8 ತಂಡ.. ಕಪ್ ಗೆದ್ದಿದ್ದೇ 3 ಟೀಂ – ಭಾರತಕ್ಕೆ ಲಂಕನ್ನರೇ ವಿಲನ್!
ಏಷ್ಯಾಕಪ್ ನ ರೋಚಕ ಹಿಸ್ಟರಿ

ಏಷ್ಯಾಕಪ್ನ ಉದ್ಘಾಟನಾ ಪಂದ್ಯ ಸೆಪ್ಟೆಂಬರ್ 9ರಂದು ನಡೆಯಲಿದ್ದು ನೆಕ್ಸ್ಟ್ ಡೇ ಭಾರತ ಮತ್ತು ಯುಎಇ ಟೀಮ್ಗಳ ನಡುವೆ ಫೈಟ್ ನಡೆಯಲಿದೆ. ಭಾರತೀಯ ಟೈಮಿಂಗ್ಸ್ ಪ್ರಕಾರ ರಾತ್ರಿ 8ಗಂಟೆಗೆ ಮ್ಯಾಚ್ ಸ್ಟಾರ್ಟ್ ಆಗುತ್ತೆ. ದುಬೈನ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ಮ್ಯಾಚ್ ನಡೆಯಲಿದೆ. ಈ ಮ್ಯಾಚ್ ಭಾರತಕ್ಕೆ ಒನ್ ಸೈಡೆಡ್ ರಿಸಲ್ಟ್ ಥರನೇ ಇರುತ್ತೆ. ನಂಬರ್ಗೋಸ್ಕರ್ ಮ್ಯಾಚ್ ಆಡ್ಬೇಕಷ್ಟೇ. ಯಾಕಂದ್ರೆ ಮೆನ್ ಇನ್ ಬ್ಲ್ಯೂ ತಂಡ ಏಷ್ಯಾಕಪ್ನ ಚೊಚ್ಚಲ ಆವೃತ್ತಿಯಿಂದ ಹಿಡಿದು ಈವರೆಗೂ ಸಾಲಿಡ್ ಪ್ರದರ್ಶನ ನೀಡಿದೆ. ಮೊದಲ ಸೀಸನ್ನಲ್ಲೇ ಟೈಟಲ್ ಗೆದ್ದಿದ್ರ ಜೊತೆಗೆ ಈಗ ಹಾಲಿ ಚಾಂಪಿಯನ್ ಕೂಡ ಆಗಿದೆ.
16 ಆವೃತ್ತಿಗಳಲ್ಲಿ ಭಾರತವೇ 8 ಬಾರಿ ಚಾಂಪಿಯನ್!
ಏಷ್ಯಾಕಪ್ ಟೂರ್ನಿಯ ಸ್ಪೆಷಾಲಿಟಿ ಏನಂದ್ರೆ ಏಷ್ಯನ್ ರಾಷ್ಟ್ರಗಳಷ್ಟೇ ಆಡೋದು. ಆರಂಭದಲ್ಲಿ 3 ತಂಡಗಳಿಂದ ಶುರುವಾದ ಜರ್ನಿ ಈಗ 8 ತಂಡಗಳವರೆಗೆ ಬಂದು ನಿಂತಿದೆ. ಅಷ್ಟೇ ಈ ಟೂರ್ನಿಯಲ್ಲಿ ಏಕದಿನ ಹಾಗೂ ಟಿ-20 ಮಾದರಿಯಲ್ಲಿ ಪಂದ್ಯಗಳನ್ನ ಆಯೋಜನೆ ಮಾಡಲಾಗುತ್ತೆ. ಅಪ್ ಕಮಿಂಟ್ ಐಸಿಸಿ ಈವೆಂಟ್ನ ಗಮನದಲ್ಲಿ ಇಟ್ಕೊಂಡು ಇಲ್ಲಿ ಫಾರ್ಮೆಟ್ ಫಿಕ್ಸ್ ಮಾಡಲಾಗುತ್ತೆ. ಹೀಗಾಗಿ 14 ಏಕದಿನ ಮಾದರಿ ಮತ್ತು 2 ಬಾರಿ ಟಿ-20ಐ ಮಾದರಿಯಲ್ಲಿ ಟೂರ್ನಿ ಆಯೋಜನೆ ಮಾಡಲಾಗಿದೆ. ಈ ಸಲ ಟಿ-20 ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಏಷ್ಯನ್ ಕ್ರಿಕೆಟ್ ಸಮಿತಿಯಿಂದ ಮೊದಲ ಏಷ್ಯಾಕಪ್ ಆವೃತ್ತಿಯನ್ನು 1984 ರಲ್ಲಿ ನಡೆಸಲಾಯ್ತು. ಆಗ ಭಾರತ, ಪಾಕಿಸ್ತಾನ ಮತ್ತು ಶ್ರೀಲಂಕಾ ತಂಡಗಳು ಮಾತ್ರವೇ ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದವು. ಆಗೆಲ್ಲಾ ಪಂದ್ಯಾವಳಿಯನ್ನು ರೌಂಡ್ ರಾಬಿನ್ ಆಗಿ ನಡೆಸಲಾಯಿತು. ಅಂದ್ರೆ ಪ್ರತಿ ತಂಡವು ಎರಡು ಪಂದ್ಯಗಳನ್ನು ಆಡಿತು. ಇಡೀ ಟೂರ್ನಿಯಲ್ಲಿ ಕೇವಲ ಮೂರು ಪಂದ್ಯಗಳಷ್ಟೇ ಇದ್ದದ್ದು. ಹಾಗೇ ಫೈನಲ್ ಮ್ಯಾಚ್ ಅನ್ನೋದೂ ಇರಲಿಲ್ಲ. ಭಾರತ ತಂಡ ಲಂಕಾ ಮತ್ತು ಪಾಕ್ ವಿರುದ್ಧ ಎರಡೂ ಪಂದ್ಯಗಳನ್ನ ಗೆದ್ದ ಕಾರಣ ಭಾರತವೇ ಚೊಚ್ಚಲ ಚಾಂಪಿಯನ್ ಆಗಿತ್ತು. ಇನ್ನು ಲಂಕಾ ಪಾಕ್ ವಿರುದ್ಧವಷ್ಟೇ ಗೆಲುವು ಸಾಧಿಸಿ ಸೆಕಂಡ್ ಪ್ಲೇಸ್ನಲ್ಲಿದ್ರೆ ಪಾಕಿಸ್ತಾನ ಎರಡೂ ಪಂದ್ಯಗಳನ್ನೂ ಸೋತು ಮೂರನೇ ಸ್ಥಾನ ಪಡೆದಿತ್ತು. ಇನ್ನು ಎರಡನೇ ಆವೃತ್ತಿ 1986ರಲ್ಲಿ ನಡೆದಿದ್ದು ಶ್ರೀಲಂಕಾ ಚಾಂಪಿಯನ್ ಆಗಿತ್ತು. ಹೀಗೆ 2023ರವರೆಗೆ ಭಾರತ 8 ಬಾರಿ ಚಾಂಪಿಯನ್ ಆದ್ರೆ ಶ್ರೀಲಂಕಾ 6 ಬಾರಿ ಟೈಟಲ್ ಗೆದ್ದಿದೆ. ಪಾಕಿಸ್ತಾನ 2 ಬಾರಿ ಟ್ರೋಫಿ ಗೆದ್ದಿದೆ. ಹೀಗೆ ಟೋಟಲ್ಲಾಗಿ 8 ಟೀಂ ಈ ಸಲ ಕಣಕ್ಕಿಳಿದ್ರೂ ಟ್ರೋಫಿ ಗೆದ್ದಿರೋದು ಮಾತ್ರ ಮೂರೇ ತಂಡಗಳು. ಹೀಗಿದ್ರೂ ಏಷ್ಯಾಕಪ್ನಲ್ಲಿ ಸಾಕಷ್ಟು ಇಂಡಿವಿಶ್ಯುಯಲ್ ರೆಕಾರ್ಡ್ಸ್ ಕೂಡ ಇದೆ.
ಏಷ್ಯಾಕಪ್ ಸೂಪರ್ ಸ್ಟಾರ್ಸ್!
