ನಿತೀಶ್, ಮೋದಿಗೆ ಬಿ‘ಹಾರ’ ರಾಹುಲ್‌ಗಾಂಧಿ ಫೇಲ್ ಆಗಿದ್ದೆಲ್ಲಿ?
ಗಟ್ಟಿ ಆಯ್ತಾ ಸಿದ್ದು ಕುರ್ಚಿ?

ನಿತೀಶ್, ಮೋದಿಗೆ ಬಿ‘ಹಾರ’  ರಾಹುಲ್‌ಗಾಂಧಿ ಫೇಲ್ ಆಗಿದ್ದೆಲ್ಲಿ?ಗಟ್ಟಿ ಆಯ್ತಾ ಸಿದ್ದು ಕುರ್ಚಿ?

 

ಬಿಹಾರದಲ್ಲಿ ಯಾರು ಊಹಿಸಿಕೊಳ್ಳದಂತಹ ರಿಸಲ್ಟ್ ಹೊರ ಬಂದಿದೆ. NDAಗೆ ಸ್ಪಷ್ಟ ಬಹುಮತ ಬಂದ್ರೆ ಮಹಾಘಟ್ ಬಂಧನ್ ಹೇಳ ಹೆಸರಿಲ್ಲದಂತೆ ಮಕಾಡೆ ಮಲಗಿದೆ. ಈ ಬಾರಿ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ದಾಖಲೆಯ 67.13ರಷ್ಟು ಮತದಾನ ಆಗಿದೆ. ನ.6 ಮತ್ತು 11ರಂದು ಎರಡು ಹಂತದಲ್ಲಿ ರಾಜ್ಯದ 243 ಕ್ಷೇತ್ರಗಳಿಗೆ ಎಲೆಕ್ಷನ್ ನಡೆದಿತ್ತು, ಅದ್ರ ರಿಸಲ್ಟ್ ಇವತ್ತು ಹೊರ ಬಿದ್ದಿದೆ.  ಬಿಹಾರ ಚುನಾವಣೆ ಕುರಿತ ಬಹುತೇಕ ಅಂದರೆ 10 ಚುನಾವಣೋತ್ತರ ಸಮೀಕ್ಷೆಗಳು ಎನ್‌ಡಿಎ ಮೈತ್ರಿಕೂಟಕ್ಕೇ ಗೆಲುವು ಪಕ್ಕಾ ಎಂದು ಹೇಳಿದ್ವು.  ಮಹಾಘಟಬಂಧನ್‌ ಸೀಟುಗಳ ಸಂಖ್ಯೆ 100 ದಾಟುವುದು ಕಷ್ಟ ಎಂದು ಭವಿಷ್ಯ ನುಡಿದಿದ್ವು. ಆ ಭವಿಷ್ಯ ಈಗ ನಿಜವಾಗಿದ್ದು, ಬಿಹಾರ ಎಲೆಕ್ಷನ್‌ನಲ್ಲಿ NDA ಕೂಟ ಕಂಡು ಕೇಳರಿಯದ ರೀತಿಯಲ್ಲಿ ಗೆದ್ದು ಬೀಗಿದೆ. ಬಿಹಾರದಲ್ಲಿ ಮತ್ತೆ ನಿತೀಶ್ ಕುಮಾರ್‌ಗೆ  ದೊಡ್ಡ ಗೆಲುವು ಅಂತನೇಹೇಳಬಹುದು..

ಇದನ್ನೂ ಓದಿ: ಸೋಲಿನ ಶತಕದೆಡೆಗೆ ಹೆಜ್ಜೆ ಹಾಕುತ್ತಿರುವ ರಾಹುಲ್ ಗಾಂಧಿ ಅವರಿಗೆ ಅಭಿನಂದನೆ – ಆರ್.ಅಶೋಕ್ ಟಾಂಗ್

