ಶಾಸಕ ಬೈರತಿ ಬಸವರಾಜ್‌ಗೆ ಆರೋಗ್ಯ ಸಮಸ್ಯೆ! – ಅರೆಸ್ಟ್‌ ಆಗ್ತಿದ್ದಂತೆ ಏನಾಯ್ತು?

ಶಾಸಕ ಬೈರತಿ ಬಸವರಾಜ್‌ಗೆ ಆರೋಗ್ಯ ಸಮಸ್ಯೆ! – ಅರೆಸ್ಟ್‌ ಆಗ್ತಿದ್ದಂತೆ ಏನಾಯ್ತು?

ರೌಡಿಶೀಟರ್ ಬಿಕ್ಲು ಶಿವ ಕೊಲೆ ಕೇಸ್‌ನಲ್ಲಿ ಶಾಸಕ ಬೈರತಿ ಸುರೇಶ್‌ ಅರೆಸ್ಟ್‌ ಆಗಿದ್ದಾರೆ. ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆ ಬಳಿಕ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ಹಾಜರುಪಡಿಸಿದರು. ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಇದೀಗ ಶಾಸಕರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನೂ ಓದಿ: PAK ಸಂಹಾರಕ್ಕಾಗಿ ಲಂಕೆಗೆ ಭಾರತ – ಕುತಂತ್ರಿಗಳ ಸವಾಲ್ ಗೆಲ್ತಾರಾ ಸೂರ್ಯ?

ಶಾಸಕ ಬೈರತಿ ಬಸವರಾಜ್‌ ಆರೋಗ್ಯ ತಪಾಸಣೆ ವೇಳೆ ಇಸಿಜಿಯಲ್ಲಿ ವ್ಯತ್ಯಾಸ ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಐಸಿಯು ವಾರ್ಡ್‌ನ ಎ ಬ್ಲಾಕ್‌ನಲ್ಲಿ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಇದೀಗ ಜಯದೇವ ಆಸ್ಪತ್ರೆಯಲ್ಲಿ ಆಂಜಿಯೋಗ್ರಾಂ ನಡೆಸಲು ವೈದ್ಯರು ಸೂಚಿಸಿದ್ದಾರೆ. ಇದರ ಜೊತೆ ಕೆಲ ವೈದ್ಯಕೀಯ ಪರೀಕ್ಷೆಗಳನ್ನು ಸಹ ವೈದ್ಯರು ನಡೆಸಲಿದ್ದಾರೆ.

ಆಸ್ಪತ್ರೆಯಲ್ಲಿರೋ ಬಸವರಾಜ್ ಅವರ ಕೊಠಡಿ ಬಳಿ ಯಾರಿಗೂ ಪ್ರವೇಶವಿಲ್ಲ. ಸಿಐಡಿಯ ಓರ್ವ ಇನ್ಸ್‌ಪೆಕ್ಟರ್ ನೇತೃತ್ವದಲ್ಲಿ ಒಂದು ಟೀಂ ನಿಗಾವಹಿಸಿದೆ. ಅಲ್ಲದೇ ಸ್ಥಳೀಯ ತಿಲಕ್ ನಗರ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಈಗಾಗಲೇ ಬ್ಲಡ್ ಸ್ಯಾಂಪಲ್ ಪಡೆಯಲಾಗಿದೆ. ಆಂಜಿಯೋಗ್ರಾಂ ವರದಿ ಬಂದ ಬಳಿಕ ನ್ಯಾಯಧೀಶರ ಮುಂದೆ ಹಾಜರುಪಡಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

Shwetha M

Leave a Reply

Your email address will not be published. Required fields are marked *