ಒಳಚರಂಡಿಗೆ ಇಳಿದ ಜಗತ್ತಿನ 5ನೇ ಅತಿದೊಡ್ಡ ಶ್ರೀಮಂತ – 18ನೇ ಶತಮಾನವನ್ನ ನೆನಪಿಸಿಕೊಂಡ ಬಿಲ್ ಗೇಟ್ಸ್

ಒಳಚರಂಡಿಗೆ ಇಳಿದ ಜಗತ್ತಿನ 5ನೇ ಅತಿದೊಡ್ಡ ಶ್ರೀಮಂತ – 18ನೇ ಶತಮಾನವನ್ನ ನೆನಪಿಸಿಕೊಂಡ ಬಿಲ್ ಗೇಟ್ಸ್

ಬಿಲ್ ಗೇಟ್ಸ್. ಜಗತ್ತಿನ ಅತೀ ಶ್ರೀಮಂತರ ಪೈಕಿ ಬಿಲ್ ಗೇಟ್ಸ್ ಕೂಡ ಒಬ್ಬರು. ಬಿಲಿಯನೇರ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿರುವ ಬಿಲ್ ಗೇಟ್ಸ್, $119.3B ನಿವ್ವಳ ಮೌಲ್ಯವನ್ನ ಹೊಂದಿದ್ದಾರೆ. ಮೈಕ್ರೋಸಾಫ್ಟ್​ ಸಂಪತ್ತಿನ ಗಮನಾರ್ಹ ಭಾಗವನ್ನು ಪಡೆಯುತ್ತಾರೆ. 1975 ರಲ್ಲಿ ಪಾಲ್ ಅಲೆನ್ ಅವರೊಂದಿಗೆ ಮೈಕ್ರೋಸಾಫ್ಟ್ ಅನ್ನು ಸಹ-ಸ್ಥಾಪಿಸಿದರು ಮತ್ತು ಮಾರ್ಚ್ 2020 ರ ಹೊತ್ತಿಗೆ ಸಾಫ್ಟ್‌ವೇರ್ ಕಂಪನಿಯ 1% ಪಾಲನ್ನು ಮಾತ್ರ ಹೊಂದಿದ್ದಾರೆ. ಬಿಲ್ ಗೇಟ್ಸ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಕೃಷಿಭೂಮಿಯ ಅತಿದೊಡ್ಡ ಮಾಲೀಕರಾಗಿದ್ದಾರೆ. ಮತ್ತು ಕೆನಡಿಯನ್ ನ್ಯಾಷನಲ್ ರೈಲ್ವೇ ಮತ್ತು ಆಟೋನೇಷನ್‌ನಂತಹ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದಾರೆ.  ಇಂತಹ ಬಿಲ್ ಗೇಟ್ಸ್ ಒಳಚರಂಡಿಗೆ ಇಳಿದಿದ್ದು ಜಗತ್ತಿನ ಅಚ್ಚರಿಗೆ ಕಾರಣವಾಗಿದೆ.

ಇದನ್ನೂ ಓದಿ : “ಪೆನ್ ಡ್ರೈವ್ ಬ್ರದರ್” ಹೆಸರಿನಲ್ಲಿ ಸಿನಿಮಾ ಪೋಸ್ಟರ್‌.. ರಾಧಾ, ಮಾರ, ಬ್ಲೂ ಬಾಯ್ಸ್ ಚಿತ್ರಮಂದಿರ – ಕುಮಾರಸ್ವಾಮಿ ವಿರುದ್ಧ ಲೇವಡಿ ಮಾಡಿದ್ಯಾರು?

ನವೆಂಬರ್ 19 ರಂದು ವಿಶ್ವ ಶೌಚಾಲಯ ದಿನವನ್ನು ಆಚರಿಸಲಾಗುತ್ತದೆ. ಈ ಹಿನ್ನೆಲೆ ಅಮೆರಿಕನ್ ಬಿಲಿಯನೇರ್ ಮತ್ತು ಮೈಕ್ರೋಸಾಫ್ಟ್​ ಸಹ-ಸಂಸ್ಥಾಪಕ ಬಿಲ್​ ಗೇಟ್ಸ್​​ ಬ್ರಸೆಲ್ಸ್‌ನ ಒಳಚರಂಡಿ ತ್ಯಾಜ್ಯ ನೀರಿನ ಸಂಸ್ಕರಣೆಯ ಕುರಿತು ಮಾಹಿತಿಯನ್ನು ಕಲೆ ಹಾಕಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಪ್ರತಿವರ್ಷ ನವೆಂಬರ್ 19ರಂದು ವಿಶ್ವ ಶೌಚಾಲಯ ದಿನ ಆಚರಿಸಲಾಗುತ್ತದೆ. ‘ಈ ವರ್ಷ ವಿಶ್ವ ಶೌಚಾಲಯ ದಿನದ ಪ್ರಯುಕ್ತ ಒಳಚರಂಡಿಗೆ ಇಳಿದು ಒಳಚರಂಡಿ ವ್ಯವಸ್ಥೆಯ ಗುಪ್ತ ಇತಿಹಾಸವನ್ನು ಪರಿಶೋಧಿಸಲು ಪ್ರಯತ್ನಿಸಿದೆ. ಜಾಗತಿಕ ಆರೋಗ್ಯದಲ್ಲಿ ತ್ಯಾಜ್ಯನೀರಿನ ನಿರ್ವಹಣೆಯ ಪಾತ್ರವನ್ನು ಅನ್ವೇಷಿಸಿದೆ’ ಎಂದು ಬಿಲ್ ಗೇಟ್ಸ್ ಬರೆದುಕೊಂಡಿದ್ದಾರೆ.

 

View this post on Instagram

 

A post shared by Bill Gates (@thisisbillgates)

18ನೇ ಶತಮಾನದಲ್ಲಿ ಚರಂಡಿ ನೀರನ್ನು ನೇರವಾಗಿ ಸೆನ್ನೆ ನದಿಗೆ ಹರಿಸಲಾಗಿತ್ತು. ಅದು ಭಯಾನಕ ಕಾಲರಾ ಸಾಂಕ್ರಾಮಿಕ ರೋಗಗಳಿಗೆ ಕಾರಣವಾಯಿತು. ಇಂದು, 200 ಮೈಲಿಗಳ ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳ ಜಾಲವು ನಗರದ ತ್ಯಾಜ್ಯವನ್ನು ಸಂಸ್ಕರಿಸುತ್ತದೆ. ಒಳಚರಂಡಿ ಮತ್ತು ಸಂಸ್ಕರಣಾ ಘಟಕಗಳು ನಗರದ ತ್ಯಾಜ್ಯ ನೀರನ್ನು ಸಂಸ್ಕರಿಸುತ್ತಿವೆ ಎಂದು ಹೇಳಿದ್ದಾರೆ.

Shantha Kumari