2012ರಲ್ಲಿ ಪಾಕಿಸ್ತಾನ ವಿರುದ್ಧ ವಿರಾಟ್ ಕೊಹ್ಲಿ 183 ರನ್
2008 ರಲ್ಲಿ ಭಾರತದ ಎದುರು ಹಾಂಗ್ ಕಾಂಗ್ 256 ರನ್ ಗಳ ಸೋಲು
ರೋಹಿತ್ ಶರ್ಮಾ 40 ಸಿಕ್ಸರ್ಗಳನ್ನು ಬಾರಿಸಿದ್ದು ಮತ್ಯಾರೂ ಸಾಧ್ಯವಾಗಿಲ್ಲ
ಸನತ್ ಜಯಸೂರ್ಯ ಐದು ಪಂದ್ಯಗಳಲ್ಲಿ 378 ರನ್ ಗಳನ್ನು ಗಳಿಸಿದರು
ಜಯಸೂರ್ಯ ಏಷ್ಯಾ ಕಪ್ ಇತಿಹಾಸದಲ್ಲಿ ಅವರ ಆರು ಶತಕಗಳು ದಾಖಲೆ
ಪಾಕಿಸ್ತಾನ ಒಂದೇ ಇನ್ನಿಂಗ್ಸ್ನಲ್ಲಿ 38 ಹೆಚ್ಚುವರಿ ರನ್ ಗಳನ್ನು ಬಿಟ್ಟುಕೊಟ್ಟಿದೆ
ಮುತ್ತಯ್ಯ ಮುರಳೀಧರನ್ ಏಷ್ಯಾ ಕಪ್ ಇತಿಹಾಸದಲ್ಲಿ 30 ವಿಕೆಟ್
ಯಾರ್ಕರ್ ಕಿಂಗ್ ಲಸಿತ್ ಮಾಲಿಂಗ ಮೂರು ಬಾರಿ ಐದು ವಿಕೆಟ್ ಗೊಂಚಲು
ಅಜಂತಾ ಮೆಂಡಿಸ್ 2008ರಲ್ಲಿ ಭಾರತದ ವಿರುದ್ಧ 13 ರನ್ಗಳಲ್ಲಿ 6 ವಿಕೆಟ್
ಏಷ್ಯಾಕಪ್ ಇಲ್ಲಿಯವರೆಗೆ 16 ಆವೃತ್ತಿಗಳನ್ನು ಪೂರ್ಣಗೊಳಿಸಿದ್ದು, ಟೀಂ ಇಂಡಿಯಾ ಅತ್ಯಂತ ಯಶಸ್ವಿ ತಂಡವಾಗಿದೆ. ಏಷ್ಯಾಕಪ್ನಲ್ಲಿ ಹೆಚ್ಚು ಪ್ರಶಸ್ತಿಗಳನ್ನು ಗೆದ್ದ ತಂಡ ಭಾರತ ಆಗಿದೆ. ಹಾಗೇ ಲಂಕಾ ಸೆಕೆಂಡ್ ಪ್ಲೇಸ್ನಲ್ಲಿದ್ದು ಭಾರತಕ್ಕೆ ಸದಾ ಪೈಪೋಟಿ ನೀಡುತ್ತಲೇ ಬಂದಿದೆ. ಏಷ್ಯಾಕಪ್ನಲ್ಲಿ ಉಭಯ ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು, ಭಾರತ 12 ಪಂದ್ಯ ಗೆದ್ರೆ ಶ್ರೀಲಂಕಾ 11 ಪಂದ್ಯಗಳನ್ನ ಗೆದ್ದು ಬೀಗಿದೆ. ಹಾಗೇ ಶ್ರೀಲಂಕಾ 7 ಬಾರಿ ರನ್ನರ್ ಅಪ್ ಆಗಿದ್ದು ಭಾರತ 3 ಬಾರಿ ರನ್ನರ್ ಅಪ್ ಆಗಿದೆ. ಈ ಬಾರಿಯ ಟೂರ್ನಿಯಲ್ಲಿ 20 ದಿನಗಳ ಕಾಲ 8 ದೇಶಗಳು ಒಟ್ಟು 19 ಪಂದ್ಯಗಳನ್ನು ಆಡಲಿವೆ. ಉದ್ಘಾಟನಾ ಪಂದ್ಯ ಅಫ್ಘಾನಿಸ್ತಾನ ಮತ್ತು ಹಾಂಕಾಂಗ್ ಮಧ್ಯೆ ನಡೆದರೆ ಸೆ.28ರಂದು ಫೈನಲ್ ಪಂದ್ಯ ನಡೆಯಲಿದೆ.

ನೋಡಿರಿ

