ಮಾನಸ ಬಾಯಲ್ಲ ಬಚ್ಚಲು! – ಬಿಗ್ ಬಾಸ್ ಗೆ ವೇಸ್ಟ್ ಸ್ಪರ್ಧಿನಾ?
ತುಕಾಲಿ ಪತ್ನಿ ಫುಲ್ ಟ್ರೋಲ್

ಮಾನಸ ಬಾಯಲ್ಲ ಬಚ್ಚಲು! – ಬಿಗ್ ಬಾಸ್ ಗೆ ವೇಸ್ಟ್ ಸ್ಪರ್ಧಿನಾ?ತುಕಾಲಿ ಪತ್ನಿ ಫುಲ್ ಟ್ರೋಲ್

ಬಿಗ್ ಬಾಸ್ ಕನ್ನಡ ಸೀಸನ್ 11 ಈ ಭಾರಿ ಮೊದಲ ದಿನದಿಂದಲೇ ಜೋರಾಗಿ ಸದ್ದು ಮಾಡ್ತಾ ಇದೆ.. ಆರಂಭದಲ್ಲೇ ವಿಭಿನ್ನ ವ್ಯಕ್ತಿತ್ವಗಳ ಅನಾವರಣ ಆಗಿದೆ. ಇದೀಗ ಇದೀಗ ತುಕಾಲಿ ಸಂತು ಅವರ ಪತ್ನಿ ಮಾನಸ ವಿರುದ್ಧ ವೀಕ್ಷಕರು ಅಸಮಧಾನ ಹೊರ ಹಾಕಿದ್ದಾರೆ.. ಈಕೆ ಬದಲು ಬೇರ್ಯಾರು ನಿಮ್ಗೆ ಸಿಕ್ಕಿಲ್ವಾ? ಯಾವ ಕೆಟಗರಿಯಲ್ಲಿ ಮಾನಸಳನ್ನ ಸೆಲೆಕ್ಟ್ ಮಾಡಿದ್ರಿ.. ಈಕೆಯನ್ನ ಮನೆಯಿಂದ ಆಚೆ ಹಾಕಿ.. ಬೇರೆಯವರಿಗೆ ಅವಕಾಶ ಕೊಡಿ ಅಂತಿದ್ದಾರೆ ಬಿಗ್ ಬಾಸ್ ಫ್ಯಾನ್ಸ್.. ಅಷ್ಟೇ ಅಲ್ಲ ಮಾನಸ ಈಗ ಟ್ರೋಲ್ ಪೇಜ್ ಗಳಿಗೂ ಆಹಾರ ಆಗಿದ್ದಾರೆ..  ಅಷ್ಟಕ್ಕೂ ಮಾನಸ ವಿರುದ್ಧ ಅಸಮಧಾನ ಭುಗಿಲೆದ್ದಿದ್ದು ಯಾಕೆ? ಜನ ಅಷ್ಟೊಂದು ಹೇಟ್ ಮಾಡಲು ಕಾರಣ ಏನು? ಈ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಬಿಪಿಎಲ್ ಕಾರ್ಡ್‌ದಾರರಿಗೆ ಸರ್ಕಾರದಿಂದ ಶಾಕ್ – 3.63 ಲಕ್ಷ ಕಾರ್ಡ್ ರದ್ದು ಮಾಡಿದ ರಾಜ್ಯ ಸರ್ಕಾರ!

ಬಿಗ್ ಬಾಸ್ ಕನ್ನಡ ಸೀಸನ್ 10 ನಲ್ಲಿ ತುಕಾಲಿ ಸಂತು ಪತ್ನಿ ಮಾನಸ ಜನರಿಗೆ ಪರಿಯವಾಗಿದ್ದು.. ತುಕಾಲಿ ಸಂತೋಷ್ ಅವರು ಬಿಗ್ ಬಾಸ್ ಸೀಸನ್ 10ರಲ್ಲಿ ಭಾಗಿಯಾಗಿ ಸಖತ್ ಆಟ ಆಡಿದ್ದರು. ತುಕಾಲಿ ಸಂತೋಷ್ ಹಾಗೂ ವರ್ತೂರ್ ಸಂತೋಷ್ ಜೋಡಿಗೆ ಸಾಕಷ್ಟು ಜನರಿಂದ ಮೆಚ್ಚುಗೆ ವ್ಯಕ್ತವಾಗಿತ್ತು. ಆ ಸೀಸನ್ ನಲ್ಲಿ ವರ್ತೂರ್ ಸಂತೋಷ್ ಅನ್ನ ಮಾನಸ ಸರಿಯಾಗೇ ಕಾಲೆಳೆದಿದ್ರು.. ಅಟ್ಟಿಸ್ಕೊಂಡು ಹೋಗಿ ಕೋಲಿನಲ್ಲೂ ಹೊಡಿದಿದ್ರು.. ಇದು ವೀಕ್ಷಕರಿಗೆ ಸಖತ್ ಮನರಂಜನೆ ಕೊಟ್ಟಿತ್ತು. ಸೀಸನ್ 10 ಮುಗಿಯುವುದರೊಳಗೆ ವೀಕ್ಷಕರೇ ಮುಂದಿನ ಸೀಸನ್ಗೆ ಮಾನಸ ಅವರು ಕೂಡ ಬಿಗ್ಬಾಸ್ಗೆ ಬರಬೇಕು ಅಂತ ಆಸೆ ಪಟ್ಟಿದ್ದರು. ಅದರಂತೆ ಈಗ ಮಾನಸಾ ಎಂಟ್ರಿ ಕೊಟ್ಟಿದ್ದಾರೆ. ಆದರೀಗ ಮಾನಸ ಬಗ್ಗೆ ನೆಗೆಟಿವ್ ಮಾತುಗಳೇ ಕೇಳಿ ಬರುತ್ತಿವೆ. ಬರೀ ಕಿರುಚಾಟ, ಗಲಾಟೆ ಬಿಟ್ಟು ಕಾಮಿಡಿ ಮಾಡುವುದರಲ್ಲಿ ಗಮನವೇ ಹರಿಸುತ್ತಿಲ್ಲ ಎಂದು ವೀಕ್ಷಕರು ಮಾನಸ ಬಗ್ಗೆ ಕಮೆಂಟ್ ಮಾಡುತ್ತಿದ್ದಾರೆ.