ಬಿಹಾರ ವಿಧಾನಸಭಾ ಎಲೆಕ್ಷನ್‌ನಲ್ಲಿ    ಒಟ್ಟು 243 ಕ್ಷೇತ್ರಕ್ಕೆ ಎಲೆಕ್ಷನ್ ನಡೆದಿದೆ. ಇದ್ರಲ್ಲಿ ದೊಡ್ಡ ಗೆಲುವನನ್ನ NDA ದಾಖಲಿಸಿದೆ. NDA ನಲ್ಲಿ BJP 90 ಸೀಟ್ ಪಡೆದ್ರೆ JDU 80 ಸೀಟ್ ಪಡೆದಿದ್ರೆ. ಇನ್ನೂಳಿದ  ಪಕ್ಷದಿಂದ  31 ಸೀಟ್ ಸೇರಿ  NDA ಒಟ್ಟು 201 ಸ್ಥಾನ ಪಡೆದಿದೆ. ಇನ್ನೂ ಮಹಾಘಟಬಂಧನ್ ಕೇವಲ 37 ಸೀಟ್‌ಗೆ ಸಿಮೀತವಾಗಿದೆ. ಇದ್ರಲ್ಲಿ  ಕಾಂಗ್ರೆಸ್ ಪಡೆದಿದ್ದು ಕೇವಲ 4 ಸೀಟ್ ಮಾತ್ರ ಆರ್‌ಜೆಡಿ 27 ಸೀಟ್ ಪಡೆದಿದೆ ಒಟ್ಟು 37 ಸ್ಥಾನ ಮಾತ್ರ ಪಡೆದಿದೆ. ಈ ಮೂಲಕ ನಿತೀಶ್ ಕುಮಾರ್ ಮತ್ತು ಮೋದ ಭರ್ಜರಿ ಗೆಲುವು ದಾಖಲಿಸಿದ್ದಾರೆ  ಸ್ಪಷ್ಟ ಬಹುಮತದೊಂದಿಗೆ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಎನ್‌ಡಿಎ ಯಶಸ್ವಿಯಾಗಿದೆ. ಈ ಗೆಲುವಿನ ಹಿಂದೆ ಪ್ರಧಾನಿ ನರೇಂದ್ರ ಮೋದಿ ಅಲೆ, ಸಿಎಂ ನಿತೀಶ್‌ ಕುಮಾರ್‌ ಜನಪ್ರಿಯತೆ, ಸಮರ್ಥ ಮತ ಪರಿವರ್ತನೆ, ಮಹಿಳಾ ಮತದಾರರ ಒಲವು ಹಾಗೂ ಜಾತಿ ಸಮೀಕರಣಗಳು ಪ್ರಮುಖ ಪಾತ್ರವಹಿಸಿವೆ.

