ಮಲ್ಲಮ್ಮ ಯಾಕೋ ಮೊದಲಿನಂತಿಲ್ಲ! – ಮಲ್ಲಮ್ಮ ಮೇಲೂ ಅಸಮಧಾನ ಹೊರ ಹಾಕಿದ ಧ್ರುವಂತ್!

ಬಿಗ್‌ಬಾಸ್ ಕನ್ನಡ ಸೀಸನ್ 12 ಫಿನಾಲೆಗೆ ಕೌಂಟ್‌ಡೌನ್ ಶುರುವಾಗಿದೆ. ಈಗಾಗಲೇ ರಾಶಿಕಾ ಎಲಿಮಿನೇಟ್ ಆಗಿದ್ದು, ಈ ವಾರ ಮಿಡ್‌ವೀಕ್ ಎಲಿಮಿನೇಷನ್ ನಡೆಯಲಿದೆ ಎಂದು ಹೇಳಲಾಗ್ತಿದೆ. ಇವೆಲ್ಲದ್ರ ಮಧ್ಯೆ ಮಲ್ಲಮ್ಮ ದೊಡ್ಮನೆಗೆ ಮತ್ತೆ ಎಂಟ್ರಿಕೊಟ್ಟಿದ್ದಾರೆ. ಮಲ್ಲಮ್ಮ ಎಂಟ್ರಿಯಿಂದ ಮನೆ ಮಂದಿ ಖುಷಿಯಾದ್ರೆ, ಧ್ರುವಂತ್ ಮಾತ್ರ ಫುಲ್ ಉರ್ಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೆ ನರಿ ಬುದ್ದಿ ತೋರಿಸಿದ ಪಾಕ್! – ಗಡಿಯಲ್ಲಿ ಡ್ರೋನ್ ಹಾರಿಸಿದ ಶತ್ರು ರಾಷ್ಟ್ರ!
ಬಿಗ್‌ಬಾಸ್ ಮನೆಗೆ ಮಲ್ಲಮ್ಮ ಮತ್ತೆ ಬಂದಿದ್ದಾರೆ. ಮಲ್ಲಮ್ಮ ಬಂದಿರೋದನ್ನ ನೋಡಿ ಮನೆಮಂದಿ ಖುಷಿಯಾಗಿದ್ದಾರೆ. ಆದ್ರೆ ಮಲ್ಲಮ್ಮ ಗಿಲ್ಲಿ ಜೊತೆ ಕ್ಲೋಸ್ ಆಗಿರೋದನ್ನ ನೋಡಿ ಧ್ರುವಂತ್ ಉರ್ಕೋಂಡಿದ್ದಾರೆ. ಅಷ್ಟೇ ಅಲ್ಲ ಮಲ್ಲಮ್ಮ ಬಗ್ಗೆ ಧ್ರುವಂತ್ ಅಶ್ವಿನಿ ಜೊತೆ ಮಾತನಾಡುತ್ತ ಅಸಮಧಾನ ಹೊರ ಹಾಕಿದ್ದಾರೆ. ಇದ್ರ ಪ್ರೋಮೋ ರಿಲೀಸ್ ಆಗಿದೆ.
