ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ – ಮಣಿಪುರ ಸರ್ಕಾರಕ್ಕೆ NPP ಬೆಂಕಿ!  
ಶಾಸಕರು, ಸಚಿವರ ಮನೆ ಧಗಧಗ!

ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ – ಮಣಿಪುರ ಸರ್ಕಾರಕ್ಕೆ NPP ಬೆಂಕಿ!  ಶಾಸಕರು, ಸಚಿವರ ಮನೆ ಧಗಧಗ!

ಮಣಿಪುರ ಧಗಧಗಿಸುತ್ತಿದ್ದು, ಹಿಂಸಾಚಾರ ಭುಗಿಲೆದ್ದಿದೆ. ಎರಡು ಸಮುದಾಯಗಳ ನಡುವೆ ಉಂಟಾದ ಸಂಘರ್ಷ ಹಿಂಸಾಚಾರಕ್ಕೆ ತಿರುಗಿದ್ದು, ರಸ್ತೆಗಳಲ್ಲಿ ಹೆಣಗಳು ಬೀಳುತ್ತಿವೆ. ಅದ್ರಲ್ಲೂ ಕಳೆದ ಶನಿವಾರ ಮತ್ತು ಭಾನುವಾರ ನಡೆದ ಹಿಂಸಾಚಾರದಲ್ಲಿ ಉದ್ರಿಕ್ತರ ಗುಂಪು ಸಚಿವರು, ಶಾಸಕರು ಮತ್ತು ರಾಜಕೀಯ ಮುಖಂಡರ ಮನೆಗಳ ಮೇಲೆ ದಾಳಿ ನಡೆಸಿದೆ. ಈ ನಡುವೆ ಈಗ  NPP ಬೆಂಬಲ ಹಿಂಪಡೆದ್ದು, ಮಣಿಪುರದಲ್ಲಿ ಬಿಜೆಪಿ ಸರ್ಕಾರ ಪತನ ಆಗುತ್ತಾ ಅನ್ನೋ ಪ್ರಶ್ನೆ ಎದ್ದಿದೆ. ಹಾಗಿದ್ರೆ ಮಣಿಪುರದಲ್ಲಿ ಏನೆಲ್ಲಾ ಆಗ್ತಿದೆ?  ಗಲಭೆ ಬಿಜೆಪಿ ಮೇಲೆ ಎಷ್ಟು ಎಫೆಕ್ಟ್ ಆಗಿದೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ಪ್ಲೇಯಿಂಗ್ 11 ಸ್ಲಾಟ್ ಫಿಕ್ಸ್ – ಓಪನರ್ TO ಡೆತ್ ಓವರ್ ಬೌಲರ್

ಕಳೆದ ಕೆಲವು ದಿನಗಳಿಂದ ಮಣಿಪುರದಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು, ಅಮಾಯಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೂವರು ಸಚಿವರು ಮತ್ತು ಆರು ಶಾಸಕರ ಮನೆಗಳನ್ನು ಹಿಂಸಾತ್ಮಕ ಗುಂಪು ಧ್ವಂಸ ಮಾಡಿದೆ. ಜನರು ಭಯದಿಂದ ಬದುಕುತ್ತಿದ್ದು, ಅತಿಯಾದ ಸಂಕಷ್ಟ ಅನುಭವಿಸುತ್ತಿದ್ದಾರೆ. ಕಾಣೆಯಾದವರ ರುಂಡ, ಮುಂಡ ಹಾದಿ ಬೀದಿಯಲ್ಲಿ ಸಿಗುತ್ತಿದೆ. ದೊಡ್ಡ ಮಟ್ಟದಲ್ಲಿ ಹಿಂಸಾಚಾರ ಆಗುತ್ತಿದ್ದರು ಬಿಜೆಪಿ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂಬ ಆರೋಪಿವಿದೆ. ಅಲ್ಲದೇ ಮಣಿಪುರ ಬಿಜೆಪಿ ಸರ್ಕಾರ ನಮ್ಮ ವಿರುದ್ಧ ಇದ್ದಾರೆ ಅಂತಾ ಸುಪ್ರೀಂ ಕೋರ್ಟ್ ತನಕ ಕುಕಿಗಳು ಹೋಗಿದ್ರು. ಈಗ ಮೈತ್ರಿ ಪಕ್ಷದದವೇ ಬಿಜೆಪಿ ವಿರುದ್ಧ ತಿರುಗಿ ಬಿದ್ದಿದ್ದು, ಬೆಂಬಲ ವಾಪಾಸ್ ಪಡೆದಿದೆ.

ಕೈ ಕೊಟ್ಟ ಮೈತ್ರಿ, ಬೀಳುತ್ತಾ ಬಿಜೆಪಿ ಸರ್ಕಾರ?

