ಬಿಹಾರದಲ್ಲಿ ಮತ ಎಣಿಕೆ ಆರಂಭ – ಎನ್‌ಡಿಎಗೆ ಭಾರೀ ಮುನ್ನಡೆ

ಬಿಹಾರದಲ್ಲಿ ಮತ ಎಣಿಕೆ ಆರಂಭ –  ಎನ್‌ಡಿಎಗೆ ಭಾರೀ ಮುನ್ನಡೆ

ಬಿಹಾರ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಯಾರು ಅಧಿಕಾರದ ಗದ್ದುಗೆ ಏರಲಿದ್ದಾರೆ ಎಂದು ಕಾದು ನೋಡಬೇಕಿದೆ. 243 ಸ್ಥಾನಗಳ ಎರಡು ಹಂತಗಳ ಮತ ಎಣಿಕೆ ಬೆಳಗ್ಗೆ 8 ಗಂಟೆಗೆ ಪ್ರಾರಂಭವಾಗಿದ್ದು, ಎನ್‌ಡಿಎ ಭಾರೀ ಮುನ್ನಡೆ ಸಾಧಿಸಿದೆ. ಬೆಳಗ್ಗೆ 9 ಗಂಟೆಯ ಟ್ರೆಂಡ್‌ ವೇಳೆ ಎನ್‌ಡಿಎ 147, ಮಹಾಘಟಬಂಧನ್‌ 89, ಜನಸೂರಜ್‌ 4, ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.

ಇದನ್ನೂ ಓದಿ:  ಕಾಂಗ್ರೆಸ್ ವೈಟ್‌ವಾಶ್‌ಗೆ ರಾಜಣ್ಣ ಶಪಥ! – ಒತ್ತಡವೋ, ಬಿಜೆಪಿಗೋ?

ಅಂಚೆ ಮತ ಎಣಿಕೆಯಿಂದಲೂ ಎನ್‌ಡಿಎ ಮುನ್ನಡೆ ಸಾಧಿಸಿತ್ತು. ಇದೇ ಟ್ರೆಂಡ್‌ ಮುಂದುವರಿಯುತ್ತಲೇ ಇದೆ. ಒಟ್ಟು 243 ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಚುನಾವಣೆ ನಡೆದಿತ್ತು.ಆರಂಭಿಕ ಮುನ್ನಡೆ ಸಾಧಿಸುತ್ತಿದ್ದಂತೆ ಎನ್‌ಡಿಎ ಪಾಳೆಯದಲ್ಲಿ ಸಂಭ್ರಮ ಮನೆ ಮಾಡಿದೆ. ಮಹಾಘಟಬಂಧನ್‌ ಪೈಕಿ ಆರ್‌ಜೆಡಿ ಹೆಚ್ಚಿನ ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದರೆ ಕಾಂಗ್ರೆಸ್‌ ಹಿನ್ನಡೆ ಸಾಧಿಸಿದೆ. ವಿಶೇಷವಾಗಿ ಆರ್‌ಜೆಡಿ ಯಾದವರು ಹೆಚ್ಚು ಪ್ರತಿನಿಧಿಸುವ ಕ್ಷೇತ್ರಗಳಲ್ಲಿ ಎನ್‌ಡಿಎ ಅಭ್ಯರ್ಥಿಗಳು ಮುನ್ನಡೆಯಲ್ಲಿದ್ದಾರೆ.

ಮಹಾಘಟಬಂಧನ್‌ ಪಕ್ಷದ ಮೈತ್ರಿ ಅಭ್ಯರ್ಥಿ ತೇಜಸ್ವಿ ಯಾದವ್‌ ಮಾತನಾಡಿದ್ದು, ಈ ಬಾರಿ ಬಿಹಾರದಲ್ಲಿ ನಿರಾಯಾಸವಾಗಿ ಗೆದ್ದು ಸರ್ಕಾರ ರಚನೆ ಮಾಡುತ್ತೇವೆ ಎಂದು  ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ಮಾಧ್ಯಮಗಳೊಂದಿಗೆ ಮಾತನಾಡಿದತೇಜಸ್ವಿ ಯಾದವ್‌, ಮಹಾಘಟಬಂಧನ್‌ ಸ್ಪಷ್ಟ ಬಹುಮತ ಗಳಿಸಲಿದೆ ಎನ್ನುತ್ತಾ ಸಮೀಕ್ಷೆಗಳನ್ನ ತಳ್ಳಿಹಾಕಿದರು. ರಾಜ್ಯದಲ್ಲಿ ನಾವು ಸರ್ಕಾರ ರಚಿಸುತ್ತೇವೆ, ಉದ್ಯೋಗ ರಾಜ್ಯ ಬರುತ್ತೆ ಅಂತ ಹೇಳಿದ್ದಾರೆ.

Shwetha M