ಮಕ್ಕಳಾಗದ ಮಹಿಳೆಯರನ್ನು ಗರ್ಭಿಣಿ ಮಾಡಿದ್ರೆ 13 ಲಕ್ಷ ರೂ. ಬಹುಮಾನ! – ಸಂತಾನ ಭಾಗ್ಯ ಕೊಡಲು ಹೋದವರಿಗೆ ಕಾದಿತ್ತು ಬಿಗ್ ಶಾಕ್!
ಇತ್ತೀಚೆಗೆ ಜನರನ್ನು ಹೇಗೆಲ್ಲಾ ವಂಚನೆ ಮಾಡಲಾಗುತ್ತೆ ಅಂತಾ ಊಹಿಸೋದಿಕ್ಕೆ ಸಾಧ್ಯ ಇಲ್ಲ. ಎಷ್ಟು ಜಾಗರೂಕತೆಯಿಂದ ಇದ್ರೂ ಕೂಡ ಯಾಮಾರಿಹೋಗುತ್ತೇವೆ. ಬಿಹಾರದಲ್ಲೊಂದು ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ಮಕ್ಕಳಾಗದ ಮಹಿಳೆಯರನ್ನು ಗರ್ಭಧರಿಸುವಂತೆ ಮಾಡಿದ್ರೆ ಪುರುಷರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಕಿಡಿಗೇಡಿಗಳು ಆಫರ್ ವೊಂದನ್ನ ನೀಡಿದ್ದಾರೆ. ಇದೀಗ ಇಂತಹ ವಿಲಕ್ಷಣ ಆಫರ್ ನೀಡಿದ ಭೂಪರು ಅಂದರ್ ಆಗಿದ್ದಾರೆ. ಮಾಡಿದ ಕೆಟ್ಟ ಕೆಲಸಕ್ಕೆ ಜೈಲಿನಲ್ಲಿ ಕಂಬಿ ಎಣಿಸುವಂತೆ ಮಾಡಿದೆ.
ಇತ್ತೀಚೆಗೆ ಈ ಗ್ಯಾಂಗ್ ಬಿಹಾರ ರಾಜ್ಯದ ನವಾಡ ಜಿಲ್ಲೆಯಲ್ಲಿ ಆಲ್ ಇಂಡಿಯಾ ಪ್ರೆಗ್ನೆಂಟ್ ಜಾಬ್ ಏಜೆನ್ಸಿ ಅನ್ನೋ ಸಂಸ್ಥೆಯ ಹೆಸರಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಜಾಹೀರಾತು ನೀಡಿತ್ತು. ಮಕ್ಕಳಾಗದ ಮಹಿಳೆಯರನ್ನ ಗರ್ಭಧರಿಸುವಂತೆ ಮಾಡಿದ್ರೆ ಪುರುಷರಿಗೆ 13 ಲಕ್ಷ ರೂ. ಬಹುಮಾನ ನೀಡುವುದಾಗಿ ಈ ಗ್ಯಾಂಗ್ ಆಫರ್ ನೀಡಿತ್ತು. ಈ ಜಾಹಿರಾತನ್ನು ನೋಡಿದ ಪುರುಷರು ಜಾಹೀರಾತಿನ ಜೊತೆಗೆ ಇದ್ದ ವಾಟ್ಸಪ್ ನಂಬರ್ ಸಂಪರ್ಕಿಸಿದರು. ಮಕ್ಕಳಾಗದ ಸ್ತ್ರೀಯರಿಗೆ ಸಂತಾನ ಭಾಗ್ಯ ಕೊಡುವ ಸಾಮರ್ಥ್ಯ ನಮಗಿದೆ. ಅವಕಾಶ ಕೊಡಿ ಅಂತಾ ಹಕ್ಕೊತ್ತಾಯ ಮಾಡಿದ್ದರು. ಇಲ್ಲಿಂದಲೇ ಶುರುವಾಗಿತ್ತು ವಂಚಕರ ಅಸಲಿ ಆಟ.
ಇದನ್ನೂ ಓದಿ: ಪುತ್ರನಿಗಾಗಿ ಪ್ರತಾಪ್ ಸಿಂಹ ಮೇಲೆ ಸಿದ್ದು ಸೇಡು..! – ಲೋಕಸಭಾ ಚುನಾವಣೆ ಹೊತ್ತಲ್ಲೇ ಮೈಸೂರಲ್ಲಿ ಸಿದ್ದರಾಮಯ್ಯ ರಣತಂತ್ರ ಆರೋಪ..!