ಪ್ರೋಮೋದಲ್ಲಿ ಮಲ್ಲಮ್ಮ ಸಖತ್ ಎಂಟ್ರಿ ಕೊಟ್ಟಿದ್ದಾರೆ. ಬಂದವರೇ ಗಿಲ್ಲಿ ಮಾತನಾಡಿಸಲ್ವ? ಎಂದು ಕೇಳಿದ್ದಾರೆ. ತುಂಬಾ ಬ್ಯೂಟಿಫುಲ್ ಆಗಿದಿಯಾ, ಹೊರಗಡೆ ಫ್ಯಾನ್ಸ್ ಫಾಲೋವರ್ಸ್ ಜಾಸ್ತಿನಾ? ಅಂತ ಕೇಳಿದ್ದಾರೆ ಗಿಲ್ಲಿ. ಅದಕ್ಕೆ ಮಲ್ಲಮ್ಮ ಇದ್ದವರು ನಂದೆ ಹವಾ ಎಂದಿದ್ದಾರೆ. ಅದೇ ಹೊತ್ತಿಗೆ ಧ್ರುವಂತ್ ಅವರು ಮುಂದೆ ಬಂದು ಮಲ್ಲಮ್ಮ ಅವರೇ ನಿಮ್ಮನ್ನ ತುಂಬಾ ಮಿಸ್ ಮಾಡಿಕೊಂಡೆ. ನೀವು ಹೋದ ಮೇಲೆ ನನಗೆ ಯಾರು ಜೋಡಿನೇ ಇರಲಿಲ್ಲ ಎಂದಿದ್ದಾರೆ. ಆದರೆ ಮಲ್ಲಮ್ಮ ಯಾವುದಕ್ಕೂ ಅಷ್ಟಾಗಿ ಪ್ರತಿಕ್ರಿಯೆ ನೀಡಿಲ್ಲ. ಇದಾದ ಬಳಿಕ ಧ್ರುವಂತ್ ಅಶ್ವಿನಿ ಅವರ ಬಳಿ ಮಾತನಾಡಿ, ಮಲ್ಲಮ್ಮ ಮುಂಚೆ ಥರ ಕ್ಲೋಸ್‌ನೆಸ್ ಇಲ್ಲ ಎಂದಿದ್ದಾರೆ. ಅದಕ್ಕೆ ಅಶ್ವಿನಿ ಇದ್ದವರು ಇರಲಿ ನನಗೆ ನೀವು, ನಿಮಗೆ ನಾನು ಎಂದಿದ್ದಾರೆ.
ಅಂದ್ಹಾಗೆ ಬಿಗ್ ಬಾಸ್ ಶುರುವಾದಾಗಿನಿಂದ ಮಲ್ಲಮ್ಮ ಜೊತೆ ಧ್ರುವಂತ್‌ಸಖತ್ ಕ್ಲೋಸ್ ಇದ್ದರು. ಆದರೀಗ ಎಲ್ಲವೂ ಬದಲಾದಂತಿದೆ. ಮಲ್ಲಮ್ಮ ಗಿಲ್ಲಿಯನ್ನ ಮಾತನಾಡಿಸಲು ಹೋಗಿದ್ರು ಧ್ರುವಂತ್‌ಗೆ ಇಷ್ಟ ಆಗಿಲ್ಲ. ಇದೀಗ ಪ್ರೋಮೋ ನೋಡಿದ ವೀಕ್ಷಕರು ಧ್ರುವಂತ್ ಇನ್ನೊಂದು ಮುಖ ಮಲ್ಲಮ್ಮಗೆ ಗೊತ್ತಾಗಿರ್ಬೇಕು ಅದಕ್ಕೆ ಅವರನ್ನ ಅವಾಯ್ಡ್ ಮಾಡಿದ್ದಾರೆ ಎಂದು ಕಮೆಂಟ್ ಮಾಡ್ತಿದ್ದಾರೆ.
ಇನ್ನು ನಾಮಿನೇಟ್ ಆಗಿದ್ದ ಗಿಲ್ಲಿ, ಕಾವ್ಯಾ, ರಾಶಿಕಾ, ಧ್ರುವಂತ್, ರಘು, ರಕ್ಷಿತಾ, ಅವರುಗಳಲ್ಲಿ ಕೊನೆಯಲ್ಲಿ ಉಳಿದುಕೊಂಡಿದ್ದರು ರಘು ಮತ್ತು ರಾಶಿಕಾ.ಈ ಇಬ್ಬರಲ್ಲಿ ರಾಶಿಕಾ ಅವರು ಮನೆಯಿಂದ ಹೊರಗೆ ಹೋಗಿದ್ದಾರೆ. ಆ ಮೂಲಕ ಫಿನಾಲೆ ಎಂಟ್ರಿಯ ಹೊಸ್ತಿಲಲ್ಲಿ ಮನೆಯಿಂದ ಹೊರಗೆ ಹೋದಂತಾಗಿದೆ. ಪ್ರಸ್ತುತ ಮನೆಯಲ್ಲಿ ಅಶ್ವಿನಿ, ಧನುಶ್, ಗಿಲ್ಲಿ, ಕಾವ್ಯಾ, ಧ್ರುವಂತ್, ರಕ್ಷಿತಾ, ರಘು ಅವರುಗಳು ಮಾತ್ರವೇ ಉಳಿದಿದ್ದು, ಈ ಎಲ್ಲರೂ ಫಿನಾಲೆ ಸ್ಪರ್ಧಿಗಳಾಗಿದ್ದಾರೆ.

ನೋಡಿರಿ

