಟಿ ಬಹುಮಾನ 

ಗ್ಯಾಂಗ್​​ಸ್ಟರ್​​ ಲಾರೆನ್ಸ್ ಬಿಷ್ಣೋಯಿಯನ್ನು ಎನ್‌ಕೌಂಟರ್‌ನಲ್ಲಿ ಕೊಂದ ಯಾವುದೇ ಪೊಲೀಸ್ ಅಧಿಕಾರಿಗೆ ನಗದು ಬಹುಮಾನ ನೀಡಲಾಗುವುದು. ಪಾತಕಿಯನ್ನು ಕೊಂದವರಿಗೆ ಒಂದು ಕೋಟಿ ಹನ್ನೊಂದು ಲಕ್ಷದ ಹನ್ನೊಂದು ಸಾವಿರ ನೂರಾ ಹನ್ನೊಂದು ರೂಪಾಯಿ ಕೊಡಲಾಗುವುದು ಎಂದು ಕ್ಷತ್ರಿಯ ಕರ್ಣಿ ಸೇನೆಯ ರಾಷ್ಟ್ರೀಯ ಅಧ್ಯಕ್ಷ ರಾಜ್‌ ಶೆಖಾವತ್ ಹೇಳಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್​ ಅಮರ್ ಶಹೀದ್ ಸುಖದೇವ್ ಸಿಂಗ್ ಗೊಗಮೆಡಿ ಅವರ ಹತ್ಯೆಗೆ ಕಾರಣ. ಹೀಗಾಗಿ ಆ ಗುಂಪಿನ ನಾಯಕ ಎಂದು ಗುರುತಿಸಿಕೊಂಡಿರುವ ಲಾರೆನ್ಸ್​ ಬಿಷ್ಣೋಯಿ ಎನ್​ಕೌಂಟರ್​ ಆಗಬೇಕು ಎಂದು ಕರ್ಣಿ ಸೇನೆಯ ಮುಖ್ಯಸ್ಥರು ಗುಡುಗಿದ್ದಾರೆ.

Shwetha M