 NDA ಗೆಲುವಿಗೆ, ಮಹಾಘಟಬಂಧನ್ ಸೋಲಿಗೆ ಕಾರಣ

ಎನ್‌ಡಿಎ ಗೆಲುವಿನಲ್ಲಿ ಬಿಜೆಪಿಯ ಪಾತ್ರ ಎಂದಿನಂತೆ ದೊಡ್ಡದಿದೆ. ಸ್ಪರ್ಧಿಸಿದ 101 ಸ್ಥಾನಗಳಲ್ಲಿ 85ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವ ಮೂಲಕ ಬಿಜೆಪಿ ಶೇ. 85ಕ್ಕಿಂತ ಹೆಚ್ಚಿನ ಸ್ಟ್ರೈಕ್‌ರೇಟ್‌ ದಾಖಲಿಸಿದೆ. ಇನ್ನೊಂದೆಡೆ ಕಳೆದ ಬಾರಿ ಕಳಪೆ ಪ್ರದರ್ಶನ ನೀಡಿದ್ದ ಜೆಡಿಯು ಕೂಡ 101ರಲ್ಲಿ 70ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆದುಕೊಳ್ಳುವ ಮೂಲಕ ಶೇ. 70ಕ್ಕಿಂತ ಹೆಚ್ಚಿನ ಸಾಧನೆ ಮಾಡಿದ್ದು ಮೈತ್ರಿಕೂಟದ ಗೆಲುವಿಗೆ ಕಾರಣವಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವವನ್ನು ಎನ್‌ಡಿಎ ತನ್ನ ಪ್ರಚಾರದಲ್ಲಿ ಪ್ರಮುಖವಾಗಿ ಬಳಸಿಕೊಂಡಿತು. ಜೊತೆಗೆ ಬಿಹಾರಕ್ಕೆ ನಿತೀಶ್‌ ಕುಮಾರ್‌ ಅವರೇ ಆಸರೆ, ಅವರೇ ಉತ್ತರ ಎಂಬಂತೆ ಬಿಂಬಿಸಿದ್ದು ಕೂಡ ಇಲ್ಲಿ ಕೈ ಹಿಡಿದಿದೆ.  ಅಭಿವೃದ್ಧಿ ಮಂತ್ರ’ಕ್ಕೆ ಆದ್ಯತೆ ನೀಡಿದ ಮತದಾರರು ಎನ್‌ಡಿಎಗೆ ಮತ ಹಾಕಿದ್ದಾರೆ. ಪುರುಷರು ಮಹಾಘಟಬಂಧನ್ ಕಡೆಗೆ ಸ್ವಲ್ಪ ಒಲವು ತೋರಿದರೆ, ಮಹಿಳೆಯರು ದೊಡ್ಡ ಪ್ರಮಾಣದಲ್ಲಿ ಎನ್‌ಡಿಎಗೆ ಬೆಂಬಲ ನೀಡಿದರು.  ಚುನಾವಣಾ ಪೂರ್ವದಲ್ಲಿ ಮಹಿಳೆಯರನ್ನು ಕೇಂದ್ರೀಕರಿಸಿ ಸರ್ಕಾರ ಘೋಷಿಸಿದ್ದ ಯೋಜನೆಗಳೂ ನೆರವಾಗಿವೆ. ಎನ್‌ಡಿಎ ಜಾತಿ ಮೈತ್ರಿಯಲ್ಲೂ ಯಶಸ್ಸು ಪಡೆಯಿತು. ಮೇಲ್ಜಾತಿಗಳು, ಕುರ್ಮಿ/ಕೊಯೆರಿ ಸಮುದಾಯ, ಅತ್ಯಂತ ಹಿಂದುಳಿದ ವರ್ಗಗಳ ಪ್ರಬಲ ಬೆಂಬಲವನ್ನು ಪಡೆದಿದೆ. ಆದ್ರೆ ಮಹಾಘಟಬಂಧನ್‌ನ ಬೆಂಬಲವು ಯಾದವರು ಮತ್ತು ಮುಸ್ಲಿಮರಿಗೆ ಮಾತ್ರ ಸೀಮಿತವಾಗಿತ್ತು. ಇವರ ಮತಗಳು ಕೂಡ ಜನ್‌ ಸುರಾಜ್‌  ಪಕ್ಷಗಳ ಸ್ಪರ್ಧೆಗಳಿಂದಾಗಿ ಹಂಚಿ ಹೋಗಿವೆ. ಇದೂ ವಿಪಕ್ಷಗಳಿಗೆ ದುಬಾರಿಯಾದರೆ, ಎನ್‌ಡಿಎಗೆ ಲಾಭವಾಯಿತು. ಮಹಾಘಟಬಂಧನ್‌ನಲ್ಲಿ ಕೊನೆಯ ಕ್ಷಣದವರೆಗೂ ಗೊಂದಲಗಳು ನಿವಾರಣೆ ಆಗಲೇ ಇಲ್ಲ. ಆರಂಭದಲ್ಲಿ ಸೀಟು ಹಂಚಿಕೆಗೆ ಆರ್‌ಜೆಡಿ – ಕಾಂಗ್ರೆಸ್‌ ಕಚ್ಚಾಡಿದರೆ, ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆಗೆ ಕಾಂಗ್ರೆಸ್‌ ಮೀನ-ಮೇಷ ಎಣಿಸಿತು. ಇದು ಜನರಲ್ಲೂ ಗೊಂದಲ ಮೂಡಿಸಿತು. ಇದರ ಲಾಭವನ್ನು ಬಿಜೆಪಿ ಚೆನ್ನಾಗಿ ಬಳಸಿಕೊಂಡಿದೆ.   ಮಹಾಘಟಬಂಧನ್ ಸೋಲಿಗೆ ಕಾಂಗ್ರೆಸ್‌ನ ಕಳಪೆ ಪ್ರದರ್ಶನ ಕೂಡ ಪ್ರಮುಖ ಕಾರಣವಾಯಿತು. 2020ರಲ್ಲಿ 70 ಸ್ಥಾನಗಳಲ್ಲಿ ಸ್ಪರ್ಧಿಸಿ ಕೇವಲ 19 ಸ್ಥಾನಗಳನ್ನು ಗೆದ್ದಿದ್ದ ಕಾಂಗ್ರೆಸ್, ಈ ಬಾರಿಯೂ ಮೈತ್ರಿಕೂಟಕ್ಕೆ ಹೊರೆಯಾಯಿತು. 61 ಸ್ಥಾನಗಳಲ್ಲಿ ಕೇವಲ ಒಂದಂಕಿಯ ಸಾಧನೆ ಮಾಡಿ ಕಳಪೆ ಪ್ರದರ್ಶನ ನೀಡಿದೆ. ಅತ್ತ ಆರ್‌ಜೆಡಿ ಸಾಧನೆಯೂ ಇದಕ್ಕಿಂತ ಉತ್ತಮವಾಗಿಲ್ಲ. ವಿಪಕ್ಷಗಳ ಈ ರೆಕಾರ್ಡ್‌ ಬಿಜೆಪಿಗೆ ಪ್ಲೇಸ್ ಆಯ್ತು.. ಸೋಷಿಯಲ್ ಮೀಡಿಯಾ ಜಮಾನದಲ್ಲಿ  ಮಹಾಘಟಬಂಧನ್ ಡಿಜಿಟಲ್ ವೇದಿಕೆಗಳಲ್ಲಿ ಹೆಚ್ಚು ಸಕ್ರಿಯವಾಗಿರಲಿಲ್ಲ.  ಆದ್ರೆ ಬಿಜೆಪಿ ಇದಕ್ಕೆ ತದ್ವಿರುದ್ಧವಾಗಿ ಆಕ್ರಮಣಕಾರಿಯಾಗಿ ಡಿಜಿಟಲ್‌ ಮಾಧ್ಯಮಗಳನ್ನು ಬಳಸಿಕೊಂಡಿತು.  ಜನರಿಗೆ  ಈಮೂಲಕ ಕೂಡ ಹತ್ರ ಆಗಿತ್ತು.  ಮಹಾಘಟಬಂಧನ್‌ನ ಪ್ರಚಾರದ ವಿಷಯಗಳು ಮತದಾರರ ಮೇಲೆ ಪರಿಣಾಮ ಬೀರಲಿಲ್ಲ. ರಾಹುಲ್ ಗಾಂಧಿಯವರ ‘ವೋಟ್ ಚೋರಿ’ಯಂತಹ ಆರೋಪಗಳನ್ನು ಶೇ. 52ರಷ್ಟು ಜನರು ಆಧಾರರಹಿತ ಎಂದು ತಳ್ಳಿಹಾಕಿದರು. ಉದ್ಯೋಗದಂತಹ ಜನರ ಪ್ರಮುಖ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಮೈತ್ರಿ ವಿಫಲವಾಯಿತು. ಇದು ಎನ್‌ಡಿಎಗೆ ಅನುಕೂಲವಾಯಿತು. ಉದ್ಯೋಗ ಸೃಷ್ಟಿಯ ಬಗ್ಗೆ ಎನ್‌ಡಿಎ ನೀಡಿದ ಭರವಸೆಗಳನ್ನು ಜನರು ನಂಬಿದರು. ಅದೇ ವಿಪಕ್ಷಗಳ ಆಶ್ವಾಸನೆಗೆ ಸೊಪ್ಪು ಹಾಕಲಿಲ್ಲ. ) ಇವೆಲ್ಲಾ ಕೂಡ NDA ಗೆಲುವಿಗೆ ಪ್ರಮುಖ ಕಾರಣವಾಗಿದೆ.

