ಕೃಷಿ ಬಗ್ಗೆ ಮಾತಾಡ್ತಿದ್ದ ರೈತನನ್ನ ಅರ್ಧಕ್ಕೇ ತಡೆದ ಸಿಎಂ – ವೇದಿಕೆ ಮೇಲೆಯೇ ತಾಳ್ಮೆ ಕಳೆದುಕೊಂಡಿದ್ದೇಕೆ..?

ಕೃಷಿ ಬಗ್ಗೆ ಮಾತಾಡ್ತಿದ್ದ ರೈತನನ್ನ ಅರ್ಧಕ್ಕೇ ತಡೆದ ಸಿಎಂ – ವೇದಿಕೆ ಮೇಲೆಯೇ ತಾಳ್ಮೆ ಕಳೆದುಕೊಂಡಿದ್ದೇಕೆ..?

ಬಿಹಾರದ ಪಾಟ್ನಾದಲ್ಲಿ ನಡೆದ ಕೃಷಿ ಕಾರ್ಯಕ್ರಮವೊಂದಲ್ಲಿ ಮಂಗಳವಾರ ಪ್ರಗತಿಪರ ರೈತರೊಬ್ಬರು ತಮ್ಮ ಯಶಸ್ಸಿನ ಕುರಿತು ಮಾತನಾಡುತ್ತಿದ್ರು. ಈ ವೇಳೆ ಅಲ್ಲಿನ ಮುಖ್ಯಮಂತ್ರಿ ನಿತೀಶ್ ಕುಮಾರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾಕೆ ಅನ್ನೋ ಮಾಹಿತಿ ಮುಂದೆ ಇದೆ ಓದಿ.

ಬಿಹಾರದ 4ನೇ ಕೃಷಿ ಮಾರ್ಗಸೂಚಿ ಉದ್ಘಾಟನಾ ಸಮಾರಂಭದಲ್ಲಿ ಪ್ರಗತಿಪರ ರೈತ, ಮ್ಯಾನೇಜ್​ಮೆಂಟ್ ಪದವೀಧರ ಅಮಿತ್ ಕುಮಾರ್ ಮಾತು ಶುರು ಮಾಡಿದ್ರು. ತಮ್ಮನ್ನ ರೈತ ಎಂದು ಇಂಗ್ಲಿಷ್​ನಲ್ಲಿ ಪರಿಚಯಿಸಿಕೊಂಡರು. ಬಳಿಕ ಅಣಬೆ ಕೃಷಿ ಕುರಿತು ಮಾಹಿತಿ ನೀಡುವಾಗಲೂ ಅನೇಕ ಸಲ ಇಂಗ್ಲಿಷ್ ಪದಗಳನ್ನ ಬಳಿಸಿದ್ದರು.

ಇದನ್ನೂ ಓದಿ : ದೆಹಲಿಯಿಂದ ಅಮೆರಿಕಕ್ಕೆ ಹೊರಟಿದ್ದ ವಿಮಾನ ಸ್ಪೀಡನ್​ನಲ್ಲಿ ತುರ್ತು ಭೂಸ್ಪರ್ಶ – ಕಾರಣವೇನು ಗೊತ್ತಾ..!?

ಅಮಿತ್ ಕುಮಾರ್ ಪದೇಪದೆ ಇಂಗ್ಲಿಷ್ ಪದ ಬಳಸಿದ್ದಕ್ಕೆ ಕೆರಳಿದ ಸಿಎಂ ನಿತೀಶ್ ಕುಮಾರ್ ರೈತನನ್ನ ಮಧ್ಯದಲ್ಲೇ ತಡೆದು ಮಾತು ಶುರು ಮಾಡಿದ್ರು. ‘ಇದೇನು ಇಂಗ್ಲೆಂಡಾ..? ನೀವು ಬಿಹಾರದಲ್ಲಿ ಕೆಲಸ ಮಾಡುತ್ತಿರುವಿರಾ. ಜನಸಾಮಾನ್ಯರ ವೃತ್ತಿಯಾದ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವಿರಿ. ಹೀಗಿರುವಾಗ ನೀವಿಲ್ಲಿ ಇಂಗ್ಲಿಷ್ ಬಳಸುವ ಅನವಶ್ಯಕತೆಯನ್ನ ಹೇಳಲು ಬಯಸುತ್ತೇನೆ’ ಎಂದಿದ್ದಾರೆ. ನಿತೀಶ್ ಈ ಮಾತು ಹೇಳ್ತಿದ್ದಂತೆ ಅಲ್ಲಿದ್ದವರೆಲ್ಲಾ ಚಪ್ಪಾಳೆ ತಟ್ಟಿದ್ದಾರೆ.

ಮುಖ್ಯಮಂತ್ರಿಗಳ ಮಾತಿನಿಂದ ಗಲಿಬಿಲಿಗೊಂಡ ಅಮಿತ್ ಕುಮಾರ್ ತಾನು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು, ಬೋಧನಾ ಮಾಧ್ಯಮವು ಇಂಗ್ಲಿಷ್ ಆಗಿದ್ದರಿಂದ ಅದನ್ನೇ ಹೆಚ್ಚಾಗಿ ಬಳಸಿದೆ ಎಂದು ಸಮಜಾಯಿಷಿ ನೀಡಿದ್ದಾರೆ. ಬಳಿಕ ಅದಕ್ಕೆ ಕ್ಷಮೆಯಾಚನೆ ಮಾಡಿದ್ದಾರೆ.

suddiyaana