ಈ ಬಾರಿ ಮಾನಸ ಕಾಮಿಡಿ  ವಿಭಾಗದಿಂದ ಸೆಲೆಕ್ಟ್ ಆಗಿದ್ದಾರೆ. ಬಿಗ್ ಬಾಸ್ ಮನೆಗೆ ತುಕಾಲಿ ಪತ್ನಿ ಕಾಲಿಡುತ್ತಿದ್ದಂತೆ ಈ ಬಾರಿ ಭರ್ಜರಿ ಮನರಂಜನೆ ಫಿಕ್ಸ್ ಅಂತ ವೀಕ್ಷಕರು ಅಭಿಪ್ರಾಯಪಟ್ಟಿದ್ರು.. ಆದ್ರೆ ವೀಕ್ಷಕರ ನಿರೀಕ್ಷೆ ಸುಳ್ಳಾಗಿದೆ.. ಮಾನಸ ಮನರಂಜನೆಗಿಂತ ರಂಪಾಟ ಜೋರಾಗೆ ಇದೆ.. ಸಹ ಸ್ಪರ್ಧಿಗಳ ಮೇಲೆ ಬಾಯಿಗೆ ಬಂದಂತೆ ಬೈತಾ ಇದ್ದಾರೆ.. ಇದೀಗ ವೀಕ್ಷಕರು ಇದು ಬಾಯಿ ಅಲ್ಲ ಬಚ್ಚಲು ಕಾಮೆಂಟ್ ಹಾಕ್ತಿದ್ದಾರೆ. ಇನ್ನೂ ಕೆಲವರು ತುಕಾಲಿ ಅವರಿಗೆ ಈಗಾಗಲೇ ಬಿಗ್ ಬಾಸ್ ಅವಕಾಶ ಕೊಟ್ಟಿದ್ದಾರೆ. ಮತ್ತೆ ಅವರ ಹೆಂಡತಿಗೇ ಏಕೆ ಚಾನ್ಸ್ ಕೊಡಬೇಕು? ಬೇರೆ ಯಾರು ಸಿಕ್ಕಿಲ್ವಾ? ಎಂದು ಕಮೆಂಟ್ ಮಾಡಿದ್ದಾರೆ.

ಮಾನಸಾ ಕಿರುತೆರೆಯಲ್ಲೇನು ಕಲಾವಿದೆಯಾಗಿ ಗುರುತಿಸಿಕೊಂಡವರಲ್ಲ. ತುಕಾಲಿ ಪತ್ನಿಯಾಗಿ ಕಿರುತೆರೆ ಮೇಲೆ ಕೇವಲ ನಿಮಿಷಗಳ ಅವಧಿಯಲ್ಲಿ ಕಾಮಿಡಿ ಮಾಡಿದ್ದರು. ಅದೇ ಆಧಾರದ ಮೇಲೆ ಬಿಗ್ಬಾಸ್ ಗೂ ಆಫರ್ ಕೊಟ್ಟಿದ್ದು ಎಷ್ಟು ಸರಿ ಎಂಬ ಮಾತು ಕೇಳಿಬಂದಿತ್ತು. ಬೇರೆ ಯಾರೂ ಸಿಕ್ಕಿಲ್ವಾ, ತುಕಾಲಿ ಮತ್ತು ಮಾನಸರನ್ನ ದತ್ತು ತಗೊಂಡ್ರಾ ಎಂಬ ಟೀಕೆ ಕೂಡಾ ಕೇಳಿಬರ್ತಿತ್ತು. ಅದಕ್ಕೆ ಸರಿಯಾಗಿ ಮಾನಸ ಕೂಡಾ ದೊಡ್ಮನೆಯಲ್ಲಿ ಯಾಕೆ ಬಂದೆ ಅನ್ನೋ ಕನಿಷ್ಠ ವಿಚಾರವನ್ನ ಮರೆತುಹೋಗಿದ್ದಾರೆ. ಜಗಳ ನಡೆದರೆ ಕಾಲ್ಕೆರೆದು ಜಗಳ ಮಾಡ್ತಾರೆ. ಅದು ಕೂಡಾ ಕಿರುಚಾಡೋದು ನೋಡೋದೇ ವೀಕ್ಷಕರಿಗೂ ಕಿರಿಕಿರಿಯಾಗ್ತಿದೆ. ಈ ಬಗ್ಗೆ ಡ್ರೈವರ್ ಒಬ್ರು ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ.. ತುಕಾಲಿ ಸಂತು ದಯವಿಟ್ಟು ನಿಮ್ಮ ಹೆಂಡ್ತಿ ಮಾನಸ ಅವರನ್ನ ಬಿಗ್ ಬಾಸ್ ಮನೆಯಿಂದ ಆಚೆ ಕರ್ಕೊಂಡು ಬನ್ನಿ.. ಇಲ್ದಿದ್ರೆ ನಿಮ್ಮ ಮರ್ಯಾದೆ ಹರಾಜು ಹಾಕಿ ಬಿಡ್ತಾರೆ ಅಂತಾ ಹೇಳಿದ್ದಾರೆ..

