ಲಕ್ಕೇ ಇಲ್ಲ ಎನ್ನುತ್ತಿದ್ದರಿಗೇ ಒಲಿದು ಬಂತು ಅದೃಷ್ಟ! – ಈ ವಾರದ ಕ್ಯಾಪ್ಟನ್ ಧನುಷ್!‌

ಲಕ್ಕೇ ಇಲ್ಲ ಎನ್ನುತ್ತಿದ್ದರಿಗೇ ಒಲಿದು ಬಂತು ಅದೃಷ್ಟ! – ಈ ವಾರದ ಕ್ಯಾಪ್ಟನ್ ಧನುಷ್!‌

ಬಿಗ್‌ ಬಾಸ್‌ ಕನ್ನಡ ಸೀಸನ್‌ 12ನ ರೋಚಕತೆಯಿಂದ ಕೂಡಿದೆ. ಈ ಸೀಸನ್‌ನಲ್ಲಿ ಮ್ಯೂಟೆಂಟ್ ರಘು   ಮೊದಲ ಕ್ಯಾಪ್ಟನ್ ಆದವರು. ಸಿಕ್ಕ ಅವಕಾಶವನ್ನ ಚೆನ್ನಾಗಿ ಬಳಸಿಕೊಂಡ ರಘು ನಾಯಕತ್ವವನ್ನ ಚೆನ್ನಾಗಿ ನಿಭಾಯಿಸಿದ್ದಾರೆ. ಇದೀಗ ಎರಡನೇ ಕ್ಯಾಪ್ಟನ್‌ ಆಯ್ಕೆ ಆಗಿದೆ. ಲಕ್‌ ಇಲ್ಲ ಇಲ್ಲ ಅಂತ ಸದಾ ಹೇಳುತ್ತಿದ್ದ ಧನುಷ್‌ಗೆ  ಅದೃಷ್ಟ ಲಕ್ಷ್ಮೀ ಒಲಿದಿದ್ದಾಳೆ. ಎರಡನೇ ಕ್ಯಾಪ್ಟನ್‌ ಆಗಿ ಧನುಷ್‌ ಅವರು ಹೊರಹೊಮ್ಮಿದ್ದಾರೆ.

ಇದನ್ನೂ ಓದಿ: ರಾಶಿಕಾ, ಅಶ್ವಿನಿ ಪ್ಲ್ಯಾನ್‌ ಠುಸ್!‌ – ಈ ವಾರದ ಕಳಪೆ ಧ್ರುವಂತ್!

ಈ ವಾರ ಬಿಗ್‌ ಬಾಸ್‌ ಮನೆ ಬಿಬಿ ಕಾಲೇಜು ಆಗಿತ್ತು. ಸ್ಪರ್ಧಿಗಳು ಕಾಲೇಜು ದಿನಗಳನ್ನ ನೆನಪು ಮಾಡಿದ್ರು. ವೀಕ್ಷಕರಿಗೂ ಭರ್ಜರಿ ಮನರಂಜನೆ ಸಿಕ್ಕಿತ್ತು. ಈ ಟಾಸ್ಕ್‌ ಜೊತೆಗೆ ಬಿಗ್‌ಬಾಸ್‌ ಕ್ಯಾಪ್ಟನ್ಸಿ ಓಟಕ್ಕೆ ಬರಲು ಟಾಸ್ಕ್‌ವೊಂದನ್ನ ನೀಡಿದ್ದರು. ಈ ರೇಸ್‌ನಲ್ಲಿ ಇದ್ದಿದ್ದು ಕಾವ್ಯ ಶೈವ, ಅಭಿಷೇಕ್, ಧನುಷ್ ಮತ್ತು ಜಾಹ್ನವಿ. ಈ ಟಾಸ್ಕ್‌ನಲ್ಲಿ ರಕ್ಷಿತಾ ಚೆನ್ನಾಗಿ ಆಟ ನಿಭಾಯಿಸಿ ವೀಕ್ಷಕರ ಗಮನ ಸೆಳೆದರು. ಅದರ ಮಧ್ಯೆ ಸ್ವಲ್ಪ ಧ್ರುವ್‌ ಅವರ ಆಟ ಕೂಡ ಇಂಟ್ರಸ್ಟಿಂಗ್‌ ಆಗಿ ಕಂಡಿತ್ತು. ಆದರೆ ಅಭಿಷೇಕ್‌ಗೆ ಮಾತ್ರ ಕ್ಯಾಪ್ಟನ್ಸಿ ರೇಸ್‌ ಮಿಸ್‌ ಆಯ್ತು. ಕೊನೆಗೂ ಧನುಷ್‌ ಸ್ಟೂಡೆಂಟ್ ಆಫ್ ದಿ ವೀಕ್ ಎಂದು ಅನೌನ್ಸ್‌ ಮಾಡಲಾಯ್ತು.

