2025ರಲ್ಲೂ ಮುದುಡುತ್ತಾ ಕಮಲ? – ಕೇಜ್ರಿ ತಂತ್ರಕ್ಕೆ ಮೋದಿ ಉತ್ತರವೇನು?
ನಿತೀಶ್ ಕುಗ್ಗಿದ್ರೂ, ತೇಜಸ್ವಿನೇ ಗೆಲ್ತಾರಾ?
2025ರಲ್ಲಿ ನಡೆಯಲಿರುವ ಪ್ರಮುಖ ಚುನಾವಣೆಗಳ ಮೇಲೆ ಕಣ್ಣಿಟ್ಟಿರುವ ಬಿಜೆಪಿ ಈಗಾಗಲೆ ರಣತಂತ್ರಗಳನ್ನು ಹೆಣೆಯುತ್ತಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯಲು ಪ್ಲ್ಯಾನ್ ಮಾಡುತ್ತಿದೆ. ಈ ವರ್ಷ ದೆಹಲಿ ಮತ್ತು ಬಿಹಾರದ ಚುನಾವಣಾ ಕದನಗಳಲ್ಲಿ ಎನ್‌ಡಿಎ ದೊಡ್ಡ ಪಾತ್ರವನ್ನು ವಹಿಸಲಿದೆ. ಎರಡು ಚುನಾವಣೆಗಳು ರಾಜಕೀಯ ಬ್ರ್ಯಾಂಡ್‌ಗಳಾದ ನರೇಂದ್ರ ಮೋದಿ, ನಿತೀಶ್ ಕುಮಾರ್ ಮತ್ತು ಅರವಿಂದ್ ಕೇಜ್ರಿವಾಲ್ ಅವರಿಗೆ ಪರೀಕ್ಷೆಯಾಗಿದೆ. ಬಿಹಾರದ ಮುಖ್ಯಮಂತ್ರಿಯಾಗಲು ಬಹಳ ದಿನಗಳಿಂದ ಕಾಯುತ್ತಿರುವ ತೇಜಸ್ವಿ ಯಾದವ್ ಅವರ ರಾಜಕೀಯ ಸಾಮರ್ಥ್ಯವನ್ನೂ ಈ ಚುನಾವಣೆ ಪರೀಕ್ಷಿಸಲಿದೆ. ಹಾಗೇ ದೆಹಲಿ ಎಲೆಕ್ಷನ್ ಕೇಜ್ರಿವಾಲ್ ಭವಿಷ್ಯವನ್ನ ನಿರ್ಧಾರ ಮಾಡಲಿದೆ.
ಇದನ್ನೂ ಓದಿ : ಶಿವಣ್ಣ ಇನ್ಮುಂದೆ ಕ್ಯಾನ್ಸರ್ ಫ್ರೀ – ಸರ್ಜರಿಗೂ ಮುನ್ನ ಕಾಡಿತ್ತು ಆ ಭಯ!
