ಕ್ರಿಕೆಟ್ ಮರೆತ PAK ಪ್ಲೇಯರ್ಸ್ – 295 ಟಾರ್ಗೆಟ್.. 92 ರನ್ ಗೆ ಆಲೌಟ್!
ಪಾತಾಳಕ್ಕೆ ಪಾಕ್.. ವಿಂಡೀಸ್ ಇತಿಹಾಸ!

ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ವಿಂಡೀಸ್ ಪಡೆ 2-1 ಅಂತರದಿಂದ ಗೆದ್ದು ಬೀಗಿದೆ. ಅದ್ರಲ್ಲೂ ಮಂಗಳವಾರ ಟ್ರಿನಿಡಾಡ್‌ನಲ್ಲಿ ನಡೆದ ಮೂರನೇ ಹಾಗೂ ನಿರ್ಣಾಯಕ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಪಾಕಿಸ್ತಾನ ವಿರುದ್ಧ ಬರೋಬ್ಬರಿ 202 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಸೋಲಿನೊಂದಿಗೆ ಪಾಕ್ ಟೀಂ ವಿಂಡೀಸ್ ಸರಣಿಗೆ ಗುಡ್ ಬೈ ಹೇಳಿದ್ರೆ ಅತ್ತ ಪಿಸಿಬಿಗೆ ಮತ್ತೊಂದು ತಲೆ ಬಿಸಿ ಶುರುವಾಗಿದೆ.
ಇದನ್ನೂ ಓದಿ : ಟಿ-20 ಪಂದ್ಯಗಳನ್ನಷ್ಟೇ ಆಡ್ತಾರಂತೆ ಟಿಮ್ ಡೇವಿಡ್ – ಆಫರ್ ಕೊಟ್ರೂ ನಿರಾಕರಿಸಿದ್ದೇಕೆ RCB ಸ್ಟಾರ್?
ಕೊನೇ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವೆಸ್ಟ್ ಇಂಡೀಸ್ ಆರಂಭದಲ್ಲೇ ಸಂಕಷ್ಟಕ್ಕೆ ಸಿಲುಕಿತ್ತು. 31ನೇ ಓವರ್‌ನಲ್ಲಿ 4 ವಿಕೆಟ್‌ಗೆ 113 ರನ್ ಅಷ್ಟೇ ಗಳಿಸಿತು. ಹೀಗಾಗಿ 200 ಸ್ಕೋರ್ ಒಳಗೆ ಆಲೌಟ್ ಆಗಬಹುದು ಅನ್ನೋ ಅಂದಾಜಿತ್ತು. ಆದ್ರೆ ಶಾಯ್ ಹೋಪ್ ಎಲ್ಲರ ಲೆಕ್ಕಾಚಾರಗಳನ್ನ ಉಲ್ಟಾ ಮಾಡಿದ್ರು.
ಪಾಕ್ ಹೀನಾಯ ಸೋಲು!
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದ ಶಾಯಿ ಹೋಪ್
10 ಬೌಂಡರಿ ಮತ್ತು ಐದು ಸಿಕ್ಸರ್ ಗಳೊಂದಿಗೆ 120 ರನ್ ನಾಟೌಟ್
ರೋಸ್ಟನ್ ಚೇಸ್ ಅವ್ರ 36 ರನ್, ಜಸ್ಟಿನ್ ಗ್ರೀವ್ಸ್ 43 ರನ್ ಗಳಿಸಿದ್ರು
50 ಓವರ್ ಗಳಲ್ಲಿ 6 ವಿಕೆಟ್ ಗೆ 294 ರನ್ ಗಳಿಸಿದ ವಿಂಡೀಸ್ ತಂಡ
ಬಿಗ್ ಟಾರ್ಗೆಟ್ ಬೆನ್ನತ್ತಿದ ಪಾಕಿಸ್ತಾನ ಖಾತೆ ತೆರೆಯೋ ಮೊದ್ಲೇ ವಿಕೆಟ್
ಮೂರನೇ ಎಸೆತದಲ್ಲೇ ಒಂದು ವಿಕೆಟ್, ಒಂಬತ್ತು ಓವರ್ ಗಳಲ್ಲಿ 3 ವಿಕೆಟ್
ಪಾಕ್ ಪರ ಸಲ್ಮಾನ್ ಅಲಿ ಅಘ 30 ರನ್ ಗಳಿಸಿದ್ದೇ ಹೈಯೆಸ್ಟ್ ಸ್ಕೋರ್
ಪಾಕಿಸ್ತಾನವನ್ನು ಕೇವಲ 92 ರನ್‌ಗಳಿಗೆ ಆಲೌಟ್ ಮಾಡಿದ ವೆಸ್ಟ್ ಇಂಡೀಸ್
