ಆಂಧ್ರದಲ್ಲಿ ಕೋಳಿಗಳಿಗೆ ವೈರಸ್!! 40 ಲಕ್ಷ ಕೋಳಿ ಸಾ*ವು!?
ಮೊಟ್ಟೆ ತಿಂದ್ರೂ ಆಪತ್ತು!?
![ಆಂಧ್ರದಲ್ಲಿ ಕೋಳಿಗಳಿಗೆ ವೈರಸ್!! 40 ಲಕ್ಷ ಕೋಳಿ ಸಾ*ವು!?ಮೊಟ್ಟೆ ತಿಂದ್ರೂ ಆಪತ್ತು!?](https://suddiyaana.com/wp-content/uploads/2025/02/images-5.jpg)
ಆಂಧ್ರ ಪ್ರದೇಶದಲ್ಲಿ ಜನ ಕೋಳಿ ತಿನ್ನೋಕೆ ಜನ ಭಯ ಪಡುತ್ತಿದ್ದಾರೆ. ಹಕ್ಕಿ ಜ್ವರ ಆಂಧ್ರ ಮತ್ತು ತೆಲಂಗಾಣವನ್ನ ಕಾಡುತ್ತಿದ್ದು, ಕುಕ್ಕಟೋದ್ಯಮ ಕಂಗಲಾಗಿ ಹೋಗಿದೆ. ಲಕ್ಷಾಂತರ ಕೋಳಿಗಳನ್ನ ಹೂತು ಹಾಕಿದ್ರೆ, ಮೊಟ್ಟೆಗಳನ್ನ ನಾಶ ಮಡಲಾಗುತ್ತಿದೆ. ಪೀಡತ ಗ್ರಾಮಗಳಲ್ಲಿ ಹೈ ಅಲರ್ಟ್ ಘೋಷಣೆ ಮಾಡಿದ್ದು, ಅಧಿಕಾರಿಗಳು ದಿಟ್ಟ ಕ್ರಮಗಳನ್ನ ಕೈಗೊಳ್ಳುತ್ತಿದ್ದಾರೆ.
ಆಂಧ್ರ ಪ್ರದೇಶದಲ್ಲಿ ಏವಿಯನ್ ಇನ್‌ಫ್ಲುಯೆಂಜಾ ವೈರಸ್ ಹರಡುತ್ತಿದ್ದು, ಅದರ ನಿಯಂತ್ರಣಕ್ಕೆ ಅಗತ್ಯ ಕ್ರಮಗಳನ್ನ ಕೈಗೊಳ್ಳಲಾಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ವೈರಸ್ನಿಂದ 40 ಲಕ್ಷ ಕೋಳಿಗಳು ಸತ್ತಿವೆ ಎಂದು ಹೇಳಲಾಗುತ್ತಿದೆ. ಆದ್ರೆ ಇದನ್ನ ಗಮನಿಸಿರುವ ಸಚಿವರು ಅನಗತ್ಯ ವದಂತಿ ಹರಡದಂತೆ ಎಚ್ಚರಿಕೆ ನೀಡಿದ್ದಾರೆ. ರಾಜ್ಯಾದ್ಯಂತ ಒಟ್ಟು 10.7 ಕೋಟಿ ಕೋಳಿಗಳ ಪೈಕಿ ಇತ್ತೀಚಿನ ದಿನಗಳಲ್ಲಿ 5.4 ಲಕ್ಷ ಕೋಳಿಗಳು ಮಾತ್ರ ಸಾವನ್ನಪ್ಪಿವೆ ಎಂದು ಆಂಧ್ರಪ್ರದೇಶ ಪಶುಸಂಗೋಪನಾ ಸಚಿವ ಕೆ.ಅಚ್ಚಂನಾಯ್ಡು ಹೇಳಿದ್ದಾರೆ.
ರಾಜ್ಯ ಸರ್ಕಾರ ತಕ್ಷಣವೇ ಎಚ್ಚೆತ್ತುಕೊಂಡಿದ್ದು, ರೋಗ ಭಾದಿತವಾಗಿರುವ 14,000 ಉಳಿದ ಕೋಳಿಗಳನ್ನು ಮತ್ತು 340 ಮೊಟ್ಟೆಗಳನ್ನು ವೈರಸ್ ಕಂಡುಬಂದಿರುವ ನಾಲ್ಕು ಪೀಡಿತ ಕೋಳಿ ಫಾರಂಗಳಲ್ಲಿ ಅವುಗಳನ್ನು ಹೂಳಲು ಅಧಿಕೃತ ಯಂತ್ರವನ್ನು ಸಜ್ಜುಗೊಳಿಸಿದೆ ಎಂದು ಅಚ್ಚಂನಾಯ್ಡು ತಿಳಿಸಿದ್ದಾರೆ.
40 ಲಕ್ಷ ಕೋಳಿಗಳ ವಿಲೇವಾರಿ ಅಸಾಧ್ಯ!