2013ರಿಂದ ದೆಹಲಿಯಲ್ಲಿ ಅಧಿಕಾರದಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಹಿಂದೆಂದೂ ಇಲ್ಲದ ಒತ್ತಡದಲ್ಲಿದೆ. ಭ್ರಷ್ಟಾಚಾರದ ಆರೋಪದಲ್ಲಿ ಜೈಲು ಸೇರಿದ್ದ ಕೇಜ್ರಿವಾಲ್ ಜಾಮೀನಿನ ಮೇಲೆ ಬಂದ ನಂತ್ರ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ರು. ತನ್ನ ತಪ್ಪಿಲ್ಲ, ಜನರೇ ನನಗೆ ನ್ಯಾಯ ಕೊಡ್ತಾರೆ ಅನ್ನೋ ರೀತಿಯಲ್ಲಿ ಬಿಂಬಿಸಿದ್ರು. ಆ ಕ್ಷಣದ ಸುಖಗಿಂತ ಮುಂದಿನ 5 ವರ್ಷದ ಬಗ್ಗೆ ಅವತ್ತೇ ಕೇಜ್ರಿವಾಲ್ ಯೋಚನೆ ಮಾಡಿದ್ರು. ಇನ್ನೂ ಒಂದು ದಶಕದ ಹಿಂದೆ, AAP ಭಾರತದ ಅತ್ಯಂತ ಯಶಸ್ವಿ ರಾಜಕೀಯ ಪಕ್ಷವಾಗಿತ್ತು. ಇಂದು ಕೇಜ್ರಿವಾಲ್ ಅವರ ಇಮೇಜ್ ಮತ್ತು ಅವರ ರಾಜಕೀಯದ ಬ್ರ್ಯಾಂಡ್ ಎರಡೂ ಅಪಾಯದಲ್ಲಿದೆ. ಹಾಗಂತ ಈ ಅವಕಾಶವನ್ನ ಬಿಜೆಪಿ ಬಳಸಿಕೊಳುತ್ತೆ ಅಂತ ಹೇಳೋಕೆ ಆಗಲ್ಲ.. ಲೋಕಸಭೆ ಎಲೆಕ್ಷನ್‌ನಲ್ಲಿ ದೆಹಲಿಯಲ್ಲಿ ಬಿಜೆಪಿ ತನ್ನ ತಾಕತ್ತು ತೋರಿಸಿದ್ರು, ವಿಧಾನಸಭಾ ಎಲೆಕ್ಷನ್‌ನಲ್ಲಿ ಬಿಜೆಪಿ ಅಂದುಕೊಂಡಿದ್ದು ಮಾಡಿಕೊಳ್ಳೋಕೆ ಆಗುತ್ತಿಲ್ಲ. 2020 ರಲ್ಲಿ ನಡೆದ ವಿಧಾನಸಭಾ ಎಲೆಕ್ಷನ್‌ನಲ್ಲಿ ಬಿಜೆಪಿ 8 ಸೀಟ್ ಗೆದ್ರೆ, ಆಪ್ 62 ಸ್ಥಾನವನ್ನ ಗೆದ್ದಿತ್ತು. ಆದ್ರೆ ಕಳೆದ ಲೋಕಸಭಾ ಎಲೆಕ್ಷನ್‌ನಲ್ಲಿ ಬಿಜೆಪಿ 7 ಕ್ಕೆ 7 ಲೋಕಸಭಾ ಕ್ಷೇತ್ರವನ್ನ ಗೆದ್ದಿತ್ತು. ಇಲ್ಲಿ ಆಪ್ ಒಂದು ಸ್ಥಾನವನ್ನ ಗೆದ್ದಿಲ್ಲ.. ದೆಹಲಿ ರಾಷ್ಟ್ರ ರಾಜಧಾನಿ ಆಗಿರೋದ್ರಿಂದ ಸಾಕಷ್ಟು ಸಮಸ್ಯೆಗಳಿವೆ.. ಪೂರ್ಣ ಪ್ರಮಾಣದ ಅಧಿಕಾರ ಕೂಡ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಸಿಗಲ್ಲ.. ಅಲ್ಲದೇ ಕೇಜ್ರಿವಾಲ್ ವಿರುದ್ಧ ಕಾಂಗ್ರೆಸ್‌ಗೆ ಬಳಸಿದಂತೆ ಹಿಂದೂ ಅಸ್ತ್ರವನ್ನ ಬಿಜೆಪಿ ಬಳಸೋಕೆ ಆಗಲ್ಲ.. ಯಾಕಂದ್ರೆ ಇಲ್ಲಿ ಅರವಿಂದ್ ಕೇಜ್ರಿವಾಲ್ ಎಲ್ಲಾ ವರ್ಗದ ಜನರನ್ನೂ ತಮ್ಮ ಕಡೆ ಸಳೆದಿದ್ದಾರೆ. ಹಾಗೇ ಸೆಳೆಯುತ್ತಿದ್ದಾರೆ.
