67ನೇ ವಯಸ್ಸಿನಲ್ಲಿ ಬಿಲ್ ಗೇಟ್ಸ್ ಡೇಟಿಂಗ್ – ಪೌಲಾ ಹರ್ಡ್ ಜೊತೆ ಪ್ರೀತಿಯಲ್ಲಿ ಬಿದ್ದ ಬಿಲೇನಿಯರ್

67ನೇ ವಯಸ್ಸಿನಲ್ಲಿ ಬಿಲ್ ಗೇಟ್ಸ್ ಡೇಟಿಂಗ್ – ಪೌಲಾ ಹರ್ಡ್ ಜೊತೆ ಪ್ರೀತಿಯಲ್ಲಿ ಬಿದ್ದ ಬಿಲೇನಿಯರ್

67ನೇ ಇಳಿ ವಯಸ್ಸಿನಲ್ಲಿ ಜಗತ್ತಿನ ಶ್ರೀಮಂತ ಉದ್ಯಮಿ ಬಿಲ್‌ಗೇಟ್ಸ್ ಹೃದಯದಲ್ಲಿ ಮತ್ತೆ ಪ್ರೀತಿ ಅರಳಿದೆ. ಬಿಲೇನಿಯರ್ ಈಗ ಲವರ್ ಬಾಯ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವ್ಯಾಲಂಟೇನ್ ಡೇ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಬಿಲ್ ಗೇಟ್ಸ್ ತಮ್ಮ ಪ್ರಿಯ ಸಂಗಾತಿ ಪೌಲಾ ಹರ್ಡ್ ಜೊತೆ ಡೇಟಿಂಗ್ ನಡೆಸುತ್ತಿರುವ ಸುದ್ದಿ ವಿಶೇಷತೆ ಪಡೆದುಕೊಂಡಿದೆ.  ಮೈಕ್ರೋಸಾಫ್ಟ್ ನ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ ತಮ್ಮ ಪತ್ನಿ ಮೆಲಿಂಡಾ ಗೇಟ್ಸ್ ಅವರಿಗೆ 2021ರಲ್ಲಿ ವಿಚ್ಛೇದನ ನೀಡಿದ್ದರು. 27 ವರ್ಷದ ದಾಂಪತ್ಯಕ್ಕೆ ಫುಲ್ ಸ್ಟಾಪ್ ಹಾಕಿದ್ದರು. ಶ್ರೀಮಂತ ದಂಪತಿಯ ಡೈವೋರ್ಸ್ ವಿಚಾರ ದೊಡ್ಡಮಟ್ಟಿಗೆ ಸುದ್ದಿಯಾಗಿತ್ತು. ಇದಾದ ಕೆಲವೇ ಸಮಯದಲ್ಲಿ ಬಿಲ್ ಗೇಟ್ಸ್ ಪ್ರೀತಿಯಲ್ಲಿ ಬಿದ್ದಿದ್ದಾರೆ. 67ನೇ ವರ್ಷ ಬಿಲ್ ಗೇಟ್ಸ್, 60 ವರ್ಷದ ಪೌಲಾ ಹರ್ಡ್ ಜೊತೆ ಡೇಟಿಂಗ್‌ನಲ್ಲಿದ್ದಾರೆ.

ಇದನ್ನೂ ಓದಿ:  ಡೆಲಿವರಿ ರೋಬೋಟ್​ಗಳಿಗೂ ದಾರಿ ಬಿಡಿ – ಸ್ಪೆಷಲ್ ಗೆಸ್ಟ್ ಗಳಿಗಾಗಿ ಹೊಸ ಟ್ರಾಫಿಕ್ಸ್ ರೂಲ್ಸ್ ರೆಡಿ..!   

