ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಆ್ಯಸಿಡ್ ಅಟ್ಯಾಕ್!

ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಆ್ಯಸಿಡ್ ಅಟ್ಯಾಕ್!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಾಡಹಗಲೇ ಬಾಲಕಿ ಮೇಲೆ ಆ್ಯಸಿಡ್ ದಾಳಿ ನಡೆದಿದೆ. ದೆಹಲಿಯ ದ್ವಾರಕ ಏರಿಯಾದಲ್ಲಿ ದ್ವಿತೀಯ ಪಿಯುಸಿ ಓದುತ್ತಿದ್ದ 17 ವರ್ಷದ ಬಾಲಕಿ ಮೇಲೆ ಬೈಕ್​ನಲ್ಲಿ ಬಂದ ಇಬ್ಬರು ಯುವಕರು ಆ್ಯಸಿಡ್ ಅಟ್ಯಾಕ್ ಮಾಡಿದ್ದಾರೆ. ಸಹೋದರಿ ಜೊತೆ ರಸ್ತೆ ಬದಿ ನಿಂತಿದ್ದ ವೇಳೆ ಬೈಕ್​​ನಲ್ಲಿ ಬಂದ ಯುವಕರು ಬಾಲಕಿ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾರೆ. ಬಾಲಕಿಯ ಎರಡೂ ಕಣ್ಣಿನೊಳಕ್ಕೆ ಆ್ಯಸಿಡ್ ಬಿದ್ದಿದೆ. ಇದೀಗ ಆಕೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಪ್ರಕರಣ ಸಂಬಂಧ ಪೊಲೀಸರು ಒಬ್ಬನನ್ನ ವಶಕ್ಕೆ ಪಡೆದು ವಿಚಾರಣೆ ನಡೆಸ್ತಿದ್ದಾರೆ. ಆದ್ರೆ, ದಾಳಿ ನಡೆಸಿದ ಆರೋಪಿಗಳು ಇನ್ನೂ ಕೂಡ ಪತ್ತೆಯಾಗಿಲ್ಲ. ಹೀಗಾಗಿ ಆ್ಯಸಿಡ್ ದಾಳಿಗೆ ಕಾರಣ ಏನು ಅನ್ನೋದು ತನಿಖೆಯಿಂದಷ್ಟೇ ಹೊರಬರಬೇಕಿದೆ.

suddiyaana