ಅನ್ಯಕೋಮಿನ ಯುವಕನ ಕಗ್ಗೊಲೆ.. ಭುಗಿಲೆದ್ದ ಜ್ವಾಲೆ- ಫೇಸ್ ಬುಕ್, ವಾಟ್ಸ್ ಆ್ಯಪ್ ಸೇರಿ 23 ಆ್ಯಪ್ ಗಳಿಗೆ ನಿಷೇಧ!
ವಾಟ್ಸಾಪ್, ಫೇಸ್ ಬುಕ್, ಇನ್ಸ್ಟಾಗ್ರಾಂ, ಟ್ವಿಟ್ಟರ್.. ಇದೆಲ್ಲ ಇಲ್ಲ ಅಂದ್ರೂ ರೀಲ್ಸ್ ಆದ್ರೂ ನೋಡ್ಬೇಕು. ಬೆಳಗ್ಗೆ ಎದ್ದಾಗಿನಿಂದ ಹಿಡಿದು ರಾತ್ರಿ ಮಲಗಿದಾಗ ನಿದ್ದೆ ಬರೋವರೆಗೂ ಫೋನ್ ಕೈಯಲ್ಲೇ ಇರಬೇಕು. ಆದ್ರೆ ಈಗ ಬಿಹಾರ ಜಿಲ್ಲೆಯ ಸರನ್ ಜಿಲ್ಲೆಯ ಜನ್ರಿಗೆ ಅಲ್ಲಿನ ಸರ್ಕಾರ ಶಾಕ್ ಕೊಟ್ಟಿದೆ. ಫೇಸ್ ಬುಕ್, ಟ್ವಿಟ್ಟರ್, ವಾಟ್ಸಾಪ್ ಸೇರಿದಂತೆ 23 ಆ್ಯಪ್ ಗಳನ್ನ ಬ್ಯಾನ್ ಮಾಡಲಾಗಿದೆ. ಜಿಲ್ಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಫೆಬ್ರವರಿ 8ರ ರಾತ್ರಿ 11ಗಂಟೆವೆರಗೂ ಜನರಿಗೆ ಈ ಸೇವೆಗಳು ಲಭ್ಯ ಇರೋದಿಲ್ಲ.
ಇದನ್ನೂ ಓದಿ : ಮಕ್ಕಳಿಗೆ ಜನ್ಮ ನೀಡಲು ಮಹಿಳೆಯರೇ ಒಪ್ಪುತ್ತಿಲ್ಲ – ಇಳಿಕೆಯಾಗುತ್ತಲೇ ಇದೆ ಜನಸಂಖ್ಯೆ..!
ಸರನ್ ಜಿಲ್ಲೆಯಲ್ಲಿ ಕಿಡಿಗೇಡಿಗಳ ಗುಂಪೊಂದು ಮೂವರು ಯುವಕರನ್ನ ಹಿಗ್ಗಾಮುಗ್ಗಾ ಥಳಿಸಿತ್ತು. ಅದ್ರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ. ಥಳಿತದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದರಿಂದ ಕೆರಳಿದ ಕೆಲ ಗುಂಪುಗಳು ಮುಬಾರಕಪುರ ಗ್ರಾಮದ 30ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿದ್ದವು. ಬಳಿಕ ಸರನ್ ಜಿಲ್ಲೆಯಾದ್ಯಾಂತ ಹಿಂಸಾಚಾರ ಭುಗಿಲೆದ್ದಿತ್ತು. ಹೀಗಾಗಿ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಹಾಗೂ ಗಲಭೆ ತಡೆಗೆ 23 ಆ್ಯಪ್‌ಗಳನ್ನು ಬಿಹಾರ ಸರ್ಕಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಫೆಬ್ರವರಿ 8ರ ರಾತ್ರಿ 11 ಗಂಟೆ ವರೆಗೆ ಸಾಮಾಜಿಕ ಜಾಲತಾಣ ಸೇರಿದಂತೆ 23 ಆ್ಯಪ್‌ಗಳನ್ನು ನಿಷೇಧಿಸಲಾಗಿದೆ.
ಸರನ್ ಜಿಲ್ಲೆಯಲ್ಲಿ ಶಾಂತಿಸ್ಥಾಪನೆ ಹಾಗೂ ಪರಿಸ್ಥಿತಿ ನಿಯಂತ್ರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಹಾರ ಸರ್ಕಾರ ಹೇಳಿದೆ. ಇದರ ಜೊತೆಗೆ ಸರ್ಕಾರ ಯೂಟ್ಯೂಬ್‌ಗೆ ವಿಡಿಯೋ, ಫೋಟೋ ಅಪ್ಲೋಡ್ ಮಾಡುವುದನ್ನು ನಿಷೇಧಿಸಿದೆ. ಇಷ್ಟೇ ಅಲ್ಲ ವಿಚಾಟ್, QQ, Qಝೋನ್, ಟಂಬ್ಲರ್, ಗೂಗಲ್ ಪ್ಲಸ್, ಬೈಡು, ವೈಬರ್, ಲೈನ್, ಪಿನ್‌ರೆಸ್ಟ್, ಟೆಲಿಗ್ರಾಂ, ರೆಡ್ಡಿಟ್, ಸ್ನಾಪ್‌ಟಿಶ್, ವೈನ್, ಎಕ್ಸಂಗ, ಬೌನೆಟ್, ಫ್ಲಿಕರ್ ಹಾಗೂ ಇತರ ಕೆಲ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಿದೆ. ಇದರಲ್ಲಿ ಮಾಸ್ ಮೆಸೇಜ್ ಮಾಡುವ ಸಾಧ್ಯತೆ ಇರುವುದರಿಂದ ಈ ಸಾಮಾಜಿಕ ಜಾಲತಾಣಗಳನ್ನು ನಿಷೇಧಿಸಲಾಗಿದೆ.
ಯುವಕನ ಕೊಲೆ ಪ್ರಕರಣ ಸಂಬಂಧ ಮೂರು ಪ್ರತ್ಯೇಕ ಪ್ರಕರಣ ದಾಖಲಿಸಲಾಗಿದೆ. ಹಾಗೇ ಪ್ರಚೋದನೆ ಸೇರಿದಂತೆ ಘಟನೆಗೆ ಸಂಬಂಧಿಸಿದಂತೆ ಒಟ್ಟು 6 ಜನರನ್ನ ಬಂಧಿಸಲಾಗಿದೆ. ಸರನ್ ಜಿಲ್ಲೆಯಲ್ಲಿ ಕೋಮುಗಲಭೆ ತಾರಕಕ್ಕೇರಿದ್ದು, 144 ಸೆಕ್ಷನ್ ಜಾರಿಗೊಳಿಸಲಾಗಿದೆ. ಜಿಲ್ಲೆಯಾದ್ಯಂತ ಪೊಲೀಸ್ ಸರ್ಪಗಾವಲು ಹಾಕಿದ್ದು, ಗುಂಪು ಸೇರದಂತೆ ಹದ್ದಿನ ಕಣ್ಣಿಡಲಾಗಿದೆ