ವಿಷ್ಣು-ಉಪ್ಪಿ-ಶ್ರುತಿ ಜನ್ಮ ದಿನ – ನೆಚ್ಚಿನ ಕಲಾವಿದರಿಗೆ Happy Birthday…

ಸಾಹಸ ಸಿಂಹ ವಿಷ್ಣುವರ್ಧನ್ ಅವರ 75 ನೇ ಜನ್ಮ ದಿನಾಚರಣೆಯನ್ನು ಇವತ್ತು ಆಚರಿಸಲಾಗುತ್ತಿದೆ. ಜೊತೆಗೆ ರಿಯಲ್ ಸ್ಟಾರ್ ಉಪೇಂದ್ರ ಅವರಿಗೂ ಇವತ್ತು ಹುಟ್ಟುಹಬ್ಬದ ಸಂಭ್ರಮ. ಹಿರಿಯ ನಟಿ ಶ್ರುತಿ ಕೂಡಾ ಇವತ್ತು ಜನ್ಮದಿನದ ಸಂತಸದಲ್ಲಿದ್ದಾರೆ.
ಇದನ್ನೂ ಓದಿ:ಅಮೃತಧಾರೆ ಸೀರಿಯಲ್ ನಲ್ಲಿ ಬಂದೇ ಬಿಡ್ತು ಆ ಕ್ಷಣ..!- ಭೂಮಿಗೆ ಗೌತಮ್ ಹೂವು ಕೊಟ್ಟಾಯ್ತು..!
ಅಭಿಮಾನಿಗಳ ನೆಚ್ಚಿನ ವಿಷ್ಣುದಾದ ಹುಟ್ಟುಹಬ್ಬವನ್ನು ಅಭಿಮಾನಿಗಳು ಅಭಿಮಾನದಿಂದ ಆಚರಿಸುತ್ತಿದ್ದಾರೆ. ಅಭಿಮಾನ್ ಸ್ಟುಡಿಯೋದಲ್ಲಿ ಏನು ಮಾಡಲು ಆಗ್ತಿಲ್ಲ ಅನ್ನುವ ಬೇಸರ ಅಭಿಮಾನಿಗಳಲ್ಲಿ ಇದ್ದೇ ಇದೆ. ಆದರೆ, ಈ ದಿನವೇ ವಿಷ್ಣ ದರ್ಶನ್ ಕೇಂದ್ರ ಉದ್ಘಾಟನೆ ಆಗುತ್ತಿದೆ. ಇದಕ್ಕೆ ಕಿಚ್ಚ ಸುದೀಪ್ ಬರ್ತಿದ್ದಾರೆ. ಈ ದಿನವೇ ವಿಷ್ಣು ಕೇಂದ್ರದ ನೀಲಿ ನಕ್ಷೆ ಕೂಡ ರಿಲೀಸ್ ಆಗುತ್ತಿದೆ. ಇದೇ ಸಮಾಧಾನದಲ್ಲೇ ವಿಷ್ಣು ಅಭಿಮಾನಿಗಳು ದಾದಾ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.
ರಿಯಲ್ಸ್ಟಾರ್ ಉಪೇಂದ್ರ ಹುಟ್ಟುಹಬ್ಬ
ರಿಯಲ್ ಸ್ಟಾರ್ ಉಪೇಂದ್ರ ಅವರು 57ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಉಪ್ಪಿ ಜನ್ಮ ದಿನದ ಪ್ರಯುಕ್ತ ಕತ್ತರಿಗುಪ್ಪೆ ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಕತ್ತರಿಗುಪ್ಪೆ ಮನೆಯಲ್ಲಿಯೇ ಈ ಸಲದ ಬರ್ತ್ ಡೇ ಸಂಭ್ರಮ ಪ್ಲಾನ್ ಆಗಿದೆ. 45 ಸಿನಿಮಾ ತಂಡ ವಿಶೇಷ ಕಾರ್ಯಕ್ರಮ ನಡೆಸಿಕೊಟ್ಟಿದೆ. ವಿಶೇಷ ಬೈಕ್ ಅನಾವರಣ ಹಾಗೂ ಕೇಕ್ ಕಟ್ಟಿಂಗ್ ಕೂಡಾ ಮಾಡಲಾಗಿದೆ. ಉಪೇಂದ್ರ ಅಭಿನಯದ ಭಾರ್ಗವ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ. ನಾಗಣ್ಣ ನಿರ್ದೇಶನದ ಈ ಚಿತ್ರದ ಫಸ್ಟ್ ಟೀಸರ್ ಉಪ್ಪಿಯ 57 ನೇ ಜನ್ಮ ದಿನದ ಹಿನ್ನೆಲೆಯಲ್ಲಿಯೇ ಬರ್ತಿದೆ.
ನಟಿ ಶ್ರುತಿ ಹುಟ್ಟುಹಬ್ಬ
ನಟಿ ಶ್ರುತಿ ಅವರಿಗೆ ಈ ಬಾರಿ ಸ್ಪೆಷಲ್ ಬರ್ತ್ಡೇ. ನಟಿ ಶ್ರುತಿ 50ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಹೀಗಾಗಿ ಚಿತ್ರರಂಗದ ಕಲಾವಿದೆಯರೆಲ್ಲಾ ಸೇರಿ ಗೆಳತಿ ಶ್ರುತಿ ಹುಟ್ಟುಹಬ್ಬಕ್ಕೆ ಶುಭಕೋರಲು ಮನೆಗೆ ಆಗಮಿಸಿದರು. ನಟಿಮಣಿಯರ ಜೊತೆ ಹಾಗೂ ಮನೆಯವರ ಜೊತೆ ಶ್ರುತಿ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮ ಪಡುತ್ತಿದ್ದಾರೆ.

ನೋಡಿರಿ