ಇದಾದ ಬಳಿಕ ಧನುಷ್‌ ಹಾಗೂ ರಾಘು ನಡುವೆ ಕ್ಯಾಪ್ಟನ್‌ ಆಗಲು ಸ್ಪರ್ಧೆ ನಡೆಯಿತು. ಇವರಿಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡುವ ಚಾನ್ಸ್‌ ಉಳಿದ ಸ್ಪರ್ಧಿಗಳಿಗೆ ನೀಡಿದ್ದರು. ಅದರಂತೆ ತಮ್ಮ ಇಚ್ಛೆಯ ಸ್ಪರ್ಧಿಯನ್ನು ಮನೆಯ ಸದಸ್ಯರು ಆಯ್ಕೆ ಮಾಡಿದರು. ರಘು ಅವರನ್ನು ಗಿಲ್ಲಿ ಮತ್ತು ಮಲ್ಲಮ್ಮ ಮಾತ್ರ ಸೆಲೆಕ್ಟ್‌ ಮಾಡಿದ್ದರು. ಉಳಿದ 13 ಸ್ಪರ್ಧಿಗಳು ಧನುಷ್‌ ಅವರನ್ನು ಆಯ್ಕೆ ಮಾಡಿದರು. ಅಂತಿಮವಾಗಿ ಹೆಚ್ಚು ವೋಟ್‌ ಪಡೆದು ಧನುಷ್‌ ಈ ವಾರ ಮನೆಯ ಕ್ಯಾಪ್ಟನ್‌ ಆಗಿ ಹೊರಹೊಮ್ಮಿದ್ದಾರೆ.

ಕಾವ್ಯ ಶೈವ, ಸೂರಜ್ ಸಿಂಗ್, ರಕ್ಷಿತಾ ಶೆಟ್ಟಿ, ಕಾಕ್ರೋಚ್ ಸುಧಿ, ರಿಷಾ, ರಾಶಿಕಾ ಶೆಟ್ಟಿ, ಮಾಳು ನಿಪನಾಳ್, ಚಂದ್ರಪ್ರಭ, ಸ್ಪಂದನಾ, ಅಶ್ವಿನಿ ಗೌಡ, ಜಾಹ್ನವಿ, ಧನುಷ್‌ಗೆ ವೋಟ್‌ ಹಾಕಿದರು. ಅದರಲ್ಲೂ ಗಿಲ್ಲಿ ಮಾತ್ರ ರಘು ಅವರಿಗೆ ವೋಟ್‌ ಹಾಕಿ , ಕಳೆದ ವಾರ ಕ್ಯಾಪ್ಟನ್ ಆಗಿ ಮನೆಯನ್ನು ಚೆನ್ನಾಗಿ ನೋಡಿಕೊಂಡಿದ್ದಾರೆ. ಕ್ಯಾಪ್ಟನ್ಸಿಯನ್ನು ಚೆನ್ನಾಗಿ ನಿಭಾಯಿಸಿದರು ಎಂದು ಕಾರಣ ನೀಡಿದರು.

Shwetha M