ಒಂದ್ಕಡೆ ಬ್ಯಾಟಿಂಗ್ನಲ್ಲಿ ಶಾಹಿ ಹೋಪ್ ಶತಕ ಬಾರಿಸಿ ತಂಡವನ್ನ 300ರ ಗಡಿಯತ್ತ ಸಾಗಿಸಿದ್ರೆ ಇತ್ತ ಬೌಲಿಂಗ್ ನಲ್ಲಿ ಜೇಡನ್ ಸೀಲ್ಸ್ ಹೊಸ ದಾಖಲೆ ಸೃಷ್ಟಿಸಿದ್ರು. ಈ ಪಂದ್ಯದಲ್ಲಿ ಮತ್ತೊಂದು ಹೈಲೆಟ್ ಅಂದ್ರೆ ವೆಸ್ಟ್ ಇಂಡೀಸ್‌ನ ವೇಗದ ಬೌಲರ್ ಜೇಡನ್ ಸೀಲ್ಸ್ ತಮ್ಮ ಅದ್ಭುತ ಬೌಲಿಂಗ್ ಪ್ರದರ್ಶನದೊಂದಿಗೆ ಡೇಲ್ ಸ್ಟೇನ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ. 7.2 ಓವರ್‌ಗಳನ್ನ ಬೌಲ್ ಂಆಡಿದ ಸೀಲ್ಸ್ ಕೇವಲ 18 ರನ್ಗಳನ್ನ ನೀಡಿ 6 ವಿಕೆಟ್ ಪಡೆದು ಪಾಕಿಸ್ತಾನವನ್ನು ಕೇವಲ 92 ರನ್‌ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾದ್ರು. ಹಾಗೇ ಸೀಲ್ಸ್ ಪಾಕಿಸ್ತಾನ ವಿರುದ್ಧ ಏಕದಿನ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರು. 2013 ರಲ್ಲಿ ಡೇಲ್ ಸ್ಟೇನ್ ಒಂಬತ್ತು ಓವರ್‌ಗಳಲ್ಲಿ 39 ರನ್ ನೀಡಿ 6 ವಿಕೆಟ್ ಪಡೆದಿದ್ದರು.
ಇನ್ನು ಪಾಕಿಸ್ತಾನ ವಿರುದ್ಧದ ಗೆದ್ದು ವಿಂಡೀಸ್ ತಂಡ ದಾಖಲೆ ಬರೆದಿದೆ. 1991ರ ಬಳಿಕ ಪಾಕ್ ವಿರುದ್ಧ ಏಕದಿನ ಸರಣಿ ಗೆದ್ದೇ ಇರಲಿಲ್ಲ. ಇದೀಗ 34 ವರ್ಷಗಳ ಬಳಿಕ ಪಾಕಿಸ್ತಾನದ ವಿರುದ್ಧ ವೆಸ್ಟ್ ಇಂಡೀಸ್‌ನ ಮೊದಲ ಏಕದಿನ ಸರಣಿ ಗೆಲುವು ಮತ್ತು ಏಕದಿನ ಇತಿಹಾಸದಲ್ಲಿ ಪಾಕಿಸ್ತಾನವನ್ನ ಅತೀ ಹೆಚ್ಚು ರನ್‌ಗಳ ಅಂತರದಲ್ಲಿ ಸೋಲಿಸಿದ ದಾಖಲೆ ಬರೆದಿದೆ. ಈ ಲಾರ್ಜ್ ಮಾರ್ಜಿನ್ ಸೋಲಿನಿಂದ ಪಾಕಿಸ್ತಾನ ಇದುವರೆಗೆ ಅನುಭವಿಸಿದ ಟಾಪ್ 10 ಏಕದಿನ ಸೋಲುಗಳಲ್ಲಿ ಒಂದಾಗಿದೆ. ಸೋ ಪಾಕಿಸ್ತಾನ ಅತೀ ಹೆಚ್ಚು ರನ್‌ಗಳ ಅಂತರದ ಸೋಲುಗಳನ್ನ ನೋಡ್ತಾ ಹೋಗೋಣ..
ಪಾಕಿಸ್ತಾನ ಹೀನಾಯ ಸೋಲು!
1) ಶ್ರೀಲಂಕಾ (2009) – 234 ರನ್ ಗಳಿಂದ ಸೋಲು
2) ಭಾರತ (2023) – 228 ರನ್ ಗಳಿಂದ ಸೋಲು
3) ಆಸ್ಟ್ರೇಲಿಯಾ (2002) – 224 ರನ್ ಗಳಿಂದ ಸೋಲು
4) ವೆಸ್ಟ್ ಇಂಡೀಸ್ (2025) – 202 ರನ್ ಗಳಿಂದ ಸೋಲು
5) ಇಂಗ್ಲೆಂಡ್ (1992) – 198 ರನ್ ಗಳಿಂದ ಸೋಲು
6) ನ್ಯೂಜಿಲೆಂಡ್ (2018) – 183 ರನ್ ಗಳಿಂದ ಸೋಲು
7) ಇಂಗ್ಲೆಂಡ್ (2016) – 169 ರನ್ ಗಳಿಂದ ಸೋಲು
8) ಶ್ರೀಲಂಕಾ (2015) – 165 ರನ್ ಗಳಿಂದ ಸೋಲು
9) ದಕ್ಷಿಣ ಆಫ್ರಿಕಾ (2007) – 164 ರ ನ್‌ಗಳಿಂದ ಸೋಲು
10) ದಕ್ಷಿಣ ಆಫ್ರಿಕಾ (1995) – 157 ರನ್ ಗಳಿಂದ ಸೋಲು

ನೋಡಿರಿ

