ಜಗತ್ತಿಗೆ ಕೊರೊನಾ ವೈರಸ್ ಹರಡಲು ಬಿಲ್ ಗೇಟ್ಸ್ ಕಾರಣನಾ!? – ಶ್ರೀಮಂತನ ಸುತ್ತ ಏನಿದು ವಿವಾದ..?

ಜಗತ್ತಿಗೆ ಕೊರೊನಾ ವೈರಸ್ ಹರಡಲು ಬಿಲ್ ಗೇಟ್ಸ್ ಕಾರಣನಾ!? – ಶ್ರೀಮಂತನ ಸುತ್ತ ಏನಿದು ವಿವಾದ..?

ಜಗತ್ತಿನಲ್ಲಿ ಮೊದಲ ಬಾರಿಗೆ ಕೊವಿಡ್ ಪ್ರಕರಣ ಕಂಡುಬಂದಾಗ, ಕೊರೊನಾ ವೈರಸ್ ಹುಟ್ಟಲು ಕಾರಣವೇನು ಎಂಬುದರ ಕುರಿತು ಹಲವಾರು ಸಿದ್ಧಾಂತಗಳು ಹುಟ್ಟಿಕೊಂಡಿದ್ದು ಎಲ್ಲರಿಗೂ ಗೊತ್ತಿರುವ ವಿಚಾರ. ಇದರಲ್ಲಿ ಕೆಲವೊಂದು ತರ್ಕ ಬದ್ಧವಾಗಿ ಕಂಡು ಬಂದಿದ್ರೆ ಇನ್ನೂ ಕೆಲವೊಂದು ಹಾಗೇ ಹರಡುವ ವಿಚಿತ್ರ ಸಿದ್ಧಾಂತಗಳಾಗಿಯೂ ಕಂಡುಬಂದಿದ್ದವು. ಆದರೆ ಇಂತಹ ವಿಚಿತ್ರ ಸಿದ್ಧಾಂತಗಳು ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನ ಕೂಡಾ ಬಿಟ್ಟಿಲ್ಲ ಅಂತ ಹೇಳಿದ್ರೆ ನಂಬುತ್ತೀರಾ!?

ಇದನ್ನೂ ಓದಿ : ದಂಡ ಪಾವತಿಗೆ 50% ಡಿಸ್ಕೌಂಟ್ – ನಾಲ್ಕು ದಿನದಲ್ಲಿ ವಸೂಲಾಗಿದ್ದು ಎಷ್ಟು ಕೋಟಿ?

ಹೌದು. ಬಿಬಿಸಿ ಜೊತೆ ನಡೆದ ಸಂದರ್ಶನದಲ್ಲಿ ಬಿಲ್ ಗೇಟ್ಸ್ ಈ ಕುರಿತಾಗಿ ತಮ್ಮ ಮೌನವನ್ನ ಮುರಿದಿದ್ದಾರೆ. ಕೊರೊನಾ ವೈರಸ್ ಹರಡಲು ಬಿಲ್ ಗೇಟ್ಸ್ ಕಾರಣವೆಂದು ವಿಚಿತ್ರ ಸಿದ್ಧಾಂತ ಹರಡುತ್ತಿದ್ದಾಗ ಸ್ವತಃ ತನ್ನ ಬಗ್ಗೆ ಕೇಳಿ ಬಂದ ಆಪಾದನೆಯ ಬಗ್ಗೆ ಬಿಲ್ ಗೇಟ್ಸ್ ಆಶ್ಚರ್ಯ ಚಕಿತರಾಗಿದ್ದರಂತೆ. ಜನರು ಜಗತ್ತಿನಲ್ಲಿ ನಡೆಯುವ ಎಲ್ಲಾ ತಪ್ಪುಗಳಿಗೆ ದೂಷಿಸಬಹುದಾದ ಬೂಗೀಮ್ಯಾನ್‌ ಗಾಗಿ ಹುಡುಕಾಡುತ್ತಾರೆ. ಜೀವ ಶಾಸ್ತ್ರಕ್ಕಿಂತ ದುರುದ್ದೇಶವನ್ನ ಅರ್ಥಮಾಡಿಕೊಳ್ಳುವುದು ಸುಲಭ ಎಂದೂ ಬಿಲ್ ಗೇಟ್ಸ್ ಸಂದರ್ಶನದಲ್ಲಿ ಹೇಳುತ್ತಾರೆ.

ಅಷ್ಟಕ್ಕೂ ಜನ  ಹೀಗೂ ಒಂದು ಆಪಾದನೆ ಮಾಡಲು ಕಾರಣವೇನು ಅಂತ ನೋಡಿದ್ರೆ, 2015 ರಲ್ಲಿ ಬಿಲ್ ಗೇಟ್ಸ್ TEDx ಸಮ್ಮೇಳನದಲ್ಲಿ 10 ಮಿಲಿಯನ್ ಜನರನ್ನ ಕಾಡುವ ವೈರಸ್ ಕುರಿತು ಎಚ್ಚರಿಕೆ ನೀಡಿದ್ದರು. ಮುಂದಿನ ದಶಕದಲ್ಲಿ ಏನಾದರೂ 10 ಮಿಲಿಯನ್ ಜನ ಸತ್ತರೆ ಅದು ಯುದ್ಧಕ್ಕಿಂತಲೂ ದೊಡ್ಡದಾದ ಸಾಂಕ್ರಾಮಿಕ ವೈರಸ್ ನಿಂದ ಆಗಿರಬಹುದು ಎಂದು ಹೇಳಿದ್ದರು. ಆದರೆ ದುರಾದೃಷ್ಟವೆಂಬಂತೆ ಮುಂದೆ ಕೊರೊನಾ ವೈರಸ್ ಜನರನ್ನ ಇನ್ನಿಲ್ಲದಂತೆ ಕಾಡಿದಾಗ ಇಂತಹ ಸಿದ್ಧಾಂತಗಳನ್ನ ಹರಡಿಸುವ ಒಂದಷ್ಟು ವರ್ಗದ ಜನ ಕೊರೊನಾ ವೈರಸ್ ಜಗತ್ತನ್ನ ನಿರ್ಜನಗೊಳಿಸುವ ಬಿಲ್ ಗೇಟ್ಸ್ ಅವರ ಯೋಜನೆಯಾಗಿದೆ ಮತ್ತು ವ್ಯಾಕ್ಸಿನೇಷನ್ ಜನರನ್ನ ವೈರಸ್ ನಿಂದ ಮುಕ್ತಗೊಳಿಸುವ ತಂತ್ರವಾಗಿದೆ ಎಂಬ ವಿಚಿತ್ರ ಆಪಾದನೆಗೆ ಗುರಿಪಡಿಸಿದ್ದರು.

suddiyaana