ಜೈಲು ಅಧಿಕಾರಿಗಳ ದಾಳಿ.. ತಪಾಸಣೆಗೆ ಹೆದರಿ ಮೊಬೈಲ್ ನುಂಗಿದ ಕೈದಿ – ಮುಂದೇನಾಯ್ತು ಗೊತ್ತಾ..!?

ಜೈಲು ಅಧಿಕಾರಿಗಳ ದಾಳಿ.. ತಪಾಸಣೆಗೆ ಹೆದರಿ ಮೊಬೈಲ್ ನುಂಗಿದ ಕೈದಿ – ಮುಂದೇನಾಯ್ತು ಗೊತ್ತಾ..!?

ಜೈಲಿನಲ್ಲಿರುವ ಅಪರಾಧಿಗಳು, ವಿಚಾರಣಾಧೀನ ಕೈದಿಗಳು ಪೊಲೀಸರನ್ನೂ ಯಾಮಾರಿಸಿ ಮೊಬೈಲ್ ಬಳಸೋದು ಈಗ ಸಾಮಾನ್ಯ ಎನ್ನುವಂತಾಗಿದೆ. ಇದೇ ರೀತಿ ಈ ಜಿಲ್ಲಾ ಕಾರಾಗೃಹದಲ್ಲೂ ಮೊಬೈಲ್ ಬಳಸುತ್ತಿರುವ ಆರೋಪ ಕೇಳಿ ಬಂದಿತ್ತು. ಹೀಗಾಗಿ ಪೊಲೀಸರು ದಿಢೀರ್ ರೇಡ್ ಮಾಡಿದ್ರು. ಆದ್ರೆ ಅಲ್ಲಾಗಿದ್ದೇ ಬೇರೆ.

ಇದನ್ನೂ ಓದಿ : ಪೋಷಕರಿಗೆ 150 ಕೋಟಿ ರೂಪಾಯಿ ಮನೆ ಉಡುಗೊರೆ ನೀಡಿದ ನಟ ಧನುಷ್

ಜೈಲು ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸುವಾಗ ಕೈದಿಯೊಬ್ಬ ಸಿಕ್ಕಿಬೀಳೋ ಭಯದಲ್ಲಿ ಮೊಬೈಲ್ ಫೋನ್ ನುಂಗಿದ್ದಾರೆ. ಬಿಹಾರದಲ್ಲಿ ಈ ಘಟನೆ ನಡೆದಿದ್ದು, ಖೈಶರ್ ಅಲಿ ಎಂಬಾತ ಶನಿವಾರ ತಪಾಸಣೆ ವೇಳೆ ಫೋನ್ ನುಂಗಿದ್ದಾನೆ. ಆದರೆ, ಭಾನುವಾರ ಅಲಿಗೆ ಹೊಟ್ಟೆ ನೋವು ಕಾಣಿಸಿಕೊಂಡ ನಂತರ ವಿಷಯ ಬೆಳಕಿಗೆ ಬಂದಿದೆ. ಜೈಲು ಅಧಿಕಾರಿಗಳಿಗೆ ಘಟನೆಯ ಬಗ್ಗೆ ಮಾಹಿತಿ ನೀಡಿದ್ದಾನೆ. ತಕ್ಷಣವೇ ಕೈದಿಯನ್ನ ಗೋಪಾಲ್ಗಂಜ್ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಕೈದಿಯ ಎಕ್ಸ್-ರೇ ತೆಗೆದಿದ್ದು, ಹೊಟ್ಟೆಯಲ್ಲಿ ಮೊಬೈಲ್​ಗಳ ಬಿಡಿ ಭಾಗಗಳು ಪತ್ತೆಯಾಗಿವೆ ಎಂದು ಜೈಲು ಅಧೀಕ್ಷಕ ಮನೋಜ್ ಕುಮಾರ್ ತಿಳಿಸಿದ್ದಾರೆ.

ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ವೈದ್ಯ ಸಲಾಮ್ ಸಿದ್ದಿಕಿ ಮಾತನಾಡಿ, ಹೊಟ್ಟೆ ನೋವಿನಿಂದ ಕೈದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆತನ ಹೊಟ್ಟೆಯ ಎಕ್ಸ್ ರೇ ತೆಗೆಯಲಾಗಿದೆ. ಅದರಲ್ಲಿ ಮೊಬೈಲ್​ನ ಭಾಗಗಳು ಕಾಣಿಸಿವೆ ಎಂದು ತಿಳಿಸಿದ್ದಾರೆ. ಆಸ್ಪತ್ರೆಯಿಂದ ವೈದ್ಯಕೀಯ ಮಂಡಳಿಯನ್ನು ರಚಿಸಲಾಗಿದೆ ಮತ್ತು ಹೆಚ್ಚಿನ ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲಿಯನ್ನ ಜನವರಿ 17, 2020 ರಂದು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ ಆಕ್ಟ್ (ಎನ್‌ಡಿಪಿಎಸ್ ಆಕ್ಟ್) ಅಡಿಯಲ್ಲಿ ಗೋಪಾಲ್‌ಗಂಜ್ ಪೊಲೀಸರು ಬಂಧಿಸಿದ್ದರು. ಕಳೆದ ಮೂರು ವರ್ಷಗಳಿಂದ ಜೈಲಿನಲ್ಲಿದ್ದಾನೆ

suddiyaana