40 ಲಕ್ಷ ಕೋಳಿಗಳು ಈ ವೈರಸ್ನಿಂದ ಸತ್ತಿದ್ದರೆ ಅವುಗಳನ್ನು ವಿಲೇವಾರಿ ಮಾಡಬೇಕಾಗುತ್ತದೆ. 40 ಲಕ್ಷ ಕೋಳಿಗಳನ್ನು ಹೂಳಲು ದೊಡ್ಡ ಹೊಂಡಗಳನ್ನೇ ತೋಡಬೇಕು. ಇದು ಬಹಳ ಕಷ್ಟಕರವಾಗಿದ್ದು, ಇದಕ್ಕೆ ಭಾರೀ ಯಂತ್ರೋಪಕರಣಗಳು, ಸಾಕಷ್ಟು ಭೂಮಿ ಬೇಕಾಗುತ್ತದೆ. ಮತ್ತು ಈ ಕೆಲಸಕ್ಕೆ ಬಹಳ ಮಂದಿ ಬೇಕು. ಅಷ್ಟು ಮೊತ್ತದಲ್ಲಿ ಕೋಳಿಗಳು ಸತ್ತಿದ್ದು ಅವುಗಳನ್ನು ವಿಲೇವಾರಿ ಅಥವಾ ಹೂಳಿದ್ದರೆ ಮಾಡಿರುವ ಕಾರ್ಯಾಚರಣೆಯನ್ನು ಮರೆಮಾಡುವುದು ಅಸಾಧ್ಯ. ಮುಖ್ಯವಾಗಿ ಇದನ್ನು ಯಾರಾದರೂ ಗಮನಿಸಿರಬೇಕು. ಏನಿಲ್ಲದಿದ್ದರೂ ಕೊನೆಗೆ ಫೋಟೋವಾದರೂ ತೆಗೆದಿದ್ದರಬೇಕು” ಎಂದು ಸಚಿವರು, ಇಷ್ಟು ದೊಡ್ಡ ಮಟ್ಟದ ಸಾಮೂಹಿಕ ವಿಲೇವಾರಿ ಆಗಿದ್ದರೂ ಯಾವುದೇ ಫೋಟೋಗಳು, ವಿಡಿಯೋಗಳು ಲಭ್ಯವಿಲ್ಲದ ಕಾರಣ, 40 ಲಕ್ಷ ಕೋಳಿಗಳ ಸಾವಿನ ಸುದ್ದಿ ಪ್ರಶ್ನಾರ್ಹವಾಗಿದೆ ಎಂಬ ರೀತಿಯಲ್ಲಿ ಹೇಳಿದ್ದಾರೆ.
ಇನ್ನು ಪಶ್ಚಿಮ ಗೋದಾವರಿ ಜಿಲ್ಲೆಯ ವೇಲ್ಪುರು ಮತ್ತು ಪೂರ್ವ ಗೋದಾವರಿ ಜಿಲ್ಲೆಯ ಕಾನೂರು ಅಗ್ರಹಾರದಲ್ಲಿ ಮೊದಲು ವೈರಸ್ ಪತ್ತೆಯಾಗಿದ್ದು, ಪೀಡಿತ ಪ್ರದೇಶಗಳಲ್ಲಿನ ಎರಡು ಕೋಳಿ ಫಾರಂಗಳಲ್ಲಿನ ಕೋಳಿಗಳನ್ನು ಕೊಲ್ಲಲು ಸೂಚಿಸಲಾಗಿದ್ದು, ಪಶುಸಂಗೋಪನಾ ಅಧಿಕಾರಿಗಳು ಆ ನಿಮಿತ್ತ ಕೆಲಸ ಆರಂಭಿಸಿದ್ದಾರೆ.
ಏಲೂರು ಜಿಲ್ಲೆಯ ಬದಂಪುಡಿ ಗ್ರಾಮದಲ್ಲಿ 2.2 ಲಕ್ಷ ಕೋಳಿಗಳು, ಪಶ್ಚಿಮ ಗೋದಾವರಿ ಜಿಲ್ಲೆಯ ವೇಲ್‌ಪುರು 2.5 ಲಕ್ಷ ಕೋಳಿಗಳು, ಪೂರ್ವ ಗೋದಾವರಿ ಜಿಲ್ಲೆಯ ಕಾನೂರು ಅಗ್ರಹಾರಂನಲ್ಲಿ 65,000 ಮತ್ತು ಎನ್‌ಟಿಆರ್ ಜಿಲ್ಲೆಯ ಗಂಪಲಗುಡೆಮ್‌ನಲ್ಲಿ 7,000 ಕೋಳಿಗಳು ಸಾವನ್ನಪ್ಪಿವೆ. ವೈರಸ್ ಪೀಡಿತ ಕೋಳಿಗಳನ್ನು ರೆಡ್ ಜೋನ್ಗೆ ತರಲಾಗಿದೆ ಮತ್ತು 10ಕಿ.ಮೀ. ವ್ಯಾಪ್ತಿಯಲ್ಲಿರುವ ಕೋಳಿ ಅಂಗಡಿಗಳನ್ನು ಮುಚ್ಚಲಾಗಿದೆ.