ಮಹಿಳೆಯರು, ದಲಿತರು ಮತ್ತು ಹಿರಿಯ ನಾಗರಿಕರು ಸೇರಿದಂತೆ ನಿರ್ದಿಷ್ಟ ವರ್ಗದ ಮತದಾರರನ್ನು ಗುರಿಯಾಗಿಸಿಕೊಂಡು ಪಕ್ಷ ಇದುವರೆಗೆ ನಾಲ್ಕು ಕಲ್ಯಾಣ ಯೋಜನೆಗಳನ್ನು ಘೋಷಿಸಿದೆ. ಪಕ್ಷವು ಮತ್ತೆ ಅಧಿಕಾರಕ್ಕೆ ಬಂದರೆ, ದೇವಸ್ಥಾನಗಳಲ್ಲಿ ಕೆಲಸ ಮಾಡುವ ಎಲ್ಲಾ ಅರ್ಚಕರು ಮತ್ತು ನಗರದಾದ್ಯಂತ ಗುರುದ್ವಾರಗಳಲ್ಲಿ ಗ್ರಂಥಿಗಳಿಗೆ ತಿಂಗಳಿಗೆ 18,000 ರೂಪಾಯಿಗಳನ್ನು ನೀಡುವುದಾಗಿ ಎಎಪಿ ಭರವಸೆ ನೀಡಿದೆ. ಅರ್ಚಕರಿಗಾಗಿ ಇಂತಹ ಯೋಜನೆಗಳನ್ನು ಘೋಷಿಸಿದ ದೇಶದ ಮೊದಲ ಪಕ್ಷ ಎಎಪಿ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಹಾಗೇ 20 ಸಾವಿರ ಲೀಟರ್ ನೀರ.. ಮಹಿಳಾ ಸಮ್ಮಾನ್ ಯೋಜನೆ ಅಡಿ ಮಹಿಳೆಯರಿಗೆ 2100 ರೂಪಾಯಿ. 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಉಚಿತ ಚಿಕಿತ್ಸೆ, ಹೈಟೆಕ್ ಸ್ಕೂಲ್ ಮಾಡಿದ್ದಾರೆ.. ಸಾಕಷ್ಟು ಜನ ಪರ ಯೋಜನೆಯನ್ನ ಕ್ರೇಜಿವಾಲ್ ಘೋಷಿಸಿದ್ದಾರೆ. ಇದು ಬಿಜೆಪಿಗೆ ಮುಳುವಾಗುತ್ತೆ.. ಬಿಜೆಪಿ ಹಿಂದೂ ಅಸ್ತ್ರ ಬಿಟ್ಟರು ವರ್ಕೌಟ್ ಆಗಲ್ಲ. ಹಾಗೇ ಕ್ರೇಜಿವಾಲ್ ಬ್ರಷ್ಟಚಾರ ಮಾಡಿ ಜೈಲಿಗೆ ಹೋಗಿದ್ದಾರೆ ಎಂದ್ರು ಅಷ್ಟೆನೂ ಇಂಫ್ಯಾಕ್ಟ್ ಆಗಲ್ಲ.. ಹೀಗಾಗಿ ದೆಹಲಿ ಕಮಲ ಅರಳುವುದು ಅಷ್ಟು ಸುಲಭ ಅಲ್ಲ.. ಮೋದಿ ಬೇರೆಯದ್ದೇ ಅಸ್ತ್ರವನ್ನ ಇಲ್ಲಿ ಬಳಸಬೇಕು.. ಕೇಜ್ರಿವಾಲ್ ಸರ್ಕಾರದ ನಿರ್ಣಯಗಳಿಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ಎಷ್ಟೋ ಸರಿ ಕೊಕ್ಕೆ ಹಾಕ್ತಾರೆ. ಇದು ಅಲ್ಲಿನ ಜನ ಅರ್ಥ ಮಾಡಿಕೊಂಡಿದ್ದಾರೆ. ನಿಮ್ಗೆ ಗೊತ್ತಿರಲಿ, ದೆಹಲಿಯಲ್ಲಿ ಎಲೆಕ್ಷನ್ ನಡೆದಾದ, ದೇಶದ ಬೇರೆ ಬೇರೆ ರಾಜ್ಯದಲ್ಲಿ ಆಪ್ ಕಾರ್ಯಕರ್ತರು ಅಲ್ಲಿಗೆ ಹೋಗಿ ಕೇಜ್ರಿವಾಲ್ ಬೆನ್ನಿಗೆ ನಿಲ್ತಾರೆ. ಇದು ಆಪ್‌ಗೆ ಪ್ಲೆಸ್ ಪಾಯಿಂಟ್..