ಹೌದು, ಕೆಲ ಪುರುಷರು ಸ್ತ್ರೀಯರಿಗೆ ಸಂತಾನ ಭಾಗ್ಯ ಕೊಡುವ ಸಾಮರ್ಥ್ಯ ನಮಗಿದೆ. ಅವಕಾಶ ಕೊಡಿ ಅಂತಾ ಕೇಳಿದಾಗ ಅಸಲಿ ಆಟ ಶುರುಮಾಡಿದ್ದಾರೆ. ಮೊದಲಿಗೆ ನೋಂದಣಿ ಶುಲ್ಕದ ಹೆಸರಲ್ಲಿ ವಂಚಕರು 799 ರೂ. ಹಣವನ್ನು ಪಾವತಿ ಮಾಡುವಂತೆ ಹೇಳಿದ್ದರು. ಹಣ ನೀಡಿ ನೋಂದಣಿ ಆದ ಬಳಿಕ ಪುರುಷರಿಗೆ ಕೆಲವು ಮಹಿಳೆಯರ ಫೋಟೋಗಳನ್ನು ವಾಟ್ಸಪ್ ಮೂಲಕ ಕಳಿಸಿದ್ದರು. ಇಷ್ಟು ಮಹಿಳೆಯರ ಪೈಕಿ ಯಾರನ್ನಾದರೂ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಇಷ್ಟದ ಮಹಿಳೆಯ ಜೊತೆ ಸಂಗ ಬೆಳೆಸಬಹುದು. ಆಕೆಯನ್ನು ಗರ್ಭಿಣಿ ಮಾಡಿದರೆ ನಿಮಗೆ 13 ಲಕ್ಷ ರೂ. ಬಹುಮಾನ ಎಂದು ವಂಚಕರು ಆಮಿಷ ಒಡ್ಡಿದ್ದರು.
ಇಷ್ಟಕ್ಕೆ ಸುಮ್ಮನಾಗದ ವಂಚಕರು, ಪುರುಷರು ಆಯ್ಕೆ ಮಾಡಿಕೊಂಡ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುವ ಮುನ್ನ ಭದ್ರತಾ ಠೇವಣಿ ಹಣ ನೀಡಬೇಕು ಎಂದು ತಾಕೀತು ಮಾಡಿದ್ದರು. ಈ ಭದ್ರತಾ ಠೇವಣಿ ಹಣ ಮಹಿಳೆಯರ ಸೌಂದರ್ಯದ ಮೇಲೆ ನಿರ್ಧಾರ ಆಗುತ್ತದೆ. ಸುಮಾರು 5 ಸಾವಿರ ರೂ. ನಿಂದ 20 ಸಾವಿರ ರೂ.ವರೆಗೆ ಠೇವಣಿ ಹಣ ಕಟ್ಟಬೇಕು ಎಂದು ಹೇಳುತ್ತಿದ್ದರು. ತುಂಬಾ ಸುಂದರವಾದ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸಬೇಕಿದ್ದರೆ 20 ಸಾವಿರ ರೂ. ಭದ್ರತಾ ಠೇವಣಿ ಭರಿಸಬೇಕು ಎಂದು ಸೂಚನೆ ನೀಡಲಾಗಿತ್ತು.
ಮೊದಲಿಗೆ ನೋಂದಣಿ ಶುಲ್ಕ ಪಾವತಿಸಿದ ಬಹುತೇಕರು ಭದ್ರತಾ ಠೇವಣಿ ಹಣ ಪಾವತಿ ಮಾಡುವಲ್ಲಿ ಸೋತಿದ್ದರು. ಆದ್ರೆ ಹಣ ಇದ್ದ ಕೆಲವರು ಭದ್ರತಾ ಠೇವಣಿಯನ್ನೂ ಪಾವತಿ ಮಾಡಿ ಫೋಟೋದಲ್ಲಿ ಕಂಡ ಮಹಿಳೆ ಜೊತೆ ದೈಹಿಕ ಸಂಪರ್ಕ ಬೆಳೆಸುವ ಕನಸು ಕಾಣುತ್ತಿದ್ದರು. ಆದ್ರೆ, ಹಣ ಕಟ್ಟಿಸಿಕೊಂಡ ಬಳಿಕ ವಂಚಕರು ತಮ್ಮ ಮೊಬೈಲ್ ಸಂಪರ್ಕ ಕಟ್ ಮಾಡಿಕೊಂಡುಬಿಟ್ಟರು. ಒಂದು ವೇಳೆ ಮಹಿಳೆ ಗರ್ಭಿಣಿಯಾದರೆ 13 ಲಕ್ಷ ರೂ., ಗರ್ಭ ಧರಿಸದೇ ಇದ್ದರೂ 5 ಲಕ್ಷ ರೂ. ಹಣ ಕೊಡುತ್ತೇವೆ ಎಂದು ವಂಚಕರು ಹೇಳಿದ್ದರು. ಠೇವಣಿ ಕಟ್ಟಿಸಿಕೊಂಡ ಬಳಿಕ ನಾಪತ್ತೆಯಾಗಿಬಿಡುತ್ತಿದ್ದರು.
ಇವರಿಂದ ಹಣ ಕಳೆದುಕೊಂಡ ಬಹುತೇಕರು ಪೊಲೀಸರ ಮೊರೆ ಹೋಗಿದ್ದಾರೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 8 ಮಂದಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ ಮೊಬೈಲ್ ಫೋನ್ ಹಾಗೂ ಪ್ರಿಂಟರ್ ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದ ಮಾಸ್ಟರ್ ಮೈಂಡ್ ಇನ್ನೂ ತಲೆಮರೆಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.