ಸಿದ್ದು ಕುರ್ಚಿ ಗಟ್ಟಿ ಆಯ್ತಾ?

ಆದರೆ ಇದೀಗ ಬಿಹಾರದಲ್ಲಿ ಕಾಂಗ್ರೆಸ್‌ ದಯನೀಯವಾಗಿ ಸೋತಿದೆ.  ಕಾಂಗ್ರೆಸ್‌ನ ರಾಹುಲ್‌ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ವಾಧ್ರಾ ಅಲ್ಲಿ ಪ್ರಚಾರ ನಡೆಸಿದ್ದಾರೆ. ಇವರೆಲ್ಲರಿಗೂ ಈಗ ಮುಖಭಂಗವಾಗಿದೆ. ಸೋತ ಮುಖ ಹೊತ್ತ ವರಿಷ್ಠರು ಇದೀಗ ಯಾವುದೇ ರಾಜ್ಯದಲ್ಲಿ ಯಾವುದೇ ಬದಲಾವಣೆಗೆ ಮುಂದಾಗುವ ಸಾಧ್ಯತೆ ಇಲ್ಲ. ಕರ್ನಾಟಕದಲ್ಲಂತೂ ಸಿದ್ದರಾಮಯ್ಯನವರನ್ನು ಬದಲಿಸುವ ಸಾಹಸಕ್ಕೆ ಕೈ ಹಾಕಲ್ಲ.  ರಾಜ್ಯ ನಾಯಕರು ಯಾರಾದರೂ ಅಂಥ ಯೋಚನೆ ಮುಂದಿಟ್ಟರೂ ಅವರ ಮಾತು ಕೇಳಿಸಿಕೊಳ್ಳಲ್ಲ.  ಬಿಹಾರದಲ್ಲಿ ನಿತೀಶ ಕುಮಾರ್‌ ಅವರ ಬೆಂಬಲದಿಂದಲೇ ಬಿಜೆಪಿ ನೆಲೆಗಟ್ಟೂ ಅಲ್ಲಿ ಗಟ್ಟಿಯಾಗಿದೆ. ಹೀಗಾಗಿ, ರಾಜ್ಯ ರಾಜಕಾರಣದಲ್ಲಿ ಹೈಕಮಾಂಡ್‌ ಮಾತುಗಳಿಗಿಂತ ಬಲಿಷ್ಠ ರಾಜ್ಯ ನಾಯಕರೇ ಮುಖ್ಯ ಪಾತ್ರ ವಹಿಸುತ್ತಾರೆ ಎಂಬುದು ಖಚಿತಗೊಂಡಿದೆ. ಕರ್ನಾಟಕ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರು ಈಗ ಪ್ರಶ್ನಾತೀತ ನಾಯಕ. ಅವರ ಜನಪ್ರಿಯತೆ ಹೆಚ್ಚಿದೆ.  ಗ್ಯಾರಂಟಿ ಯೋಜನೆಗಳಿಂದಾಗಿ ತಮ್ಮ ಪ್ರಭಾವವನ್ನು ಇನ್ನಷ್ಟು ವಿಸ್ತರಿಸಿಕೊಂಡಿರುವ ಸಿದ್ದರಾಮಯ್ಯ ರಾಜ್ಯ ಕಾಂಗ್ರೆಸ್‌ನಲ್ಲಿ ಡಿಕೆ ಶಿವಕುಮಾರ್‌ ಬಣದ ಯಾವುದೇ ಆಟ ನಡೆಯದಂತೆ ನೋಡಿಕೊಂಡಿದ್ದಾರೆ. ಹೀಗಾಗಿ ಕೈ ಹೈಕಮಾಂಡ್ ಯಾವುದೇ ಕಾರಣಕ್ಕೂ ಸಿದ್ದರಾಮಯ್ಯನ ಇಳಿಸಲ್ಲ..

Kishor KV