ನಿತೀಶ್ ಕುಗ್ಗಿದ್ರೂ, ತೇಜಸ್ವಿನೇ ಗೆಲ್ತಾರಾ?
ಬಿಹಾರದಲ್ಲಿ ನಿತೀಶ್ ಕುಮಾರ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಆಡಳಿತ ನಡೆಸುತ್ತಿದ್ದು, ಈ ಬಾರಿ ಅವರು ಅಂದುಕೊಂಡಷ್ಟು ಸುಲಭವಾಗಿಲ್ಲ..ಈ ಬಾರಿ ಕೂಡ ಮೋದಿ ಮತ್ತು ನಿತೀಶ್ ಕುಮಾರ್ ನಾಯಕತ್ವದಲ್ಲಿ ಬಿಹಾರ ಎಲೆಕ್ಷನ್ ಎದುರಿಸಲು ಮೈತ್ರಿಕೂಟ ಪ್ಲ್ಯಾನ್ ಮಾಡಿವೆ.. 2020ರ ಅಸೆಂಬ್ಲಿ ಚುನಾವಣೆಯಲ್ಲಿ ಜೆಡಿಯು ಗಣನೀಯವಾಗಿ ಕುಸಿದು ಕೇವಲ 43 ಸ್ಥಾನ ಗಳಿಸಿತು. 2025 ರ ಚುನಾವಣೆಯು ಇನ್ನಷ್ಟು ತೀವ್ರ ಕುಸಿತದ ಫಲಿತಾಂಶ ನೀಡುತ್ತದೆ ಅನ್ನೋ ಮಾತು ಕೇಳಿ ಬರ್ತಿದೆ. ಅಲ್ಲದೇ ಬಿಹಾರ ವಿಧಾನಸಭೆಯ ವಿರೋಧ ಪಕ್ಷದ ನಾಯಕ ತೇಜಸ್ವಿ ಪ್ರಸಾದ್ ಯಾದವ್ ಕೂಡ ಸ್ಟ್ರಾಂಗ್ ಇದ್ದಾರೆ. ಅಲ್ಲದೇ ಅಧಿಕಾರಕ್ಕೆ ಬರೋಕ್ಕೆ ಸಾಕಷ್ಟು ಯೋಜನೆಗಳನ್ನ ಕೂಡ ಘೋಷಣೆ ಮಾಡಿದ್ದಾರೆ. ಹಿರಿಯ ನಾಗರಿಕರು, ವಿಧವೆಯರು ಮತ್ತು ಅಂಗವಿಕಲರಿಗೆ ನೀಡುವ ಮೊತ್ತವನ್ನು ತಿಂಗಳಿಗೆ 400 ರೂ.ನಿಂದ 1500 ರೂ.ಗೆ ಹೆಚ್ಚಿಸಲಾಗುವುದು ಎಂದು ತೇಜಸ್ವಿ ಭರವಸೆ ನೀಡಿದ್ದಾರೆ. 200 ಯೂನಿಟ್ ವಿದ್ಯುತ್ ಅನ್ನು ಉಚಿತವಾಗಿ ನೀಡುವುದಾಗಿ ತೇಜಸ್ವಿ ಯಾದವ್ ಇತ್ತಿಚೆಗೆ ಹೇಳಿದ್ದರು. ಇದನ್ನ ನೋಡಿದ್ರೆ ಬಿಜೆಪಿ ಮೈತ್ರಿಕೂಟ ಬಿಹಾರದಲ್ಲು ಗೆಲ್ಲೋದು ಡೌಟ್