ಬಡತನ ಮೆಟ್ಟಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ರೈತ – 7 ಜನ ಹೆಣ್ಣು ಮಕ್ಕಳನ್ನ ದೇಶಸೇವೆಗೆ ಕಳಿಸಿ ಮಾದರಿ

ಬಡತನ ಮೆಟ್ಟಿ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದ ರೈತ – 7 ಜನ ಹೆಣ್ಣು ಮಕ್ಕಳನ್ನ ದೇಶಸೇವೆಗೆ ಕಳಿಸಿ ಮಾದರಿ

ಹೆಣ್ಣು ಮಕ್ಕಳು ಅಂದ್ರೆ ಅಸಡ್ಡೆ ತೋರುವ ಜನರ ನಡುವೆ ಈ ರೈತ ಮಾದರಿಯಾಗಿ ನಿಂತಿದ್ದಾರೆ. ಹೆಣ್ಣು ಮಕ್ಕಳು ಹುಟ್ಟಿದರೆ ಖರ್ಚು ಹೆಚ್ಚು ಅವರಿಗೆ ನಾವು ವರದಕ್ಷಿಣೆ ನೀಡಬೇಕು ಮದುವೆ ಮಾಡಿ ಕೊಡಬೇಕು ಎಂದು ಬಹುತೇಕರು ಹೆಣ್ಣು ಮಕ್ಕಳು ಹುಟ್ಟಿದಾಗ ಸಂಕಟ ಪಡುತ್ತಾರೆ. ಆದರೆ ಇವರು ತಮಗೆ ಹುಟ್ಟಿದ ಎಲ್ಲಾ ಹೆಣ್ಣು ಮಕ್ಕಳನ್ನ ದೇಶಸೇವೆಗೆ ಕಳಿಸುವ ಮೂಲಕ ಇತರರಿಗೆ ಸ್ಫೂರ್ತಿಯಾಗಿದ್ದಾರೆ.

ಬಿಹಾರದ ಶರನ್ ಜಿಲ್ಲೆಯ ರೈತ ರಾಜ್​ಕುಮಾರ್ ಸಿಂಗ್ ಎನ್ನುವವರಿಗೆ 7 ಜನ ಹೆಣ್ಣು ಮಕ್ಕಳಿದ್ದಾರೆ. ಬಡತನದ ಕುಟುಂಬವೇ. ಬೇರೆ ಯಾರಾದ್ರೂ ಆಗಿದ್ರೆ ಮಕ್ಕಳನ್ನ ಕೃಷಿ ಕೆಲ್ಸಕ್ಕೆ ಬಳಸಿಕೊಳ್ತಿದ್ರು. ಇಲ್ಲದಿದ್ರೆ ಮದುವೆ ಮಾಡಿ ಕಳಿಸಿಬಿಡ್ತಿದ್ರು. ಆದ್ರೆ ರಾಜ್​ಕುಮಾರ್ ತಮ್ಮ ಏಳೂ ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ದೇಶ ಸೇವೆಗೆ ಕಳಿಸಿದ್ದಾರೆ. ಏಳೂ ಜನ ಕೂಡ ಪೊಲೀಸ್ ಹಾಗೂ ರಕ್ಷಣಾ ಪಡೆಯಲ್ಲಿ ಕರ್ತವ್ಯ ಸಲ್ಲಿಸುತ್ತಿದ್ದಾರೆ. ಇದೀಗ ಎಲ್ಲರೂ ಸೇರಿ ತಮ್ಮ ತಂದೆ ತಾಯಿಗಾಗಿ ದೊಡ್ಡ ಮನೆ ಕಟ್ಟಿಕೊಟ್ಟಿದ್ದಾರೆ. ಒಂದು ಮಹಡಿಯಲ್ಲಿ ದಂಪತಿ ವಾಸವಿದ್ದು ಉಳಿದ ಮನೆಗಳನ್ನ ಬಾಡಿಗೆಗೆ ಕೊಟ್ಟಿದ್ದಾರೆ. ಬಾಡಿಗೆಯಿಂದ ಬರುವ ಹಣದಲ್ಲಿ ಜೀವನ ನಡೆಸುತ್ತಿದ್ದಾರೆ. ತಮ್ಮ 7 ಹೆಣ್ಣು ಮಕ್ಕಳ ಬಗ್ಗೆ ಹೆಮ್ಮೆ ವ್ಯಕ್ತಪಡಿಸುವ ಪೋಷಕರು ಈ ಜನ್ಮದಲ್ಲಿ ಮಾತ್ರವಲ್ಲ ಪ್ರತಿ ಜನ್ಮದಲ್ಲೂ ಇವರೇ ನನಗೆ ಮಕ್ಕಳಾಗಿ ಹುಟ್ಟಲಿ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಇದನ್ನೂ ಓದಿ : ನಿಮ್ಮ ಕಣ್ಣುಗಳು ತುಂಬಾ‌ ಡ್ರೈ ಆಗ್ತಿದ್ಯಾ? – ಯಾಕೆ ಹೀಗಾಗುತ್ತೆ ಗೊತ್ತಾ?

