ಶಿವಣ್ಣನ ಲೇಡಿ ಗೆಟಪ್, ಉಪ್ಪಿ ಮಾಸ್ ಡೈಲಾಗ್ – ‘45’ ಮೂವಿ ಟ್ರೈಲರ್‌ಗೆ ಫ್ಯಾನ್ಸ್ ಫಿದಾ  

ಶಿವಣ್ಣನ ಲೇಡಿ ಗೆಟಪ್, ಉಪ್ಪಿ ಮಾಸ್ ಡೈಲಾಗ್ –  ‘45’ ಮೂವಿ ಟ್ರೈಲರ್‌ಗೆ ಫ್ಯಾನ್ಸ್ ಫಿದಾ   

ಕರುನಾಡ ಚಕ್ರವರ್ತಿ ಶಿವರಾಜಕುಮಾರ್ , ರಿಯಲ್ ಸ್ಟಾರ್ ಉಪೇಂದ್ರ   ಹಾಗೂ ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರದಲ್ಲಿ ನಟಿಸಿರುವ, ʼ45ʼ ಮೂವಿ ಟ್ರೈಲರ್‌  ಬಿಡುಗಡೆಯಾಗಿದ್ದು, ಹವಾ ಎಬ್ಬಿಸುತ್ತಿದೆ. ರಿಯಲ್‌ ಸ್ಟಾರ್‌ ಉಪೆಂದ್ರ ಅಂತೂ ಮಾಸ್‌ ಡೈಲಾಗ್‌ ಮೂಲಕವೇ ಅಬ್ಬರಿಸಿದ್ದಾರೆ. ಅದರಲ್ಲೂ ಶಿವಣ್ಣ   ಹಿಂದೆಂದೂ ಕಂಡಿರದ ಲುಕ್‌ನಲ್ಲಿ ಮಿಂಚಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಆಗಸ್ಟ್ ತಿಂಗಳಲ್ಲೇ ‘45’ ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಗ್ರಾಫಿಕ್ಸ್ ಕೆಲಸಗಳ ಕಾರಣಕ್ಕೆ ಸಿನಿಮಾದ ರಿಲೀಸ್ ದಿನಾಂಕ ಮುಂದಕ್ಕೆ ಹೋಗಿತ್ತು. ಈಗ ಟ್ರೇಲರ್ ನೋಡಿದವರಿಗೆ ಅದು ಸ್ಪಷ್ಟವಾಗಿದೆ. ‘45’ ಚಿತ್ರದ ಟ್ರೇಲರ್ ಉದ್ದಕ್ಕೂ ಗ್ರಾಫಿಕ್ಸ್ ಹೈಲೈಟ್ ಆಗಿದೆ. ಡಿಸೆಂಬರ್ 25ರಂದು ಸಿನಿಮಾ ತೆರೆಗೆ ಬರುತ್ತಿದೆ.

ಇದನ್ನೂ ಓದಿ: ವೇದಿಕೆ ಮೇಲೆ ಮಹಿಳೆಯ ಬಿಜಾಬ್ ಎಳೆದ  ಬಿಹಾರ ಸಿಎಂ – ನಿತೇಶ್ ಕುಮಾರ್ ರಾಜಿನಾಮೆಗೆ ಕೈ ಆಗ್ರಹ

ರಾಜ್ ಬಿ ಶೆಟ್ಟಿ, ಶಿವರಾಜ್​ಕುಮಾರ್ ಹಾಗೂ ಉಪೇಂದ್ರ ಪಾತ್ರಗಳು ಟ್ರೇಲರ್​ನಲ್ಲಿ ಹೈಲೈಟ್ ಆಗಿವೆ. ಗೋರಿ ಮೇಲೆ ಹುಟ್ಟಿದ ದಿನಾಂಕ, ಹಾಗೂ ಸಾಯುವ ದಿನಾಂಕ ಬರೆದಿರುತ್ತಾರೆ. ಮಧ್ಯದಲ್ಲಿ ಒಂದು ಸಣ್ಣ ಗೆರೆ ಇರುತ್ತೇ. ಅದುವೇ ಜೀವನ ಎಂದು ಉಪ್ಪಿ ಹೇಳುವ ಡೈಲಾಗ್ ಗಮನ ಸೆಳೆದಿದೆ. ಟ್ರೇಲರ್ ಕೊನೆಯಲ್ಲಿ ಶಿವರಾಜ್​ಕುಮಾರ್ ತಾಳುವ ಅವತಾರ ಮೆಚ್ಚುಗೆ ಪಡೆದಿದೆ.  ಶಿವಣ್ಣನ ಲೇಡಿ ಗೆಟಪ್‌ನ್ನ  ಸಿನಿ ರಸಿಕರು ಮೆಚ್ಚಿಕೊಂಡಿದ್ದಾರೆ.  ಮಾಸ್‌ ಡೈಲಾಗ್‌ ಜೊತೆ ಫೈಟ್‌, ಶಿವಣ್ಣ ಖದರ್‌, ರಾಜ್‌ ಬಿ ಶೆಟ್ಟಿ ನಟನೆ ಹೈಲೈಟ್‌ ಆಗಿದೆ. ಟ್ರೈಲರ್‌ ಕಂಡು ಸಿನಿಮಾ ಬೇಗ ರಿಲೀಸ್‌ ಆಗಲಿ, ಕಾಯ್ತಾ ಇದ್ದೀವಿ ಅಂತ ಕಮೆಂಟ್‌ ಮಾಡ್ತಿದ್ದಾರೆ ಸಿನಿ ಪ್ರೇಮಿಗಳು.

‘45’ ಸಿನಿಮಾ ಬಗ್ಗೆ ಸಾಕಷ್ಟು ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಸಂಗೀತ ಸಂಯೋಜಕ ಅರ್ಜುನ್ ಜನ್ಯ ಅವರು ಡೈರೆಕ್ಟರ್ ಆಗಿದ್ದಾರೆ. ಅವರು ಪ್ರಥಮ ಸಿನಿಮಾದಲ್ಲೇ ಗೆಲ್ಲುವ ಸೂಚನೆ ನೀಡಿದ್ದಾರೆ. ಈ ಚಿತ್ರದ ಟ್ರೇಲರ್ ಅದ್ಭುತವಾಗಿ ಮೂಡಿ ಬಂದಿದೆ. ಹುಟ್ಟು ಹಾಗೂ ಸಾವಿನ ನಡುವಿನ ಕಥೆ ಇದು ಎಂದು ಹೇಳಲಾಗುತ್ತಾ ಇದೆ.

 

Kishor KV