ಬಿಜೆಪಿಯ ಮಿತ್ರಪಕ್ಷ NPP ಬೆಂಬಲ ಹಿಂತೆಗೆದುಕೊಳ್ಳುವುದರೊಂದಿಗೆ ವಾತಾವರಣ ಬಿಸಿಯಾಗಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರಿಗೆ ಬರೆದ ಪತ್ರದಲ್ಲಿ  NPP ಅಧ್ಯಕ್ಷ ಕಾನ್ರಾಡ್ ಸಂಗ್ಮಾ ಅವರು ತಕ್ಷಣವೇ ಬೆಂಬಲ ಹಿಂಪಡೆಯುವುದಾಗಿ ಹೇಳಿದ್ದಾರೆ. ಹಾಗಿದ್ರೆ ಲೇಟರ್‌ನಲ್ಲಿ ಏನಿದೆ ನೋಡೋಣ.

ನಡ್ಡಾಗೆ NPP ಪತ್ರ

‘ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ನೇತೃತ್ವದ ಮಣಿಪುರ ಸರ್ಕಾರವು ಜಾತಿ ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ರಾಜ್ಯದಲ್ಲಿ ಸಹಜ ಸ್ಥಿತಿಗೆ ಮರಳಲು ವಿಫಲವಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, NPP ತಕ್ಷಣವೇ ಜಾರಿಗೆ ಬರುವಂತೆ ಬಿರೇನ್ ಸಿಂಗ್ ಅವರ ಸರ್ಕಾರಕ್ಕೆ ನಮ್ಮ ಬೆಂಬಲವನ್ನು ಹಿಂಪಡೆಯಲು ನಿರ್ಧರಿಸಿದ್ದೇವೆ’  ಈಗ ಎನ್‌ಪಿಪಿ ಬೆಂಬಲ ಹಿಂತೆಗೆದುಕೊಂಡಿದ್ದು ಮಣಿಪುರ ರಾಜ್ಯದ ರಾಜಕೀಯ ಮತ್ತು ಪ್ರಸ್ತುತ ಸರ್ಕಾರದ ಮೇಲೆ ಯಾವ ಪರಿಣಾಮ ಬೀರುತ್ತದೆ ಅನ್ನೋದನ್ನ ನೋಡುವುದಾದರೆ..

ಮಣಿಪುರ ಬಿಜೆಪಿಗೆ ಸಂಕಷ್ಟ

ಮಣಿಪುರ ವಿಧಾನಸಭೆಯಲ್ಲಿ ಒಟ್ಟು 60 ಶಾಸಕರಿದ್ದಾರೆ. ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು 31 ಶಾಸಕರ ಅಗತ್ಯವಿದೆ. 2022ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 32 ಸ್ಥಾನಗಳನ್ನು ಗೆದ್ದಿತ್ತು. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ಸ್ವಂತ ಬಲದಿಂದ ಸರ್ಕಾರ ರಚಿಸುವ ಸಾಮರ್ಥ್ಯ ಇತ್ತು ಮತ್ತು ಇದೆ. ಕಾನ್ರಾಡ್ ಸಂಗ್ಮಾ ಅವರ ಪಕ್ಷ ಬಿಜೆಪಿಗೆ ಬೆಂಬಲ ಘೋಷಿಸಿತ್ತು. ಎನ್‌ಪಿಪಿಯಿಂದ ಏಳು ಶಾಸಕರು ಆಯ್ಕೆಯಾಗಿದ್ದಾರೆ. ಈ ರೀತಿಯಾಗಿ, ಎನ್‌ಪಿಪಿಯ ಬೆಂಬಲವನ್ನು ಹಿಂತೆಗೆದುಕೊಳ್ಳುವುದರಿಂದ ಮಣಿಪುರದ ಬಿಜೆಪಿ ಸರ್ಕಾರಕ್ಕೆ ಯಾವುದೇ ತೊಂದರೆ ಇರುವುದಿಲ್ಲ.  ಈಗ ವಿರೋಧ ಪಕ್ಷಗಳಿಗೂ ಮಣಿಪುರ ಧಂಗೆಯ ಅಸ್ತ್ರ ಸಿಕ್ಕಿದ್ದು, ಬಿಜೆಪಿ ಮೇಲೆ ವಾಗ್ದಾಳಿ ನಡೆಸುತ್ತಿದ್ದಾರೆ.  ಇನ್ನು ಮಹಾರಾಷ್ಟ್ರದ ಎಲ್ಲಾ ಱಲಿ ರದ್ದು ಮಾಡಿರೋ ಅಮಿತ್ ಶಾ , ಮಣಿಪುರದ ಪರಿಸ್ಥಿತಿ ಭದ್ರತಾ ವ್ಯವಸ್ಥೆ ಕುರಿತು ಸಭೆ ನಡೆಸುತ್ತಿದ್ದಾರೆ.

Shwetha M