ಇನ್ಸ್​ಟಾಗ್ರಾಂನಿಂದಲೂ ಬಾಲಿವುಡ್ ನಟರಿಗೆ ಕೋಟಿ ಕೋಟಿ ಹಣ – ಒಂದು ಪೋಸ್ಟ್ ಹಾಕಲು ಎಷ್ಟು ಕೋಟಿ ಗೊತ್ತಾ? 

ಇನ್ಸ್​ಟಾಗ್ರಾಂನಿಂದಲೂ ಬಾಲಿವುಡ್ ನಟರಿಗೆ ಕೋಟಿ ಕೋಟಿ ಹಣ – ಒಂದು ಪೋಸ್ಟ್ ಹಾಕಲು ಎಷ್ಟು ಕೋಟಿ ಗೊತ್ತಾ? 

ಬಾಲಿವುಡ್ ನಟ, ನಟಿಯರು ಮುಟ್ಟಿದ್ದೆಲ್ಲವೂ ಚಿನ್ನವೇ. ನಟನೆಯಿಂದ ಹಿಡಿದು ಅವರು ತೊಡುವ ಉಡುಗೆ ತೊಡುಗೆಗೂ ಕೈತುಂಬಾ ಹಣ ಪಡೆಯುತ್ತಾರೆ. ಅದರಲ್ಲೂ ಅವರು ಬಳಸುವ ಸೋಶಿಯಲ್ ಮೀಡಿಯಾ ಖಾತೆಗಳಿಂದಲೂ ಕೋಟಿ ಕೋಟಿ ದುಡ್ಡು ಹರಿದು ಬರುತ್ತದೆ. ಬಿಗ್ ಬಿ ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಖ್ಯಾತ ನಟರು ಇನ್ಸ್ ಸ್ಟಾಗ್ರಾಂಗಳಲ್ಲಿ ಒಂದು ಪ್ರಾಯೋಜಿತ ಪೋಸ್ಟ್ ಹಾಕಲು ಪಡೆಯುವ ಸಂಭಾವನೆಯೇ ಅಚ್ಚರಿ ಮೂಡಿಸುತ್ತಿದೆ.

ಇದನ್ನೂ ಓದಿ : ನಟ ಜಗ್ಗೇಶ್ ಕಾಲಿಗೆ ಏಟು – ಪಾದದ ಮೂಳೆ ಮುರಿತದಿಂದ 6 ವಾರಗಳ ವಿಶ್ರಾಂತಿಗೆ ವೈದ್ಯರ ಸಲಹೆ

ಅಮಿತಾಬ್ ಬಚ್ಚನ್, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಬಾಲಿವುಡ್ನ ಅನೇಕ ನಟರು ಇನ್ಸ್ಟಾಗ್ರಾಮ್ ಮೂಲಕ ಕೋಟಿ ಕೋಟಿ ಹಣ ಸಂಪಾದಿಸುತ್ತಿದ್ದಾರೆ. ಕೆಲವೇ ನಿಮಿಷಗಳಲ್ಲಿ ಅವರ ಜೇಬಿಗೆ ಕೋಟ್ಯಂತರ ರೂಪಾಯಿ ಬಂದು ಬೀಳುತ್ತೆ. ಅದರಲ್ಲೂ ಭಾರತೀಯರ ನಟರಲ್ಲಿ ಬಾಲಿವುಡ್ ಕಿಂಗ್ ಶಾರುಖ್ ಖಾನ್ ಅತಿ ಹೆಚ್ಚು ಸಂಭಾವನೆ ಪಡೆಯುವ ನಟರಾಗಿದ್ದಾರೆ. ಸಿನಿಮಾಗಳು ಹಾಗೂ ಬ್ರಾಂಡ್ ಪ್ರಮೋಷನ್ ಗೆ ಭಾರೀ ಸಂಭಾವನೆಯನ್ನೇ ಪಡೆಯುತ್ತಾರೆ. ಸೋಶಿಯಲ್ ಮೀಡಿಯಾ ಗಳಿಕೆಯಲ್ಲೂ ಇವ್ರೇ ನಂಬರ್ ಒನ್ ಆಗಿದ್ದಾರೆ.ಒಂದು ಸಿನಿಮಾಗೆ 100ಕ್ಕೂ ಹೆಚ್ಚು ಸಂಭಾವನೆ ಪಡೆಯುವ ಶಾರುಖ್, ಸೋಶಿಯಲ್ ಮೀಡಿಯಾ ಹಾಗೂ ಬ್ರ್ಯಾಂಡ್ ಎಂಡಾರ್ಸ್‌ಮೆಂಟ್‌ಗಳಿಂದ ಭಾರಿ ಹಣವನ್ನೇ ಪಡೆಯುತ್ತಾರೆ. ಸೋಶಿಯಲ್ ಮೀಡಿಯಾದಲ್ಲಿ ಒಂದು ಪ್ರಾಯೋಜಿತ ಪೋಸ್ಟ್​ಗೆ ಶಾರುಖ್ 1 ಕೋಟಿ ರೂ ಪಡೆಯುತ್ತಾರೆ ಎನ್ನಲಾಗಿದೆ.