ಮೊಟ್ಟೆ, ಕೋಳಿ ಮಾಂಸ ಸೇವಿಸೋಕೆ ಜನರಿಗೆ ಭಯ
ಈ ವೈರಸ್ನಿಂದ ಜನರು ಮೊಟ್ಟೆ ಹಾಗೂ ಕೋಳಿ ಮಾಂಸವನ್ನು ಸೇವಿಸುವುದನ್ನು ನಿಲ್ಲಿಸಿದ್ದಾರೆ ಎಂಬ ವರದಿಗಳು ಇದ್ದು, ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಸಚಿವರು ಭರವಸೆ ನೀಡಿದ್ದಾರೆ. ಮತ್ತು ಈಗೀಗ ರೋಗದ ಪ್ರಭಾವ ಕ್ಷೀಣಿಸುತ್ತಿದೆ ಎಂದಿದ್ದಾರೆ.
ಬೇಯಿಸಿದ ಮೊಟ್ಟೆ, ಮಾಂಸ ಸುರಕ್ಷಿತ
ಮುಖ್ಯವಾಗಿ ಏರುತ್ತಿರುವ ತಾಪಮಾನವು ಹಕ್ಕಿ ಜ್ವರವನ್ನು ಕಡಿಮೆ ಮಾಡುತ್ತದೆ. ಈ ವೈಸರ್ ಕೇವಲ 70 ಡಿಗ್ರಿ ಸೆಲ್ಸಿಯಸ್ ವರೆಗೆ ಮಾತ್ರ ಬದುಕಬಲ್ಲದು. ಅಂದರೆ ಮೊಟ್ಟೆಯನ್ನು ಕುದಿಸಲಾಗುತ್ತದೆ ಮತ್ತು ಕೋಳಿ ಮಾಂಸವನ್ನು 70 ಡಿಗ್ರಿ ಸೆಲ್ಸಿಯಸ್ಗಿಂತ ಹೆಚ್ಚಿನ ತಾಪಮಾನದಲ್ಲಿ ಬೇಯಿಸಲಾಗುತ್ತದೆ. ಆದ್ದರಿಂದ, ಬೇಯಿಸಿದ ಮೊಟ್ಟೆಗಳು ಅಥವಾ ಕೋಳಿ ಮಾಂಸವನ್ನು ತಿನ್ನುವ ಮೂಲಕ ಹಕ್ಕಿ ಜ್ವರ ಹರಡುವ ಅಪಾಯ ಕಡಿಮೆ, ಮತ್ತು ಏರುತ್ತಿರುವ ತಾಪಮಾನವು ವೈರಸ್ನ ಬದುಕುಳಿಯುವಿಕೆಯನ್ನು ಮತ್ತಷ್ಟು ಕಡಿಮೆ ಮಾಡುತ್ತದೆ ಎಂದು ಭರವಸೆ ನೀಡಿದ್ದಾರೆ. ಈ ವೈರಸ್ಗೆ ಪ್ರಮುಖವಾಗಿ ಕೋಳಿ ಸಾಕಣೆದಾರರ ಅನೈರ್ಮಲ್ಯತೆಯಿಂದ ಹಕ್ಕಿಜ್ವರ ಏಕಾಏಕಿ ಉಂಟಾಗಿದೆ ಎಂದು ತಮ್ಮ ಹೇಳಿಕೆಯಲ್ಲಿ ಸಚಿವ ಅಚ್ಚಂನಾಯ್ಡು ಹೇಳಿದ್ದಾರೆ.
ಪಶುಸಂಗೋಪನಾ ಇಲಾಖೆ ನಿರ್ದೇಶಕ ದಾಮೋದರ್ ನಾಯ್ಡು “ರೋಗ ನಿಯಂತ್ರಣಕ್ಕೆ ಕ್ಷಿಪ್ರ ಪ್ರತಿಕ್ರಿಯೆ ತಂಡಗಳು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ರಾಜ್ಯದಾದ್ಯಂತ 721 ಆರ್‌ಆರ್‌ಟಿಗಳು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿವೆ. ಪಶುಸಂಗೋಪನಾ ಇಲಾಖೆಯು ಜಾಗರೂಕವಾಗಿದೆ, ಅಗತ್ಯವಿರುವ ಎಲ್ಲ ಕ್ರಮಗಳನ್ನು ಜಾರಿಗೊಳಿಸುತ್ತಿದೆ. ವೈರಲ್ ರೋಗ ಪೀಡಿತ ಪ್ರದೇಶಗಳ ಸುತ್ತಲಿನ 1 ಕಿಮೀ ವ್ಯಾಪ್ತಿಯನ್ನು ಎಚ್ಚರಿಕೆಯ ವಲಯವೆಂದು ಘೋಷಿಸಲಾಗಿದೆ ಎಂದು ಅಧಿಕೃತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ನಲ್ಲಿ ಹಕ್ಕಿ ಜ್ವರದಿಂದ ಆಂಧ್ರದಲ್ಲಿ ಭಯ ಶುರುವಾಗಿದ್ದು, ಜನ ಕೋಳಿ, ಮೊಟ್ಟೆ ತಿನ್ನೋಕೆ ಶುರುಮಾಡಿದೆ.