2019ರಲ್ಲಿ ನಿಧನರಾದ ಒರಾಕಲ್‌ ಸಿಇಒ ಮಾರ್ಕ್‌ ಹರ್ಡ್‌ ಅವರ ಪತ್ನಿ ಪೌಲಾ ಹರ್ಡ್‌ ಅವರೊಂದಿಗೆ ಬಿಲ್‌ ಗೇಟ್ಸ್‌ ಡೇಟಿಂಗ್‌ ನಡೆಸುತ್ತಿದ್ದಾರೆ ಎಂದು ಇಂಗ್ಲೆಂಡ್‌ ಹಾಗೂ ಅಮೆರಿಕದ ಪತ್ರಿಕೆಗಳು ವರದಿ ಪ್ರಕಟಿಸಿವೆ. ಈ ನಡುವೆ ಇಂಗ್ಲೆಂಡ್‌ನ ಪತ್ರಿಕೆಯೊಂದಕ್ಕೆ ಇವರಿಬ್ಬರ ಆಪ್ತರೊಬ್ಬರು ಪ್ರತಿಕ್ರಿಯೆ ನೀಡಿದ್ದೂ, ಇಬ್ಬರೂ ಬೇರ್ಪಡಿಸಲಾಗದ ಸಂಬಂಧದಲ್ಲಿದ್ದಾರೆ ಎಂದಿದ್ದಾರೆ. ಕಳೆದ ತಿಂಗಳು ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯನ್‌ ಓಪನ್ ಟೆನಿಸ್‌ ಟೂರ್ನಿಯ ವೇಳೆ ಗ್ಯಾಲರಿಯಲ್ಲಿ ಇವರಿಬ್ಬರೂ ಜೊತೆಯಾಗಿ ಕಾಣಿಸಿಕೊಂಡಿದ್ದರು. ಇಬ್ಬರೂ ಕೂಡ ಟೆನಿಸ್‌ನ ಅಪಾರ ಅಭಿಮಾನಿಗಳಾಗಿದ್ದು ಜೊತೆಯಲ್ಲಿಯೇ ಪಂದ್ಯವೊಂದನ್ನು ವೀಕ್ಷಿಸುವ ಫೋಟೋ ಫುಲ್ ವೈರಲ್ ಆಗಿದೆ.

ಇನ್ನು ಹರ್ಡ್ ಮತ್ತು ಗೇಟ್ಸ್ ಕಳೆದ ತಿಂಗಳು ಸಿಡ್ನಿಗೆ ತೆರಳಿದಾಗ ಅಲ್ಲಿನ ಪ್ರಧಾನಿ ಆಂಥೋನಿ ಅಲ್ಬನೀಸ್ ಅವರನ್ನು ಭೇಟಿಯಾಗಿದ್ದರು. ಆ ಬಳಿಕ ಸಿಡ್ನಿ ನಗರದ ಪ್ರಸಿದ್ಧ ಒಪೇರಾ ಹೌಸ್‌ನ ಹೊರಗೆ ಗೇಟ್ಸ್ ಮತ್ತು ಹರ್ಡ್ ಫೋಟೋ ಕೂಡ ತೆಗೆಸಿಕೊಂಡಿದ್ದರು. ಆದರೆ, ಆ ಸಮಯದಲ್ಲಿ ಪೌಲಾ ಹರ್ಡ್‌ ಬಗ್ಗೆ ಯಾವುದೇ ವಿಶೇಷವಾದ ಮಾಹಿತಿಗಳಿರಲಿಲ್ಲ. ಅಂದು ವರದಿ ಮಾಡಿದ್ದ ಪತ್ರಿಕೆಗಳು ಬಿಲ್‌ ಗೇಟ್ಸ್‌ ಅವರೊಂದಿಗೆ ನಿಗೂಢ ಮಹಿಳೆಯೊಬ್ಬರು ಪೋಸ್‌ ನೀಡಿದ್ದಾರೆ ಎಂದು ವರದಿ ಮಾಡಿತ್ತು. ಇವರನ್ನು ಮಿಸ್ಟ್ರಿ ವುಮೆನ್‌ ಎಂದೇ ಕರೆದಿದ್ದವು. ಆದರೆ, ಆಕೆ ಮಿಸ್ಟ್ರಿ ವುಮೆನ್‌ ಅಲ್ಲ. ಕಳೆದೊಂದು ವರ್ಷದಿಂದ ಬಿಲ್ ಗೇಟ್ಸ್ ಜೊತೆ ರೊಮ್ಯಾಂಟಿಕ್ ಸಂಬಂಧದಲ್ಲಿದ್ದಾರೆ ಎಂದು ಆಪ್ತರೊಬ್ಬರು ತಿಳಿಸಿದ್ದಾರೆ.

suddiyaana