ಇನ್ನು ಸಲ್ಮಾನ್ ಖಾನ್ ಕೂಡ ಬ್ರ್ಯಾಂಡ್ ಮೌಲ್ಯವನ್ನು ಹೊಂದಿದ್ದಾರೆ. ಸಲ್ಮಾನ್ ಅನೇಕ ಅಂತಾರಾಷ್ಟ್ರೀಯ ಬ್ರ್ಯಾಂಡ್​ಗಳ ಜಾಹೀರಾತುಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಬ್ರ್ಯಾಂಡ್ ಪೋಸ್ಟ್ ಶೇರ್ ಮಾಡಲು ಸಲ್ಮಾನ್ ಖಾನ್ 50 ಲಕ್ಷ ರೂಪಾಯಿ ಪಡೆದುಕೊಳ್ಳುತ್ತಾರಂತೆ.

ಬಿಗ್ ಬಿ ಅಮಿತಾಬ್ ಬಚ್ಚನ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದಾರೆ. Instagram ನಲ್ಲಿ 34 ದಶಲಕ್ಷಕ್ಕೂ ಹೆಚ್ಚು ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ಅಮಿತಾಬ್ ಬಚ್ಚನ್ ಹೆಚ್ಚಾಗಿ ಯಾವುದೇ ಪೋಸ್ಟ್ ಮಾಡುವುದಿಲ್ಲ. ಪ್ರಾಯೋಜಿತ ಪೋಸ್ಟ್ ಅನ್ನು ಶೇರ್ ಮಾಡಲು ಬಿಗ್ ಬಿ 50 ಲಕ್ಷಕ್ಕೂ ಹೆಚ್ಚು ಹಣ ಪಡೆಯುತ್ತಾರಂತೆ. ಅಮಿತಾಬ್ ಅವರಿಗೆ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ.

ಬಾಲಿವುಡ್​ನ ದುಬಾರಿ ನಟರಲ್ಲಿ ಅಕ್ಷಯ್ ಕುಮಾರ್ ಕೂಡ ಒಬ್ಬರಾಗಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ನಟರ ಪಟ್ಟಿಯಲ್ಲೂ ಇದ್ದಾರೆ. ಅಕ್ಷಯ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ 6 ಕೋಟಿಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಅಕ್ಷಯ್ ಕುಮಾರ್ ಬ್ರಾಂಡ್ ಎಂಡಾರ್ಸ್​ಮೆಂಟ್​ಗೆ 1 ಕೋಟಿ ರೂ ಪಡೆಯುತ್ತಾರಂತೆ.

ಹಾಗೇ ಬಾಲಿವುಡ್​ನ ಯಂಗ್ ಹೀರೋ ರಣವೀರ್ ಸಿಂಗ್ ತಮ್ಮ ಹ್ಯಾಂಡ್ಸಮ್ ಲುಕ್​ನಿಂದಲೇ ಅಪಾರ ಅಭಿಮಾನಿಗಳ ಮನಸೆಳೆದಿದ್ದಾರೆ. ರಣವೀರ್ ಬ್ರ್ಯಾಂಡ್ ಮೌಲ್ಯವೂ ಅದ್ಭುತವಾಗಿದೆ. ಸಿನಿಮಾಗಳ ಜೊತೆಗೆ ಅನೇಕ ಜಾಹೀರಾತಿನಲ್ಲೂ ಕಾಣಿಸಿಕೊಳ್ತಾರೆ. ಸೋಶಿಯಲ್ ಮೀಡಿಯಾದಲ್ಲೂ ಸಖತ್ ಆ್ಯಕ್ಟಿವ್ ಆಗಿರುವ ರಣವೀರ್, ಪ್ರಾಯೋಜಿತ ಪೋಸ್ಟ್ ಶೇರ್ ಮಾಡಲು 1 ಕೋಟಿ ರೂ ಹಣ ಪಡೆಯತ್ತಾರಂತೆ. ಬಾಲಿವುಡ್ ನಟರು ಸಿನಿಮಾಗಳಿಂದ ಮಾತ್ರವಲ್ಲ ಇನ್ಸ್ಟಾಗ್ರಾಮ್ ಸೇರಿದಂತೆ ಸೋಶಿಯಲ್ ಮೀಡಿಯಾ ಮೂಲಕವೂ ಭಾರೀ ಹಣ ಗಳಿಸುತ್ತಿದ್ದಾರೆ.

suddiyaana