24 ಲಕ್ಷದ ಬೈಕಿನ ಸ್ಪೀಡ್‌ ತೋರಿಸುತ್ತೇನೆ ಅಂತಾ ಬಂದ –  ವ್ಹೀಲಿಂಗ್‌ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ!

24 ಲಕ್ಷದ ಬೈಕಿನ ಸ್ಪೀಡ್‌ ತೋರಿಸುತ್ತೇನೆ ಅಂತಾ ಬಂದ –  ವ್ಹೀಲಿಂಗ್‌ ಮಾಡಲು ಹೋಗಿ ಪ್ರಾಣವನ್ನೇ ಕಳೆದುಕೊಂಡ!

ಈಗಿನ ಕಾಲದ ಯುವಕರೇ ಹಾಗೇ, ಕೈಗೆ ವಾಹನ ಸಿಕ್ಕಿದ್ರೆ ಸಾಕು. ಸಿಕ್ಕಿದ್ದೆ ಚಾನ್ಸ್‌ ಅಂತಾ ಶೋಕಿ ಮಾಡುತ್ತಾ ಊರುರೂ ಸುತ್ತುತ್ತಾರೆ. ಸೋಶಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಹಾಕಲು ಬೈಕ್‌ ಸ್ಟಂಟ್ಸ್‌ ಮಾಡಿ, ತಮ್ಮ ಜೀವನಕ್ಕೆ ಅಪಾಯ ತಂದುಕೊಳ್ಳುತ್ತಿದ್ದಾರೆ. ಇಲ್ಲೊಬ್ಬ 24 ಲಕ್ಷದ ಬೈಕ್‌ನ ಸ್ಪೀಡ್‌ ತೋರಿಸಲು ಹೋಗಿ ಪ್ರಾಣವನ್ನೇ ಕಳೆದುಕೊಂಡಿದ್ದಾನೆ.

ಹೌದು, ಈ ಘಟನೆ ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. 24 ಲಕ್ಷ ರೂ. ಮೌಲ್ಯದ ಬೈಕ್‌ ಕಾರಿಗೆ ಡಿಕ್ಕಿ ಹೊಡೆದ  ಪರಿಣಾಮ ಬೈಕ್‌ ಸವಾರ ಸಾವನ್ನದ್ದಾನೆ. ಜಯನಗರದ ಅಶೋಕ ಪಿಲ್ಲರ್ ಬಳಿ ಬುಧವಾರ ತಡರಾತ್ರಿ ಈ ಭೀಕರ ಅಪಘಾತ  ನಡೆದಿದೆ.

ಇದನ್ನೂ ಓದಿ: ರೀಲ್ಸ್‌ ಮಾಡುವಾಗ ರೈಲಿಗೆ ಸಿಲುಕಿ ಮೂವರು ಯುವಕರು ಸಾವು – ನದಿಗೆ ಹಾರಿ ಇಬ್ಬರು ಬಚಾವ್!

ಬೈಕ್ ಸವಾರರು ದುಬಾರಿ ಬೆಲೆಯ ಬಿಎಂಡಬ್ಲ್ಯೂ ಆರ್‌ಆರ್ 1000 ಸಿಸಿ (BMW RR 1000CC Bike) ಚಲಾಯಿಸುತ್ತಿದ್ದರು. ವ್ಹೀಲಿಂಗ್‌ ಮಾಡುತ್ತಾ ಅತಿ ವೇಗವಾಗಿ ಬಂದು ಸ್ವಿಫ್ಟ್ ಕಾರಿಗೆ ಡಿಕ್ಕಿ ಹೊಡೆದಿದ್ದರು. ಡಿಕ್ಕಿಯ ಪರಿಣಾಮ ಬೈಕ್ ಚಲಾಯಿಸುತ್ತಿದ್ದ ಶೇಕ್ ನಾಸಿರ್ ಎಂಬ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಹಿಂಬದಿ ಸವಾರ ಸೈಯದ್ ಮುದಾಸಿರ್ ಸ್ಥಿತಿ ಗಂಭೀರವಾಗಿದೆ.

ಬೈಕ್‌ ಸವಾರರು ಹೆಲ್ಮೆಟ್‌ ಕೂಡ ಧರಿಸಿರಲಿಲ್ಲ. ಕುತ್ತಿಗೆಗೆ ತೀವ್ರ ಏಟು ಬಿದ್ದ ಕಾರಣ ಸ್ಥಳದಲ್ಲೇ ನಾಸಿರ್‌ ಸಾವಿಗೀಡಾಗಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಸವಾರನನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ವಿಲ್ಸನ್ ಗಾರ್ಡನ್ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ. ಕಾರಿನ ಮುಂಭಾಗ ಹಾನಿಗೀಡಾಗಿದ್ದು, ಗಾಜು ಒಡೆದಿದೆ. ಕಾರಿನಲ್ಲಿದ್ದವರಿಗೆ ಗಾಯವಾಗಿಲ್ಲ ಎಂದು ವರದಿಯಾಗಿದೆ.

Shwetha M