ಇನ್ನು ಮಾನಸ ಧರ್ಮ ವಿಚಾರದಲ್ಲಿ ಜಗಳ ಆಗೋವಾಗ ಮಾಂಗಲ್ಯ ಸರವನ್ನ ತೋರ್ಸಿ, ಅದ್ರ ಮೇಲೂ ಆಣೆ ಮಾಡಿದ್ರು.. ಇದು ಕೂಡ ಸಿಕ್ಕಾಪಟ್ಟೆ ಟ್ರೋಲ್ ಆಗ್ತಿದೆ.. ಇದ್ರೂ ಕೂಡ ಮಾನಸ ಗೂ ಮೈನಸ್ ಆಗಿದೆ.  ಇನ್ನು ಮಾನಸ  ವಿದೌಟ್  ಮೇಕಪ್  ನ ಕೆಲ ಫೋಟೋಸ್ ಶೇರ್ ಮಾಡಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗ್ತಿದೆ. ಕ್ರಶ್ ಆಫ್ ಕರ್ನಾಟಕ ಅಂತಾ ಟ್ರೋಲ್ ಪೇಜ್ ಗಳಲ್ಲಿ ಹಾಕಲಾಗಿದೆ.. ಬಿಗ್ ಬಾಸ್ ಅಂದ್ರೆ ಕಿತ್ತಾಟ, ಕಿರುಚಾಟ ಇರಲಿ, ಆದ್ರೆ, ಅದು ಕೂಡಾ ಒಂದು ರೀತಿ ಎಂಟರ್ಟೈನ್ ಮೆಂಟ್ ರೀತಿ ಇರಬೇಕು. ಆದ್ರೆ, ಬಿಗ್ ಬಾಸ್ ನಲ್ಲಿ ಒಂಥರಾ ಬೀದಿಜಗಳ ಥರಾ ಕೆಲವರು ಬೊಬ್ಬೆ ಹಾಕ್ತಾರೆ. ಅದ್ರಲ್ಲೂ ಮಾನಸ ಆಡೋ ಮಾತು, ಇರೋ ರೀತಿ ಬಿಗ್ ಬಾಸ್ ಮನೆ ಯಾವುದು ಮ್ಯಾಚ್ ಆಗೋದೇ ಇಲ್ಲ ಅಂತಿದ್ದಾರೆ ವೀಕ್ಷಕರು. ಮಾನಸ ಆಗಿರುವಷ್ಟು ಟ್ರೋಲ್ ಬಹುಶಃ ಇದುವರೆಗೂ ಯಾರೂ ಆಗಿಲ್ಲ ಅನ್ಸುತ್ತೆ. ಇನ್ನಾದರೂ ಈ ಟ್ರೋಲ್, ಈ ಟೀಕೆ, ಈ ರೀತಿಯ ಕೆಟ್ಟ ಕಾಮೆಂಟ್ಸ್ ಮಾನಸ ಕಿವಿಗೂ ಬೀಳಲಿ, ಮಾನಸ ಹತ್ರ ಟ್ಯಾಲೆಂಟ್ ಇರೋದೇ ಆದ್ರೆ ವೀಕ್ಷಕರನ್ನ ರಂಜಿಸಲಿ, ಬಿಗ್ ಬಾಸ್ ಅನ್ನೋ ರಿಯಾಲಿಟಿ ಶೋಗೆ ಹೊಸ ಅರ್ಥ ಬರಲಿ ಅನ್ನೋದೇ ನಮ್ಮ ಆಶಯ.

Shwetha M

Leave a Reply

Your email address will not be published. Required fields are marked *