ಬರ್ತ್‌ಡೇ ಸೆಲೆಬ್ರೇಷನ್ ವೇಳೆ ಕೇಕ್ ಬ್ಲಾಸ್ಟ್! – ಅಬ್ಬಬ್ಬಾ.. ಭಯಾನಕ ವಿಡಿಯೋ ವೈರಲ್!

ಮೊದ್ಲೆಲ್ಲಾ ಈ ಬರ್ತ್‌ಡೇ ಸೆಲೆಬ್ರೇಷನ್ ಮಾಡ್ತಿದ್ದಿದ್ದು ತೀರಾ ಕಡಿಮೆ.. ದೇವಸ್ಥಾನಕ್ಕೆ ಹೋಗಿ ಬರೋದು.. ಬಳಿಕ ಮನೆಯಲ್ಲಿ ವಿಶೇಷ ಅಡುಗೆ ತಯಾರಿಸ್ತಿದ್ರು.. ಆದ್ರೀಗ ಜನರು ಫುಲ್ ಅಪ್‌ಡೇಟ್ ಆಗಿದ್ದಾರೆ. ಇದೀಗ ಬರ್ತ್‌ಡೇ ಸೆಲೆಬ್ರೇಷನ್ ಒಂದು ಟ್ರೆಂಡ್ ಆಗಿದೆ. ಯುವಕರ ಸೆಲೆಬ್ರೇಷನ್ ಅಂತೂ ಚಿತ್ರ ವಿಚಿತ್ರವಾಗಿರುತ್ತೆ.. ಇದೀಗ ಇಲ್ಲೊಬ್ಬ ವ್ಯಕ್ತಿ ಬರ್ತ್ ಡೇ ಸೆಲೆಬ್ರೇಷನ್ ಮಾಡಲು ಹೋಗಿ ಪೇಚಿಗೆ ಸಿಲುಕಿದ್ದಾನೆ.. ಸ್ನೇಹಿತರ ಚೇಷ್ಟೆಯಿಂದಾಗಿ ಕೇಕ್ ಬ್ಲಾಸ್ಟ್ ಆಗಿದೆ.
ಇದನ್ನೂ ಓದಿ: ನಾನಿನ್ನೂ ಮದುವೆಯಾಗಿಲ್ಲ ಎಂದು ಹೇಗೆ ಗೊತ್ತು? – ಮದುವೆ ಬಗ್ಗೆ ನಟಿ ಕಂಗನಾ ಶಾಕಿಂಗ್ ಹೇಳಿಕೆ!
ಈಗೀಗ ಬರ್ತ್‌ಡೇ ಸೆಲೆಬ್ರೇಷನ್ ಒಂದು ರೀತಿಯ ಟ್ರೆಂಡ್ ಆಗಿದೆ. ಬೇರೆಯವರಿಗಿಂತ ವಿಭಿನ್ನವಾಗಿ ಹುಟ್ಟುಹಬ್ಬ ಆಚರಿಸಬೇಕು ಅಂತಾ ಬಯಸ್ತಾರೆ.. ಆದ್ರೆ ಕೆಲವರು ಮಾತ್ರ ಬರ್ತ್‌ಡೇ ಸೆಲೆಬ್ರೇಷನ್ ಹೆಸರಲ್ಲಿ ಹುಚ್ಚಾಟ ಮೆರೆಯುತ್ತಾರೆ.. ಇಂತಹ ಸಾಕಷ್ಟು ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುತ್ತವೆ. ಇದೀಗ ಇಂತಹದ್ದೇ ಮತ್ತೊಂದು ವಿಡಿಯೋ ವೈರಲ್ ಆಗಿದೆ. ಯುವಕನೊಬ್ಬ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದ. ಕೇಕ್ ಅನ್ನ ಕೂಡ ತರಿಸಲಾಗಿತ್ತು. ಇನ್ನೇನು ಕೇಕ್ ಕಟ್ ಮಾಡಬೇಕು ಅನ್ನೋವಷ್ಟರಲ್ಲಿ ಅದು ಸ್ಫೋಟಗೊಂಡಿದೆ. ಈ ವಿಡಿಯೊ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿದೆ.
ವೈರಲ್ ಆದ ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಸ್ನೇಹಿತರ ಜೊತೆ ಬರ್ತ್‌ಡೇ ಪಾರ್ಟಿ ಮಾಡುತ್ತಿದ್ದ. ಈ ವೇಳೆ ಕೇಕ್ ಅನ್ನ ಕೈಯಲ್ಲಿ ಹಿಡಿದುಕೊಂಡು ಎಂಜಾಯ್ ಮಾಡುತಿದ್ದ. ಬಳಿಕ ಒಂದು ಕೈಯಲ್ಲಿ ಕೇಕ್ ಹಿಡಿದು, ಇನ್ನೊಂದು ಕೈಯಲ್ಲಿ ಮಾಂಸದವನ್ನ ಫ್ರೈ ಮಾಡ್ತಿದ್ದ. ಈ ವೇಳೆ ಇದ್ದಕ್ಕಿದ್ದಂತೆ ಕೇಕ್ ಸ್ಫೋಟಗೊಂಡಿದೆ. ಸ್ಪೋಟದ ತೀವ್ರತೆಗೆ ಕೇಕ್ ನೂರಾರು ಪೀಸ್ ಆಗಿದೆ. ಆತನ ಕಣ್ಣಿಗೂ ಪೆಟ್ಟಾಗಿದೆ. ಬಳಿಕ ಆತಂಕದಿಂದ ಕಣ್ಣುಗಳನ್ನು ಉಜ್ಜುತ್ತಾ ಸ್ವಿಮ್ಮಿಂಗ್ ಪೂಲ್‌ಗೆ ಹಾರಿದ್ದಾನೆ. ಸದ್ಯ ಇದ್ರ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ. ಆ ವ್ಯಕ್ತಿ ಸದ್ಯ ಏನಾಗಿದೆ ಎಂದು ತಿಳಿದುಬಂದಿಲ್ಲ. ಆದ್ರೆ ಕೇಕ್‌ನಲ್ಲಿ ಆತನ ಸ್ನೇಹಿತರು ಸ್ಪೋಟಕ ವಸ್ತುವನ್ನ ಇಟ್ಟು ಕೊಟ್ಟಿರಬಹುದು ಎಂದು ಹೇಳಲಾಗ್ತಿದೆ. ಇದೀಗ ಸ್ನೇಹಿತರ ಈ ಹುಚ್ಚಾಟಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದೆ. ತಮಾಷೆ ಹೆಸರಲ್ಲಿ ಇನ್ನೊಬ್ಬರ ಜೀವಕ್ಕೆ ಕುತ್ತು ತರಬೇಡಿ. ಹುಟ್ಟು ಹಬ್ಬದ ಆಚರಣೆ ಹುಚ್ಚಾಟ ಆಗ್ಬಾರ್ದು ಎಂದು ಕಾಮೆಂಟ್ ಮಾಡಿದ್ದಾರೆ.

ನೋಡಿರಿ

