ಹೆಲ್ಮೆಟ್ ಬದಲು ಬಾಣಲೆ ಧರಿಸಿ ಬೈಕ್​ ರೈಡ್! – ಬೈಕ್‌ ಸವಾರನ ಐಡಿಯಾ ಕಂಡು ಪೊಲೀಸರೇ ಶಾಕ್!

ಹೆಲ್ಮೆಟ್ ಬದಲು ಬಾಣಲೆ ಧರಿಸಿ ಬೈಕ್​ ರೈಡ್! – ಬೈಕ್‌ ಸವಾರನ ಐಡಿಯಾ ಕಂಡು ಪೊಲೀಸರೇ ಶಾಕ್!

ವಾಹನ ಸವಾರರ ಸುರಕ್ಷತೆಗಾಗಿ ಟ್ರಾಫಿಕ್‌ ಪೊಲೀಸ್‌ ಖಡಕ್‌ ರೂಲ್ಸ್‌ ತಂದ್ರೂ ಅದನ್ನ ಪಾಲಿಸುವವರ ಸಂಖ್ಯೆ ಕಡಿಮೆಯೇ. ನಮ್ದೇ ರೋಡ್‌, ನಮ್ದೇ ರೂಲ್ಸ್‌ ಅಂತ ಅನ್ನುವವರೇ ಹೆಚ್ಚು. ಇದೀಗ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಬೈಕ್‌ ಸವಾರನೊಬ್ಬ ಬೆಂಗಳೂರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್‌ ಬದಲು ಫ್ರೈಯಿಂಗ್‌ ಪ್ಯಾನ್ ಧರಿಸಿಕೊಂಡು ಸಂಚರಿಸಿದ್ದಾನೆ. ಇದ್ರ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಇದಮ್ಮೂ ಓದಿ:‌ ನಂದಿನಿ ಗ್ರಾಹಕರಿಗೆ ಶಾಕ್ ಕೊಟ್ಟ ಕೆಎಂಎಫ್‌! ನಂದಿನಿ ತುಪ್ಪದ ಬೆಲೆ 90 ರೂ. ಏರಿಕೆ!

ಬೆಂಗಳೂರಿನ ರೂಪೇನಾ ಅಗ್ರಹಾರ ಬಳಿ ಇತ್ತೀಚೆಗೆ ಈ ಘಟನೆ ನಡೆದಿದೆ. ಟ್ರಾಫಿಕ್‌ ಚಲನ್‌ ತಪ್ಪಿಸಿಕೊಳ್ಳಲು ಒಬ್ಬ ಸವಾರ ಹೆಲ್ಮೆಟ್‌ ಬದಲಿಗೆ ಬಾಣಲೆ ಬಳಸಿದ ಘಟನೆ ನಡೆದಿದೆ. ಟ್ರಾಫಿಕ್‌ ಪೊಲೀಸರು ದಂಡ ಹಾಕಲು ಬಂದಾಗ ಬಾಣಲೆಯನ್ನು ಹಾಕಿಕೊಂಡು ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ದೃಶ್ಯವನ್ನು ಕಂಡು ರಸ್ತೆಯಲ್ಲಿದ್ದ ಅಕ್ಕಪಕ್ಕದ ವಾಹನ ಸವಾರರು ವಿಡಿಯೋ ಮಾಡಿ ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೋ ನೋಡಿ ಪೊಲೀಸರೂ ಕೂಡ  ದಂಗಾಗಿದ್ದಾರೆ. ಆದರೆ, ವಾಹನ ಸವಾರ ಮಾತ್ರ ಬಾಣಲೆಯನ್ನು ಹೆಲ್ಮೆಟ್‌ ತರಹವೇ ಧೈರ್ಯವಾಗಿ ಇಟ್ಟುಕೊಂಡು ಸಾಗಿದ್ದಾನೆ.

ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಕರ್ನಾಟಕ ಪೋರ್ಟ್‌ ಪೊಲೀಯೋ ಟ್ವೀಟರ್‌ ಪೇಜ್‌, ಎಲ್ಲ ಸವಾರರಿಗೂ ಒಂದು ಮನವಿ. ಟ್ರಾಫಿಕ್‌ ನಿಯಮಗಳನ್ನು ಪಾಲಿಸಿ. ‘ಜೂಗಾಡ್‌’ ಅಂದರೆ, ಏನೋ ಒಂದು ಮಾಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಬೇಡಿ. ಯಾವಾಗಲೂ ಹೆಲ್ಮೆಟ್‌ ಧರಿಸಿ. ಏಕೆಂದರೆ, ಬೆಂಗಳೂರಿನ ಟ್ರಾಫಿಕ್‌ ಎಷ್ಟು ಕಠಿಣವೋ, ರಸ್ತೆಗೆ ಬಿದ್ದಾಗ ನಿಮ್ಮ ತಲೆಗೂ ಅಷ್ಟೇ ಕಠಿಣವಾದ ಪೆಟ್ಟಾಗುತ್ತದೆ. ಬುದ್ಧಿವಂತಿಕೆಯಿಂದಿರಿ, ಸುರಕ್ಷಿತವಾಗಿರಿ. ನಿಮ್ಮ ಬಾಣಲೆಯನ್ನು ಅಡುಗೆಮನೆಯಲ್ಲೇ ಇಡಿ, ತಲೆಯ ಮೇಲೆ ಅಲ್ಲ ಎಂದು ಬರೆದುಕೊಂಡಿದೆ.

Shwetha M