ಬಿಹಾರದ ಶರಣ್ ಜಿಲ್ಲೆಯ ರೈತ ರಾಜ್‌ಕುಮಾರ್ ಸಿಂಗ್ (ಕಮಲ್ ಸಿಂಗ್‌) ಹಾಗೂ ಶಾರದಾ ದೇವಿ ಸಿಂಗ್ ಅವರ ಮಕ್ಕಳಲ್ಲಿ ಮೊದಲನೇಯವರಾದ ರಾಣಿ ಸಿಂಗ್ ಅವರು ಬಿಹಾರ ಪೊಲೀಸ್ ಇಲಾಖೆಯಲ್ಲಿ (Bihar Police Department) ಕೆಲಸ ಮಾಡುತ್ತಿದ್ದಾರೆ. ನಂತರದವರು ರೇಣು ಸಿಂಗ್ ಇವರು, ಸಶಸ್ತ್ರ ಸೀಮಾ ಬಲದಲ್ಲಿ ಕೆಲಸ ಮಾಡುತ್ತಿದ್ದಾರೆ.  ಮೂರನೇ ಪುತ್ರಿ ಸೋನಿ ಸಿಂಗ್ (CRPF)ಸಿಆರ್‌ಪಿಎಫ್‌( ಕೇಂದ್ರ ಮೀಸಲು ಪೊಲೀಸ್ ಪಡೆ) ಯಲ್ಲಿ ಕೆಲಸ ಮಾಡುತ್ತಿದ್ದಾರೆ. 4ನೇ ಪುತ್ರಿ ಪ್ರೀತಿ ಸಿಂಗ್ ಅಪರಾಧ ದಳದಲ್ಲಿ ಕೆಲಸ ಮಾಡುತ್ತಿದ್ದಾರೆ. 5ನೇ ಪುತ್ರಿ ಪಿಂಕಿ ಸಿಂಗ್ ಅಬಕಾರಿ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. 6ನೇ ಪುತ್ರಿ ರಿಂಕಿ ಸಿಂಗ್ ಬಿಹಾರ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದಾರೆ. (ಪಿಂಕಿ ಹಾಗೂ ರಿಂಕಿ ಅವಳಿಗಳಾಗಿದ್ದಾರೆ) ಹಾಗೆಯೇ ಕೊನೆಯ ಪುತ್ರಿ ನಾನಿ ಸಿಂಗ್ ಸರ್ಕಾರಿ ರೈಲ್ವೆ ಪೊಲೀಸ್(GRP) ಆಗಿ ಕೆಲಸ ಮಾಡುತ್ತಿದ್ದಾರೆ.

ಈ ಸಹೋದರಿಯರ ಏಕೈಕ ತಮ್ಮ ರಾಜೀವ್ ಸಿಂಗ್ ಬಿಟೆಕ್ ಮುಗಿಸಿದ್ದು, ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಕೆಲವರು ಹೀಗೆ ಎಲ್ಲರಿಗೂ ಹೇಗೆ ಕೆಲಸ ಸಿಕ್ಕಿತ್ತು ಎಷ್ಟು ಹಣ ನೀವು ನೀಡಿದಿರಿ ಎಂದು ಕೇಳುತ್ತಾರೆ. ಆದರೆ ನಾವು ಒಬ್ಬರಿಗೂ ಕೆಲಸಕ್ಕಾಗಿ ಹಣ ನೀಡಿಲ್ಲ ಅವರು ಚೆನ್ನಾಗಿ ಓದಿದರು, ಕಷ್ಟಪಟ್ಟರು ಅವರಿಗೆ ಕೆಲಸ ಸಿಕ್ಕಿತು ಎನ್ನುತ್ತಾರೆ. ಈ 7 ಜನ ಹೆಣ್ಣು ಮಕ್ಕಳು ಪೋಷಕರಿಗಾಗಿ ಪಟ್ಟಣದಲ್ಲಿ ಜಾಗ ತೆಗೆದು 4 ಅಂತಸ್ಥಿನ ಮನೆಯೊಂದನ್ನು ಕಟ್ಟಿದ್ದು, ಇದರಲ್ಲಿ ಬರುವ ಬಾಡಿಗೆ ಹಣವನ್ನು ಡಿಪಾಸಿಟ್ ಮಾಡಿ ಇಳಿವಯಸ್ಸಿನಲ್ಲಿ ತಮ್ಮ ಪೋಷಕರಿಗೆ ಪೆನ್ಷನ್ ಬರುವಂತೆ ಮಾಡಿದ್ದಾರೆ ಈ ಹೆಣ್ಣು ಮಕ್ಕಳು. ಈ ಮನೆಗೆ ಸೆವೆನ್ ಸಿಸ್ಟರ್ ಪ್ಯಾಲೇಸ್ ಎಂದು ಹೆಸರಿಡಲಾಗಿದೆ.

 

Shantha Kumari